ಐದು ಬಣ್ಣಗಳ ಆ ಒಂದು ಬಾವುಟ..!
ಅವರೊಬ್ಬರು ನಿವೃತ್ತ ಸೈನ್ಯಾಧಿಕಾರಿ.ರಾಷ್ಟ್ರೀಯ ಪ್ರಮುಖ ಸುದ್ದಿ ವಾಹಿನಿಯೊಂದರಲ್ಲಿ ಕಥೆ ಹೇಳುತ್ತಿದ್ದರು.
ಕಥೆ ಪೂರ್ತಿ ಕೇಳಿದ ಮೇಲೆ ನಿಮ್ಮೊಂದಿಗೆ ಹಂಚಿಕೊಳ್ಳದೇ ಇರಲು ಮನಸ್ಸು ಬರಲಿಲ್ಲ.
ಹಾಗಾದರೆ ಕಥೆ ಕೇಳಿ,
ಅದೊಂದು ಶಾಲೆ, ಅಲ್ಲಿಯ ಟೀಚರ್ ಮಕ್ಕಳಿಗೆ ಪ್ರಶ್ನೆ ಕೇಳುತ್ತಿದ್ದರು.
ಅದರಲ್ಲಿ ಒಂದು ಪ್ರಶ್ನೆ ಹೀಗಿತ್ತು. "ಮಕ್ಕಳೇ ಭಾರತ ದ ಧ್ವಜ ದಲ್ಲಿ ಎಷ್ಟು ಬಣ್ಣಗಳಿವೆ?".
"ಮೂರು ಬಣ್ಣಗಳಿವೆ...
ಕೇಸರಿ, ಬಿಳಿ, ಹಸಿರು."
ಎಂದು
ಹೆಚ್ಚಿನ ಮಕ್ಕಳು ಸರಿಯಾದ ಉತ್ತರವನ್ನೇ ಕೊಟ್ಟರು.
ಆದರೆ ತರಗತಿಯ ಮೂಲೆಯಲ್ಲಿದ್ದ ಕುಳಿತಿದ್ದ ಆ ಒಬ್ಬ ಹುಡುಗ ಮಾತ್ರ ಸುಮ್ಮನಿದ್ದ.ಟೀಚರ್ ಅವನನ್ನೇ ಕೇಳಿದರು." ನೀನು ಹೇಳು, ಭಾರತದ ಧ್ವಜದಲ್ಲಿ ಎಷ್ಟು ಬಣ್ಣಗಳಿವೆ.. "
ಹುಡುಗ ಎದ್ದು ನಿಂತು ಹೇಳಿದ".. ಐದು!! "
ಎಲ್ಲರೂ ಹುಡುಗನನ್ನೇ ಒಮ್ಮೆ ನೋಡಿದರು.
ಟೀಚರ್ ಮುಂದುವರಿದು ಕೇಳಿದರು ".. ಹಾಗಾದರೆ ಆ ಐದು ಬಣ್ಣಗಳು ಯಾವುವು ಒಮ್ಮೆ ಹೇಳುವೆಯಾ ..?"
ಹುಡುಗ ಹೇಳಿದ "ಎಲ್ಲರೂ ಹೇಳುವಂತೆ ಕೇಸರಿ ಖಂಡಿತವಾಗಿಯೂ ಇದೆ.
ಬಿಳಿಯ ಬಣ್ಣ ನಡುವಿನಲ್ಲಿ ಇದೆ.
ಹಸಿರು ಅದರ ಕೆಳಗಿದೆ.
ನಡುವಿನ ಬಿಳಿಯ ಬಣ್ಣದ ಮೇಲೆ ನೀಲಿ ಬಣ್ಣದ ಅಶೋಕ ಚಕ್ರವಿದೆ...
ಕೊನೆಯದಾಗಿ,ಕೆಂಪು ಬಣ್ಣ ಭಾರತದ ಬಾವುಟ ದ ತುಂಬೆಲ್ಲಾ ಇದೆ!"
ಮಕ್ಕಳು ಮಾತ್ರ ಅಲ್ಲ ಟೀಚರ್ ಕೂಡ ಒಂದು ಕ್ಷಣ ತಬ್ಬಿಬಾದರು. ಟೀಚರ್ ನಡುಗುವ ಧ್ವನಿಯಲ್ಲಿ ಕೇಳಿದರು "ಮಗೂ .. ಅಂತಹ ಭಾರತ ದ ಧ್ವಜ ವನ್ನು, ನೀನೆಲ್ಲಿ ನೋಡಿದೆ .."
ಹುಡುಗ ಶಾಂತ ಚಿತ್ತವಾಗಿ ಹೇಳಿದ "ಟೀಚರ್ ನನ್ನ ತಂದೆ ಒಬ್ಬ ಯೋಧ , ಒಂದು ದಿನ ನನ್ನ ತಂದೆ ಯುದ್ಧ ಭೂಮಿಯಲ್ಲಿ ಹುತಾತ್ಮರದರು. ನನ್ನ ತಂದೆ ಯ ಮೃತ ದೇಹವನ್ನು ಭಾರತ ದ ತ್ರಿವರ್ಣಧ್ವಜ ದಲ್ಲಿ ಸುತ್ತಿ ತರಲಾಯಿತು. ನಮ್ಮ ಮನೆಯ ಅಂಗಳದಲ್ಲಿಯೇ ತಂದೆಯ ದೇಹವನ್ನು ಮಲಗಿಸಿದ್ದರು. ಟೀಚರ್ ಆಗ ನಾನು ಕೆಂಪು ಬಣ್ಣವನ್ನು ಭಾರತ ದ ಬಾವುಟ ದ ತುಂಬೆಲ್ಲಾ ನೋಡಿದೆ, ಮತ್ತು ಅದು ನನ್ನ ತಂದೆಯ ರಕ್ತವಾಗಿತ್ತು...!! "
ಟೀಚರ್ ಗೆ ಒಂದು ಕ್ಷಣ ಮಾತು ಹೊರಡಲಿಲ್ಲ,ಕಣ್ಣಲ್ಲಿ ನೀರು ಜಿನುಗಿತ್ತು !
😢😭
ಟೀವಿ ನಿರೂಪಕಿ ಕೂಡ ಮಾತು ಮರೆತಂತಿತ್ತು.
ಟಿವಿಯಲ್ಲಿ ಸ್ಟೋರಿ ಹೇಳುತ್ತಿದ್ದ ಸೈನ್ಯಾಧಿಕಾರಿಯ ಧ್ವನಿಯೂ ಕೂಡ ಗದ್ಗತಿತವಾಗಿತ್ತು..
ಸೈನ್ಯಾಧಿಕಾರಿ ಮುಂದುವರಿದು ಹೇಳಿದರು
" ಅಂತಹ ಐದು ಬಣ್ಣ ದ ಬಾವುಟ ವನ್ನು ನೋಡುವ ಅವಕಾಶ ಭಾರತದ ಯಾವುದೇ ಸೈನಿಕನ ಮಕ್ಕಳಿಗೆ ಬರದಿರಲಿ, ಇನ್ನಾದರೂ ಇದೆಲ್ಲಾ ಕೊನೆಯಾಗಲಿ!.. ಪಾಪಿ ಪಾಕಿಸ್ತಾನಕ್ಕೆ ಭಾರತ ತಕ್ಕ ಪಾಠ ಕಲಿಸಲಿ 😡"
ಭಾರತೀಯ ಸೈನಿಕರ, ಅವರ ಮಕ್ಕಳ,ಅವರ ಮಡದಿಯರ ಮತ್ತು ಅವರ ಹೆತ್ತವರ ಕಥೆಗಳು ಎಲ್ಲವೂ ಹೀಗೆಯೇ.. ಒಂದೋ ದೇಶ ಪ್ರೇಮ ಉಕ್ಕಿಸುತ್ತವೆ, ಇಲ್ಲವೇ ಕಣ್ಣೇರ ಕೋಡಿಯನ್ನೇ ಹರಿಸುತ್ತದೆ!!!
ದೇಶಕ್ಕೊಸ್ಕರ, ನಮಗೋಸ್ಕರ ಬಲಿದಾನ ಗೈದ ನಮ್ಮ ವೀರ ಸೈನಿಕರನ್ನು ಯಾವತ್ತೂ ನೆನೆಯೋಣ,ಗೌರವಿಸೋಣ. ಅದು ನಮ್ಮ ಕರ್ತವ್ಯ 🙏🙏😍😘😘
.....................................................................................
#ಜೈ_ಹಿಂದ್
ab pacchu
moodubidire

Comments
Post a Comment