ಕೃಷ್ಣನ ನಗು

 

ತಾಯಿ ಮತ್ತು ಮಗು ಶ್ರದ್ಧೆಯಿಂದ ಟಿವಿ ನೋಡುತ್ತಿದ್ದರು.


ಮಗು - ಅಮ್ಮ, ಅವನು ಯಾಕೆ ಆ ರೀತಿಯಾಗಿ ಎಲ್ಲರಿಗೂ ಕೋಪ ತರಿಸುವಂತೆ  ನಗುತ್ತಾನೆ.


ತಾಯಿ - ಅವನು ಕೆಟ್ಟವನು, ಅದಕ್ಕಾಗಿ ಅಷ್ಟು ಕೆಟ್ಟದಾಗಿ ನಗುತ್ತಾನೆ! 


ಮಗು - ಯಾರವನು?


ತಾಯಿ - ಅವನ ಹೆಸರು ಶಕುನಿ!


ಮಗು- ಅವನ ನಗು, ನನ್ನ ಹಾಗೆ ನಿಮ್ಮ ಹಾಗೆ.. ಎಲ್ಲರಿಗೂ ಕೂಡ ಇಷ್ಟವಾಗುವುದಿಲ್ಲವೇ


ತಾಯಿ - ಇಲ್ಲ, ಕೆಲವರಿಗೆ ಅವನ ನಗುವೂ ಇಷ್ಟ, ಅವನೂ ಇಷ್ಟ!


ಮಗು - ಯಾರವರು? 


ತಾಯಿ - ಧುರ್ಯೋಧನಾದಿಗಳು..!


ಮಗು - ಹಾಗಾದರೆ ಈ ಜಗದಲ್ಲಿ ಸುಂದರವಾಗಿ ಎಲ್ಲರಿಗೂ ಇಷ್ಟ ಆಗುವಂತೆ ನಗುವವರು ಯಾರೂ ಇಲ್ಲವೇ ಅಮ್ಮಾ ?


ತಾಯಿ - ಯಾಕಿಲ್ಲ, ಒಬ್ಬ ಇದ್ದಾನೆ.


ಮಗು - ಅಮ್ಮಾ.. ಯಾರದು?


ತಾಯಿ - ಅವನ ನಗುವಿನಿಂದಲೇ ನಮ್ಮ ಸಮಸ್ತ ಚಿಂತೆಗಳು,ದುಃಖಗಳು, ನೋವುಗಳು ದೂರವಾಗುವುದು, ಹಸಿವು ಕಾಣೆಯಾಗುವುದು. ಅವನು ಹಾಗೆಯೇ ನಗುತ್ತಿದ್ದರೆ ಎಲ್ಲೆಲ್ಲೂ ಉಲ್ಲಾಸ ಉತ್ಸಾಹದ ಉತ್ಸವವೇ ಜರುಗುವುದು. 


ಮಗು - ಹೌದೇ ಅಮ್ಮ... 


ತಾಯಿ - ಅವನಿಂದಾಗಿ ಕಡೆದಿಟ್ಟ ಗಡಿಗೆಯ ಬೆಣ್ಣೆಗಳು ಪುನೀತವಾಗುವವು,ಹೆಂಗೆಳೆಯರ ಹೃದಯ ಹಾಗೇ ಹಾರಿಹೋಗುವುದು,ಮಕ್ಕಳಿಂದ ಹಿಡಿದು  ವೃದ್ಧರವರೆಗೂ ಅವನೆಂದರೆ ಎಲ್ಲರಿಗೂ ತುಂಬಾನೇ ಇಷ್ಟ..


ಮಗು - ಎಲ್ಲರಿಗೂ ಇಷ್ಟವೇ..?


ತಾಯಿ - ಇಲ್ಲ, ಕೆಲವರಿಗೆ ಅವನೆಂದರೆ ಕೂಡ  ಇಷ್ಟ ಇಲ್ಲ!


ಮಗು - ಯಾರಿಗೆ ಅವನು ಮತ್ತು ಅವನ ಅಂತಹ ನಗು ಇಷ್ಟ ಆಗುವುದಿಲ್ಲ ಅಮ್ಮಾ..


ತಾಯಿ - ಕೆಲವರು ಇದ್ದಾರೆ!


ಮಗು - ಯಾರದು? 


ತಾಯಿ - ಧುರ್ಯೋಧನಾದಿಗಳು...!


ಮಗು - ಹಾಗಾದರೆ ನಿಜದಲ್ಲಿ ಅವನು ಯಾರು ಎಂದು ಒಮ್ಮೆ ಹೇಳಿಬಿಡಮ್ಮಾ.. 🙏


ತಾಯಿ -  ಅವನೇ.. ವಾಸುದೇವ ಕೃಷ್ಣ 😊🙏🏻




#ನಮೋ_ಭಗವತೇ_ವಾಸುದೇವಾಯ 😊🙏🏻🚩


ab

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ