ಹೋಳಿಗೆ ಪಾಯಸ..
ಪಾಯಸ ತಣಿದ ಮೇಲೆ ಒಂದು ಚಿಕ್ಕ ಲೋಟದಲ್ಲಿ ಹಾಕಿಕೊಂಡು,ಸೈಡಿಗೆ ಹೋಗಿ ಸ್ಪೂನ್ ನಲ್ಲಿ ಒಂದೊಂದೇ ತುತ್ತು ತುಟಿಗಂಟದಂತೆ ತಿನ್ನುವುದಕ್ಕಿಂತಲೂ....
ಕೈ ಬೆರಳುಗಳಲ್ಲಿ ಹಾಗೇ ಬಿಸಿ ಬಿಸಿ ಪಾಯಸವನ್ನು ಮೆತ್ತಿಕೊಂಡು..ಆ ಬಿಸಿ ಆರುವ ಮೊದಲೇ ಪಾಯಸದ ಪರಿಮಳವನ್ನು ಆಘ್ರಾಣಿಸಿಕೊಂಡು,ಹಾಗೇ ಕಣ್ಣು ಮುಚ್ಚಿ ನಿಧಾನಕ್ಕೆ ಬೆರಳು ಚೀಪಿ ತಿಂದರೆನೇ.. ಅದು ಪಾಯಸ ಇಲ್ಲವೇ ಪರಮಾನ್ನ ಅನ್ನಿಸಿಕೊಳ್ಳುವುದು..😋 ಪಾಯಸದ ಪರಮ ಸುಖ ಇರುವುದು ಇದರಲ್ಲಿಯೇ😊
ಒಂದೆರಡು ಬೇಳೆ ಹೋಳಿಗೆ ಮೇಲೆ ಬಿಸಿಯಾದ ಪಾಯಸ ಹೊಯ್ದುಕೊಂಡು ಹಾಗೇ ಕೈ ಬೆರಳುಗಳಲ್ಲಿಯೇ ಅದನ್ನು ಹದವಾಗಿ ಕಿವುಚಿ ತಿನ್ನುತ್ತಿದ್ದರೆ... ಉಳಿದ ಭಕ್ಷ್ಯಗಳು ಕೂಡ ನಾಚಿ ನೀರಾಗಬೇಕು😊
ತಿಂದರೆ ಉದರ ಮಾತ್ರವಲ್ಲ... ಆತ್ಮಕ್ಕೂ ತೃಪ್ತಿ ಆಗುವಂತೆ ತಿಂದು ತೇಗಬೇಕು😊😊
ಏನಂತೀರಿ..
ab pacchu

Comments
Post a Comment