ಕೆಂಪು ಲಂಗದವಳು

ಗೆಳೆತನ ಎಂಬುದು
ಕುಡಿಸುವುದರಲ್ಲಿ ಇಲ್ಲ
ಬಿಡಿಸುವುದರಲ್ಲಿ ಇದೆ

* * * * * * * * * * * * * * * * * *

ಎಲ್ಲರ ಮನೆ ದೋಸೆ ತೂತೇ
ನೀರುದೋಸೆಯಲ್ಲಿ ಮಾತ್ರ
ತೂತಿನ ಸುತ್ತಾ ದೋಸೆ

* * * * * * * * * * * * * * * * * *

ಎಲ್ಲಾ ನೋವು ಶಮನಗೊಳಿಸುವ
ನೋವುನಿವಾರಕ ಗುಳಿಗೆ ಗೆ
ಪ್ರೀತಿ ಸೋತಾಗ ಕೆಲಸ ಮಾಡಲು ಗೊತ್ತಿಲ್ಲ

* * * * * * * * * * * * * * * * * *

ಬರೀ ಬೇಲಿಯ ಹೂವಲ್ಲ
ಕೆಂಪು ಲಂಗದ ಕೋಮಲೆ
ದಾಸವಾಳ ಅವಳು

* * * * * * * * * * * * * * * * * *

ಬಿದಿಗೆ ಚಂದಿರ ಕೊಳದಲ್ಲಿ ನಗುತ್ತಿದ್ದ
ಬಿಂದಿಗೆಯಲ್ಲಿ ತುಂಬಿಕೊಂಡ
ಅವಳು ಚಂದ್ರಶೇಖರನ ಭಕ್ತೆ

* * * * * * * * * * * * * * * * * *

ಹಿತವಾಗಿ ಹದವಾಗಿ
ab pacchu
moodubidire


Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ