ಚಳಿ ಬಿಟ್ಟು ಆಡಬೇಕಿದೆ
ಹೇಗೆ ಆಸ್ಟ್ರೇಲಿಯವನ್ನು ಆಸ್ಟ್ರೇಲಿಯದಲ್ಲಿ ಸೋಲಿಸುವುದು ಕಷ್ಟವೋ ಹಾಗೇ ಭಾರತವನ್ನು ಭಾರತದಲ್ಲಿ ಸೋಲಿಸುವುದು ಕೂಡ ತುಂಬಾ ಕಷ್ಟವೇ.
ಆಸ್ಟ್ರೇಲಿಯದ ಅತ್ಯದ್ಭುತ ಗೆಲುವಿನಿಂದ ಸಂತೋಷಗೊಂಡಿದ್ದ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಇಂದಿನ ಸೋಲು ಖಂಡಿತವಾಗಿಯೂ ಬೇಜಾರು ಉಂಟು ಮಾಡದೇ ಇರದು. ಆದರೆ ಈ ಪಂದ್ಯದಲ್ಲಿ ಎಲ್ಲಾ ರೀತಿಯಿಂದಲೂ ನೋಡಿದರೂ ಇಂಗ್ಲೆಂಡ್ ತಂಡವೇ ಗೆಲ್ಲುವ ಅರ್ಹ ತಂಡವಾಗಿತ್ತು.
ಭಾರತೀಯ ಉಪಖಂಡದಲ್ಲಿ ಟಾಸ್ ಸೋತು ಬಿಟ್ಟರೆ, ಅರ್ಧಕರ್ದ ಆ ಪಂದ್ಯ ಸೋತಂತೆಯೇ.. ಏಕೆಂದರೆ ಇಲ್ಲಿಯ ಪಿಚ್ ಗಳಲ್ಲಿ ಕೊನೆಯ ದಿನ ಬ್ಯಾಟು ಬೀಸುವುದು ಅಷ್ಟು ಸುಲಭದ ಮಾತಲ್ಲ.ಅದು ಬೇಕಿದ್ದರೆ ಕೊನೆಯ ಇನ್ನಿಂಗ್ಸ್ ಭಾರತ ತಂಡ ಆಡಿದರೂ ಕೂಡ ಕಷ್ಟವೇ.ಇಂದು ಕೂಡ ಆಗಿದ್ದು ಅದೇ.
ಇಂಗ್ಲೆಂಡ್ ತಂಡ ಮೊದಲಿನಿಂದಲೂ ರಕ್ಷಣಾತ್ಮಕವಾಗಿಯೇ ಆಡುತ್ತಾ ಹೋದಾಗ ಇವರು ಗೆಲ್ಲಲು ಬಂದಿರುವುದಕ್ಕಿಂತಲೂ ಹೆಚ್ಚಾಗಿ ಡ್ರಾ ಮಾಡಿಕೊಳ್ಳಲು ಬಂದಿರುವಂತೆ ಕಾಣಿಸುತ್ತಿದೆ ಎಂದು ಅನ್ನಿಸಿದರೆ ತಪ್ಪೇನು ಇಲ್ಲ ಬಿಡಿ.. ಆದರೆ ಮೊದಲ ದಿನದಿಂದಲೂ ಮಂಕಾಗಿದ್ದ James Anderson ಐದನೇ ದಿನ ಪಂದ್ಯದ ಗತಿಯನ್ನೇ ಬದಲಾಯಿಸಿ ಬಿಟ್ಟಿದ್ದ.ಆಹಾ.. ಅದೆಂತಹ ಸುಂದರವಾದ ಎಸೆತ,ಶುಭ್ಮನ್ ಗಿಲ್ ಹಾಗೂ ರಹಾನೆಯ ಬ್ಯಾಟ್ ಪ್ಯಾಡುಗಳ ಮಧ್ಯೆ ನುಗ್ಗಿದ ಆ ಎರಡು ಚೆಂಡು ವಿಕೆಟ್ ಅನ್ನು ಗಾಳಿಯಲ್ಲಿ ಹಾಗೇ ತಲೆಗೆರೆಯಂತೆ ತಿರುಗಿಸಿ ಬಿಟ್ಟಿತ್ತು.ತಾನು ಏಕೆ ವಿಶ್ವದ ಸರ್ವ ಶ್ರೇಷ್ಠ ವೇಗದ ಬೌಲರ್ ಎಂದು ಮತ್ತೊಮ್ಮೆ ನಿರೂಪಿಸಿದ್ದ James Anderson.ಆ ನಂತರ ಪಂದ್ಯದ ಗತಿಯೇ ಬದಲಾಗಿ ಹೋಗಿತ್ತು.
ಸದ್ಯಕ್ಕೆ ಭಾರತೀಯ ತಂಡ ಚಿಂತೆ ಮಾಡಬೇಕಾಗಿರುವುದು ಟೆಸ್ಟ್ ಪಂದ್ಯಗಳ ವಿಶ್ವ ಕಪ್ ಎಂದೇ ಪರಿಗಣಿಸಲ್ಪಟ್ಟಿರುವ ಐಸಿಸಿಯ ಚೊಚ್ಚಲ ಟೆಸ್ಟ್ ಚಾಂಪಿಯನ್ ನ ಬಗ್ಗೆ.ಭಾರತ ಈ ಪಂದ್ಯ ಆರಂಭವಾಗುವುದಕ್ಕಿಂತ ಮೊದಲು ಪಾಯಿಂಟ್ ಟೇಬಲ್ ನಲ್ಲಿ ಪ್ರಥಮ ಸ್ಥಾನದಲ್ಲಿತ್ತು.ಇಂಗ್ಲೆಂಡ್ ತಂಡ ನಾಲ್ಕನೇ ಸ್ಥಾನದಲ್ಲಿ ಇತ್ತು.ಆದರೆ ಈಗ ಭಾರತ ಈ ಸೋಲಿನೊಂದಿಗೆ ನಾಲ್ಕನೇ ಸ್ಥಾನಕ್ಕೆ ಜಾರಿ ಬಿಟ್ಟಿದೆ ಮತ್ತು ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದೆ.
ಭಾರತ ಏನಾದರೂ ಟೆಸ್ಟ್ ಚಾಂಪಿಯನ್ ನ ಫೈನಲ್ ನಲ್ಲಿ ಆಡದೇ ಹೋದರೆ.. ಅದಕ್ಕಿಂತ ಬೇಜಾರು ಮತ್ತೊಂದು ಇಲ್ಲ.ಏಕೆಂದರೆ ಈ ಫಾರ್ಮೆಟ್ ಆರಂಭವಾದಗಿನಿಂದಲೂ ಮೊದಲ ಸ್ಥಾನದಲ್ಲಿ ಎಲ್ಲರ ಅಂಕಗಳಿಂದಲೂ ಬಹಳ ಎತ್ತರದಲ್ಲಿ ವಿರಾಜಮಾನವಾಗಿದ್ದು ಭಾರತವೇ. ಆದರೆ ಕೋವಿಡ್ ನ ನಂತರದಲ್ಲಿ ಬದಲಾದ ನಿಯಮದ ಕಾರಣದಿಂದ (Points ಬದಲಿಗೆ Percentage of Points) ಇತರ ತಂಡಗಳಿಗೆ ಆ ನಿಯಮಗಳು ವರದಾನವಾಗಿ ಬಿಟ್ಟರೆ ಭಾರತಕ್ಕೆ ಇದು ಸದ್ಯಕ್ಕೆ ಕಂಟಕವಾಗಿದೆ.
ಆದರೆ ಭಾರತಕ್ಕೆ ಇನ್ನೂ ಅವಕಾಶವಿದೆ. ಈ ಸರಣಿಯಲ್ಲಿ ಕೇವಲ ಒಂದು ಪಂದ್ಯ ಮಾತ್ರ ಸೋತು ಈ ಸರಣಿ ಜಯಿಸಬೇಕಾಗಿದೆ. ಹಾಗಂತ ಭಾರತಕ್ಕೆ ಇಂಗ್ಲೆಂಡ್ ಅಷ್ಟೊಂದು ಸುಲಭವಾಗಿ ಖಂಡಿತವಾಗಿಯೂ ಮಣಿಯದು. ಭಾರತ ಚಳಿ ಬಿಟ್ಟು ಆಡಬೇಕಿದೆ... ಮೊದಲು ಎನ್ನುವುದು ಯಾವತ್ತೂ ಬಹುಕಾಲ ನೆನಪಿನಲ್ಲಿ ಉಳಿದು ಬಿಡುತ್ತದೆ. ಮೊದಲ ಟಿ-ಟ್ವೆಂಟಿ ವಿಶ್ವ ಕಪ್ ವಿಜೇತ ತಂಡ ಭಾರತ ಎಂದು ಹೇಳಲು ಹೇಗೆ ತುಂಬಾ ಖುಷಿಯಾಗುತ್ತದೋ.. ಅದೇ ರೀತಿ ಚೊಚ್ಚಲ ಟೆಸ್ಟ್ ಚಾಂಪಿಯನ್ ನ ವಿಜೇತ ತಂಡ ಕೂಡ ಭಾರತವೇ ಆಗಿರಬೇಕು ಎಂಬ ಆಸೆ ಅತಿಯಾಗಿದೆ..
Ind Vs Eng
1st Test - Chennai
2021
#Cricket_Review
ab

Comments
Post a Comment