ಮಾವ ಎಂದರೆ ಸಲಿಗೆ


 

ಮಗು ಹುಟ್ಟುವುದೆಂದರೆ ಅದು ಕೇವಲ ಒಂದು ಮಗು ಮಾತ್ರ ಹುಟ್ಟುವುದು ಎಂದು ಅರ್ಥ ಅಲ್ಲ,ಅಲ್ಲಿ ಒಬ್ಬಳು ತಾಯಿ ಮರು ಹುಟ್ಟುತ್ತಾಳೆ.. ತಂದೆಯೂ ಹುಟ್ಟುತ್ತಾನೆ..ಅಜ್ಜ ಅಜ್ಜಿ ಯರು ಹುಟ್ಟಿ ಬಿಡುತ್ತಾರೆ... ಹಾಗೆಯೇ ಒಬ್ಬ ಸೋದರ ಮಾವ ಕೂಡ ಹುಟ್ಟಿಕೊಳ್ಳುವುದು ಆವಾಗಲೇ.😊❤️

ಮಗು ಮತ್ತು ಸೋದರ ಮಾವನ ಸಂಬಂಧ, ಸಾಂಗತ್ಯ ಒಂಥರಾ ವಿಶಿಷ್ಟವಾದದ್ದು, ಅದ್ಭುತವಾದದ್ದು ಹಾಗೆಯೇ ಅಷ್ಟೇ ಸುಂದರವಾದದ್ದು...

ಅಮ್ಮ ಆಕಾಶ ತೋರಿಸಿದರೆ, ಅಪ್ಪ ನಕ್ಷತ್ರ ತೋರಿಸಿಬಿಡುತ್ತಾನೆ  ಆದರೆ ಒಬ್ಬ ಸೋದರ ಮಾವ ಯಾವಾಗಲೂ ಮಕ್ಕಳಲ್ಲಿ ಬೆರಗು ಹುಟ್ಟಿಸುತ್ತಾನೆ, ಕುತೂಹಲ ಮೂಡಿಸುತ್ತಾನೆ.. ಎಲಕ್ಕಿಂತ ಹೆಚ್ಚಾಗಿ ನಕ್ಕು ನಗಿಸುತ್ತಾನೆ ಮತ್ತು ಮಕ್ಕಳಿಗೆ ಅತಿಯಾಗಿ ಇಷ್ಟವಾಗುತ್ತಾನೆ...

ಕೆಲವರಿಗೆ ಅದು ಅಜ್ಜಿ ಮನೆ, ಮತ್ತೆ ಕೆಲವರಿಗೆ ಅಜ್ಜನ ಮನೆ, ಅಮ್ಮನ ತವರು ಮನೆ,ಅಪ್ಪನ ಅತ್ತೆ ಮನೆ... ಆದರೆ ಕೆಲವು ಮಕ್ಕಳಿಗೆ ಅದು ಮಾವನ ಮುದ್ದು ಮನೆ..❤️

ಅಜ್ಜಿ ಮನೆಯ ಮಾವ ಊಟ ಮಾಡದ ಮಕ್ಕಳಿಗೆ ಹೆದರಿಸೋ  ಗೊಂಗ ಆಗಬಲ್ಲ, ಕೀಟಲೆ ಮಾಡೋ ಮಂಗ ಆಗಬಲ್ಲ.. ಮಕ್ಕಳ ಸವಾರಿಗಾಗಿ ಬೆನ್ನ ಮೇಲೆ ಅವರನ್ನು ಕೂತುಕೊಳಿಸಿಕೊಂಡು ನೆಲದ ಮೇಲೆ ಆಚೀಚೆ  ಚಲಿಸೋ ನಾಲ್ಕು ಕಾಲಿನ ಸೊಂಡಿಲಿಲ್ಲದ ಆನೆಯೂ ಆಗಬಲ್ಲ.. ಇನ್ನು ಕೆಲವೊಮ್ಮೆ ವೇಗವಿಲ್ಲದ  ಕುದುರೆಯೂ ಆಗಬಲ್ಲ..

ಬೊಗಸೆ ತುಂಬಾ ಮಿಠಾಯಿ ಸುರಿಯಬಲ್ಲ..ಯಾರಿಗೂ ಕಾಣದಂತೆ ಕೈಯಲ್ಲಿ ಒಂದಿಷ್ಟು ಹಣ ತುರುಕಿ ಹೋಗಬಲ್ಲ,ತರಹೇವಾರಿ ಆಟಿಕೆ ಕೊಡಿಸಬಲ್ಲ, ನೆತ್ತಿ ಸವರಿ ಮೊಗೆ ಮೊಗೆದು ಪ್ರೀತಿ ಸುರಿಯಬಲ್ಲ...

ಅಮ್ಮ ಪ್ರೀತಿ ಗೆ ಪ್ರತೀಕವಾದರೆ, ಅಪ್ಪ ಕಾಳಜಿಗೆ ಪ್ರತೀಕ... ಆದರೆ ಒಬ್ಬ ಮಾವ ಸಲಿಗೆಯ ಪ್ರತೀಕ...ಆತನಲ್ಲಿ ಸುಲಭವಾಗಿ ಎಲ್ಲವನ್ನೂ ಹೇಳಿಕೊಳ್ಳಬಹುದು.. ಮರ ಹತ್ತಬಹುದು, ಕಾಡು ಸುತ್ತಬಹುದು,ಕನಸು ಹೆಣೆಯಬಹುದು,ಬಾಲ್ಯದ ಚಿಕ್ಕ ಪುಟ್ಟ ಕನಸುಗಳನ್ನು ಸಾಕಾರಗೊಳಿಸಬಹುದು..ತಂಟೆ, ಕೀಟಲೆ ಎಲ್ಲಾ ಮಾವನ ಜತೆ ಸೇರಿ  ಮನಸ್ಸೋ ಇಚ್ಛೆ ಮಾಡಬಹುದು.

ಆತ experiment ಗಳನ್ನು ಮಾಡೋ ವಿಜ್ಞಾನಿ,ಚಿಕ್ಕ ಮಕ್ಕಳಿಗೆ ಚಮತ್ಕಾರ ತೋರಿಸೋ ಜಾದೂಗಾರ, ಚಿತ್ರ ಬರೆಯೋ ಕಲೆಗಾರ, ಮನ ಬಂದಂತೆ ಹಾಡೋ ಹಾಡುಗಾರ..

ಮಾವ ಅಂದರೆ ಹಾಗೇನೇ ಚಂದ ಮಾಮ ನಂತೆ, ಚಿಕ್ಕಂದಿನಲ್ಲಿ ಎಲ್ಲರಿಗೂ ಒಬ್ಬ ಮಾವ ಇರುತ್ತಾನೆ ಅದೇ ರೀತಿ ದೊಡ್ಡವನಾದಾಗ ಪ್ರತೀ ಹುಡುಗ ಕೂಡ ಕೆಲವೊಮ್ಮೆ ತಾನೇ  ಒಬ್ಬ ಮಾವ ಕೂಡ ಆಗಿಬಿಡುತ್ತಾನೆ, ಹಾಗೇ ಆದಾಗ ಅದೊಂದು ದಿವ್ಯವಾದ ಅನುಭೂತಿ ❤️
ಮಕ್ಕಳು ಸೋದರ ಮಾವನ ನಂಟು ಯಾವತ್ತಿಗೂ ಚಂದವೇ,ಆ ಬಂಧ ಸಂಬಂಧ ಅನುಬಂಧ ಎಂದಿಗೂ ಮಧುರವಾಗಿರಲಿ😍❤️

.....................................................................................

#ಏನೋ_ಒಂದು
AB Pacchu
Moodubidire


Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ