ಕಪ್ಪೆ ಕೊಳ
ಪ್ರೀತಿಸುವವರಿಗೆ
ಹಸಿವೆಯೇ ಆಗಲ್ಲ
ತಿಂಗಳ ರೇಷನ್
ಮುಗಿಯುವುದೇ ಇಲ್ಲ
* * * * * * * * * * * * * * * * * *
ಕಪ್ಪೆ ಜಿಗಿದಾಗಲೆಲ್ಲ
ಕೊಳದಲ್ಲಿ ನೃತ್ಯ
ಮಾಡಬೇಕಾದವನು ಚಂದಿರ
* * * * * * * * * * * * * * * * * *
ಬೆಣ್ಣೆಗೆ ಕಡ್ಡಿ ಚುಚ್ಚಿ
ಚೆಲ್ಲಿದಂತಿದ್ದರೆ
ಅದರ ಹೆಸರು ಪಾರಿಜಾತ
* * * * * * * * * * * * * * * * * *
ಮಾಸ್ಕ್ ಒಂದು ಇರದಿದ್ದರೆ
ನಾವಿಬ್ಬರು ಒಳ್ಳೆಯ
ಮುತ್ತಿನ ವ್ಯಾಪಾರಿಗಳು
* * * * * * * * * * * * * * * * * *
ನಿಯಮ ಮುರಿಯುವುದಕ್ಕೆ
ಹೆಸರುವಾಸಿ ಮೇ ಫ್ಲವರ್
ಜೂನ್ ನಲ್ಲೂ ಅರಳುತ್ತದೆ
* * * * * * * * * * * * * * * * * *
ಹಿತವಾಗಿ ಹದವಾಗಿ
ab pacchu
moodubidire

Comments
Post a Comment