ಅನ್ನ ಸಾರು

 

ಫಿಜ್ಜಾ ಬರ್ಗರ್ ಹಾಗೂ ಸದಾ ಹೊರಗಿನದ್ದೇ ತಿನ್ನುವ ಆ ಹುಡುಗಿಗೆ ಅಮ್ಮನ ಅನ್ನ ಮತ್ತು ತರಕಾರಿ ಪದಾರ್ಥ ಇಷ್ಟವಾಗುತ್ತಿರಲಿಲ್ಲ.ಪ್ರತೀ ಸಲ ಅಮ್ಮ ಬಡಿಸಿಟ್ಟು ಹೋದ ಮೇಲೆ ಅಷ್ಟೂ ಅನ್ನವನ್ನು ತಂದು ಮನೆಯ ಹೊರಗಿನ ಕಸದ ತೊಟ್ಟಿಗೆ ಸುರಿಯುತ್ತಿದಳು.ಅವತ್ತು ಕೂಡ ಕಸದ ತೊಟ್ಟಿಗೆ ಸುರಿಯಲು ಅನ್ನ ಮತ್ತು ಸಾರು ತುಂಬಿದ ಬಟ್ಟಲು ತಂದಿದ್ದಳು.ಅಲ್ಲೇ ಇದ್ದ ವೃದ್ಧ ಭಿಕ್ಷುಕ "ಅಮ್ಮಾ.. ತುಂಬಾ ಹಸಿವು.. ಸ್ವಲ್ಪ ಅನ್ನ ಹಾಕಿ ಪುಣ್ಯ ಕಟ್ಟಿಕೊಳ್ಳು ತಾಯಿ ..." ಅಂದ.ತನ್ನ ಬಟ್ಟಲಿನಲ್ಲಿದ್ದ ಎಲ್ಲವನ್ನೂ ಅವನ ಬಟ್ಟಲಿಗೆ ಸುರಿದಳು.ಆತ ಪರಮಾನಂದ ದಿಂದ ಒಂದು ಅಗುಳು ಬಿಡದೇ ತನ್ನ ಭಿಕ್ಷಾ ಪಾತ್ರೆಯನ್ನು ನೆಕ್ಕಿ ನೆಕ್ಕಿ ಎಲ್ಲವನ್ನೂ ತಿಂದು ಮುಗಿಸಿದ. ಹುಡುಗಿ ಅಲ್ಲೇ ನಿಂತುಕೊಂಡು ಆ ವೃದ್ಧ ಭಿಕ್ಷುಕನನ್ನೇ ತದೇಕಚಿತ್ತದಿಂದ ನೋಡುತ್ತಿದ್ದಳು.ತಿಂದುಂಡು ಆದ ಮೇಲೆ ಭಿಕ್ಷುಕ  ಕಣ್ತುಂಬಿ ಕೊಂಡು " ತಾಯಿ.. ಏನೂ ತಿನ್ನದೇ ಮೂರು ದಿನ ಆಗಿತ್ತು. ನೀನು ಅನ್ನಪೂರ್ಣೆ ಕಣಮ್ಮಾ..ನಿನ್ನ ಬಾಳಲ್ಲಿ ಯಾವತ್ತೂ ನಿನಗೆ ಅನ್ನ ಒಂದು ಕಮ್ಮಿಯಾಗದಿರಲಿ.." ಎಂದು ಬೊಚ್ಚು ಬಾಯಿಯಲ್ಲಿ ಮನಸಾರೆ ಹರಸಿ ಹೋದ.ಹುಡುಗಿಗೆ ಕರುಳು ಚುರುಕು ಅಂದಿತು. ಸೀದಾ ಮನೆಗೆ ಒಳಗೆ ಹೋಗಿ ಬಟ್ಟಲು ತುಂಬಾ ಅಮ್ಮ ಮಾಡಿದ ಅನ್ನ ಸಾರು ಹಾಕಿಕೊಂಡು ಊಟ ಮಾಡಲು ಮತ್ತೆ ಕುಳಿತಲು.ಅವತ್ತು ಅನ್ನ ಸಾರಿಗಿಂತಲೂ ರುಚಿಯಾಗಿತ್ತು!


.....................................................................................


#ಇಷ್ಟೇ..


ab pacchu

moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ