ಒಂದು ಶಿಕಾರಿಯ ಕಥೆ
ಇಲ್ಲಿ ಕೋವಿ ಕೆಲವೊಮ್ಮೆ ಮಾತಾಡುತ್ತದೆ.
ಇನ್ನು ಕೆಲವೊಮ್ಮೆ ಇಲ್ಲ!
ಕೋವಿ ಮಾತಾಡಿದಾಗಲೂ ಒಂದು ಕಥೆ ಇದೆ.
ಕೋವಿ ಮಾತಾಡದೇ ಇದ್ದಾಗಲೂ ಬೇರೆಯೇ ಒಂದು ಕಥೆ ಇದೆ!
ಬೇಟೆ ಬಿದ್ದಾಗಲೂ ಒಂದು ಕಥೆ ಇದೆ..
ಬಿದ್ದ ಬೇಟೆಯೇ ಎದ್ದು ನಿಂತಾಗಲೂ ಇನ್ನೊಂದು ಅತ್ಯಧ್ಭುತ ಕಥೆ ಇದೆ!!
ಹೌದು ಸ್ವಲ್ಪವೂ ಗೆಸ್ ಮಾಡಲು ಅವಕಾಶವೇ ನೀಡದ.... ಕೂತೂಹಲವನ್ನು ಕೊನೆಯ ಫ್ರೇಮಿನವರೆಗೂ ಕಾಯ್ದಿರಿಸುವ ಬಹಳ ಸುಂದರವಾದ ಮೂವಿ ಇದು.
ಇಲ್ಲಿ ಎಲ್ಲವೂ ಇದೆ.
ಆದರೆ ಎಲ್ಲವನ್ನೂ ಬಿಡಿಸಿ ಬಿಡಿಸಿ ಹೇಳುವುದಿಲ್ಲ.
ಮೆದುಳಿಗೆ ಮೇವು ಕೊಡುತ್ತಾರೆ.
ಯೋಚನೆಗೆ ಹಚ್ಚುತ್ತಾರೆ..
ನಿಮ್ಮ ಎಲ್ಲಾ ಯೋಚನೆಗಳನ್ನು ಸುಳ್ಳು ಮಾಡಿ..
ಕೊನೆಗೆ ಬಹುವಾಗಿ ಕಾಡುವಂತೆ ಕಥೆ ಮುಗಿಸುತ್ತಾರೆ.
ಕಥೆಯೇ ನಾಯಕನಾಗುವ ನಮ್ಮ ಕನ್ನಡ ಮೂವಿ ಇದು.
ಏನೇ ಹೇಳಿ.. ಇಂತಹ ಚಿತ್ರಗಳು ಗೆಲ್ಲಬೇಕು. ❤️ಇಷ್ಟವಾಯಿತು.
ಇಂತಹ ಮೂವಿಗಳು ಕನ್ನಡದಲ್ಲಿ ಇನ್ನಷ್ಟು ಬರಲಿ.
ಇಲ್ಲಿ ಕುಣಿಯದ ಹುಲಿವೇಷ ಇದೆ,ಬೇಟೆ ಬಾರದ ಬೇಟೆಗಾರ ಇದ್ದಾನೆ,ಹಳ್ಳಿಯ ಚಂದದ ಹುಡುಗಿ ಇದ್ದಾಳೆ,ಯಕ್ಷಗಾನದ ಹುಡುಗನೂ ಇದ್ದಾನೆ, ಅವಶ್ಯವಾಗಿ ಅವನು ಬಹಳ ಚೆನ್ನಾಗಿಯೇ ಕುಣಿಯುತ್ತಾನೆ,ತಣ್ಣನೆಯ ನದಿ ಕಥೆಯ ಹಲವು ಘಟನೆಗಳಿಗೆ ಮೂಕ ಸಾಕ್ಷಿ,..ತೋಟ,ಗುಡ್ಡ,ಹಚ್ಚ ಹಸಿರು ಎಲ್ಲವೂ ಹಬ್ಬ.
ಕಥೆ ಹೇಳಲಾರೆ... ನೋಡಿ ಹಾಗೇ ಕಳೆದುಹೋಗಿ ಬಿಡಿ. ನನಗಂತು ಇದು ಇತ್ತೀಚೆಗೆ ಕನ್ನಡದಲ್ಲಿ ನೋಡಿದ ಅತ್ಯುತ್ತಮ ಮೂವಿ ಆಗಿದೆ ❤️
I jus loved it😍
Owsum Script work👌👌
ಸಚಿನ್ ಶೆಟ್ಟಿ ನಿರ್ದೇಶನದ ಈ ಹೊಸ ಮೂವಿಯಲ್ಲಿ ಪ್ರಮೋದ್ ಶೆಟ್ಟಿ,ಸಿರಿ ಪ್ರಹ್ಲಾದ್, ಪ್ರಸಾದ್ ಚೆರ್ಕಾಡಿ ಮುಂತಾದವರು ಅಭಿನಯಿಸಿದ್ದಾರೆ.
ಪಚ್ಚುಫಿಲಂಗಳು
Ab

Comments
Post a Comment