ಬೆಣ್ಣೆ ಅಂದರೆ ಕೃಷ್ಣ

 

ಅಮ್ಮ ಕೇವಲ ಬಡಿಸುವುದಿಲ್ಲ

ಪ್ರೀತಿಯನ್ನು ಸೇರಿಸಿಯೇ ಬಡಿಸುತ್ತಾಳೆ

ಹುಡುಕಾಡಿದರೆ ಅಡುಗೆ ಮನೆಯ ಯಾವ

ಡಬ್ಬದಲ್ಲೂ ನನಗೆ ಪ್ರೀತಿ ಸಿಗಲೇ ಇಲ್ಲ.


* * * * * * * * * * * * * * * * * *


ಬೇರೆನು ಆಸೆ ಇಲ್ಲ,ಸಪ್ತಮಿಗೆ 

ಗಡಿಗೆ ಬೆಣ್ಣೆ ಸಿದ್ದಪಡಿಸಬೇಕು

ಜನ್ಮಾಷ್ಟಮಿಗೆ ಕೃಷ್ಣ

ಬಂದೇ ಕದಿಯಬೇಕು


* * * * * * * * * * * * * * * * * *


ಇಷ್ಟವಾಗುವ ಮಳೆ ಕೂಡ

ಬೇಡ ಅಂತ ಅನಿಸೋದು ನೆನೆದು

ನಿಂತಿರೋ ಗಂಡು ನವಿಲುಗಳನ್ನು

ನೋಡವಾಗ ಮಾತ್ರ


* * * * * * * * * * * * * * * * * *


ಪ್ರೀತಿಸಿದವರೆಲ್ಲರು ಮದುವೆ

ಆಗುತ್ತಾರೆ ಎನ್ನುವುದೇ ನಿಜ ಆಗಿದ್ದರೆ

ಈಗ ಅವನಿಗೆ ಮೂರು ಹೆಂಡತಿಯರು

ಅವಳಿಗೆ ನಾಲ್ಕು ಗಂಡಂದಿರು


* * * * * * * * * * * * * * * * * *


ನಾವು ನೀವೆಲ್ಲಾ 

ಸಾಯುವುದು

ಯೋಧರು ಅಮರರಾಗುವುದು


* * * * * * * * * * * * * * * * * *

ಹಿತವಾಗಿ ಹದವಾಗಿ 


ab pacchu

moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ