ಅವಳು ಕೊಂಡ ಹೋದ ಕೊಡೆ

 


ಅದು ನಂತೂರು ಸರ್ಕಲ್. 
ಒಬ್ಬನೇ ನಿಂತಿದ್ದೆ. ಜಿಟಿ ಜಿಟಿ ಮಳೆ ನಿಧಾನವಾಗಿ ಬಿರುಸಾಗ ತೊಡಗಿತು. ಕೊಡೆ ಅರಳಿಸಿ ಹಾಗೇ ಅಲ್ಲೇ ನಿಂತುಕೊಂಡೆ. 
ಮಳೆ ಮತ್ತಷ್ಟು ಜೋರಾಯಿತು.

ಆ  ಜೋರು ಮಳೆ ಗೆ ನನ್ನ ಕೊಡೆ ಉಲ್ಟಾ ಪಲ್ಟ ಆಗಿ ದೋಣೆಯಂತಾಯಿತು.
ಅವಳು ಯಾರೋ ನನಗೆ ಗೊತ್ತಿಲ್ಲ, ನನ್ನ ಅವಸ್ಥೆ ನೋಡಿ ಅವಳಿಗೆ ನಗು ತಡೆದುಕೊಳ್ಳಲು ಆಗಲೇ ಇಲ್ಲ .ಹಾಗೆಯೇ  ಜೋರಾಗಿ ನಕ್ಕು ಬಿಟ್ಟಲು. ನಕ್ಕಾಗ ಮಾತ್ರ ಅವಳು ಮತ್ತಷ್ಟು ಸುಂದರವಾಗಿ ಕಂಡಳು. 
ಕೊಡೆ ಸರಿ ಮಾಡಿಕೊಂಡೆ.

ಮಳೆ ಪುನಃ ಇನ್ನೂ ಜೋರಾಗಿ ಬರತೊಡಗಿತು. ಅದರ ಜೊತೆಗೆ ಗಾಳಿಯು  ಕೂಡ . 
ಈಗ ಅವಳ ಕೊಡೆ ಉಲ್ಟಾ ಪಲ್ಟ ಆಗುವ ಸರದಿ. ಆದರೆ ಅವಳ ಕೊಡೆ ಉಲ್ಟಾ ಪಲ್ಟ ಆದದ್ದು ಮಾತ್ರ ಅಲ್ಲ ಅಷ್ಟು ದೂರಕ್ಕೆ ಹಾರಿ ಹೋಯಿತು,ಎಷ್ಟು ದೂರ ಎಂದರೆ ಮತ್ತೆ ವಾಪಸ್ ಹೆಕ್ಕಿ ತರಲಾರದಷ್ಟು ದೂರಕ್ಕೆ..!

ಆದರೆ ನಾನು ಅವಳ ಸ್ಥಿತಿ ನೋಡಿ ನಗಲಿಲ್ಲ. ಎಲ್ಲರೂ ಅವಳನ್ನೇ ನೋಡುತ್ತಿದ್ದರು.ಕೆಲವರು ನಕ್ಕರು, ಆದರೆ ಯಾರೊಬ್ಬರೂ ಸಹಾಯ ಮಾಡಲು ಮಾತ್ರ ಮುಂದೆ ಬರಲಿಲ್ಲ.ಆದರೆ ನನ್ನ ಮನ ಮಿಡಿಯಿತು, ಹೃದಯ ಸಮುದ್ರ ಕಲುಕಿತು.. ಅಸಹಾಯಕರನ್ನು ಕಂಡರೆ ಅದರಲ್ಲೂ ಮಳೆಯಲ್ಲಿ ಕೊಡೆಯಿಲ್ಲದೆ ನೆನೆಯುವ ಸುಂದರ ಹುಡುಗಿಯ ಕಂಡರೆ ನನ್ನ ಕರುಳು ಯಾವಾಗಲೂ ಕಿತ್ತು ಬರುತ್ತದೆ.Helping  Nature ಅನ್ನುವುದು ನನ್ನ ಬ್ಲಡ್ ನಲ್ಲೇ ಬಂದಿತ್ತು...

ನಾನು  ಸೀದಾ ಅವಳ ಬಳಿಗೆ ಹೋದೆ.ಅವಳು ತಲೆ ತಗ್ಗಿಸಿ ನಿಂತಿದ್ದಳು. ಅಲ್ಲೇ ಕೆಳಗೆ ಬಿದ್ದಿದ್ದ ಅವಳ  ವೇಲ್ ಅನ್ನು ಅವಳಿಗೆ ಹೊದಿಸಿದೆ. ಹಾಗೆಯೇ ನನ್ನ ಕೊಡೆ ಯನ್ನು ಸಹ ಅವಳಿಗೇ  ನೀಡಿದೆ...ನಿಧಾನವಾಗಿ ತಲೆ ಮೇಲೆತ್ತಿದ ಹುಡುಗಿ ಯ ಕಣ್ಣ  ತುಂಬಾ ನೀರು.ಅದು ನನ್ನ ಹೊರತು ಬೇರೆಯವರಿಗೆ ಯಾರಿಗೂ ಅಲ್ಲಿ ಕಾಣಲಿಲ್ಲ..ಏಕೆಂದರೆ ಸಹಾಯ ಎಂದರೆ   ಏನೆಂದೇ ಗೊತ್ತಿಲ್ಲದ ಅವರೆಲ್ಲರ  ಮನಸ್ಸು ಅಲ್ಲಿ ಕಲ್ಲಾಗಿತ್ತು. ಆ ಬಂಡೆ ಕಲ್ಲಿನಂತಹ ಮನಸ್ಸುಗಳ ಮೇಲೆ ಅಲ್ಲಿ ಮಳೆ ಜೋರಾಗಿ ಸುರಿಯುತ್ತಿತು..!

ಆದರೆ ಅಲ್ಲಿಯವರೆಗೆ ಸುಮ್ಮನೆ ನೋಡುತ್ತಿದ್ದ ಆ ಜನರಿಗೆ ನಾನು ಮಾಡಿದ್ದು ಇಷ್ಟ ಆಯಿತು, ಕೆಲವರು ಕ್ಲಾಪ್ಸ್  ಹೊಡೆದರು, ಇನ್ನು ಕೆಲವರು ವಿಶಲ್ ಹೊಡೆದರು. ನನಗೆ ಹೀರೋ ಫೀಲ್ ಬಂದಂತಾಯಿತು.  ಸ್ಲೋ ಮೊಷನ್ ನಲ್ಲಿ ನಿಧಾನವಾಗಿ ಹಿಂದೆ ತಿರುಗಿದೆ. ಮಳೆ ಮತ್ತಷ್ಟು ಜೋರಾಯಿತು. ಅವಳು ಎನ್ನುವ ಆ ಹುಡುಗಿಯ ಹೆಸರು ನನಗೆ ಗೊತ್ತಿಲ್ಲ, ನನಗೆ ಬೇಕಾಗಿಯೂ ಇಲ್ಲ..
ಹಾಗೇ  ಮಳೆಯಲ್ಲಿ ನೆನೆಯುತ್ತಾ ನೆನೆಯುತ್ತಾ ಮನೆಯ ತನಕ ನಡೆದುಕೊಂಡೇ ಬಂದೆ. ಮೊಬೈಲ್ ಆಗ ರಿಂಗ್ ಆಗ ತೊಡಗಿತು,ರಿಂಗ್ ಟೋನ್ ಕೂಡ " ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ.. " ಎಂದೇ ಹಾಡುತ್ತಿತ್ತು.... 😌😌

ಹೀಗೆ ನನ್ನ Helping Nature ನ ಮರ್ಲ್ ನಿಂದ,ದೊಡ್ಡ ಹೀರೋ ಆಗ್ಲಿಕ್ಕೆ ಹೋಗಿ ಅನ್ಯಾಯವಾಗಿ ಒಂದು ಕೊಡೆ ಕಳೆದುಕೊಂಡೆ. ನಾಳೆಗೆ ಕೊಡೆಗೆ ಎಂತ ಮಾಡುವುದಾ ಸಾವ್..ಬೇಕಿತ್ತಾ ಇದೆಲ್ಲಾ ನನಗೆ 😭😓😅😂

" #ಅವಳು_ಕೊಂಡು_ಹೋದ_ಕೊಡೆಯ_ನೆನಪು  "

......................................................................

story by - AB Pacchu,
                 Moodbidri
                 Mangalore(D.K)



Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ