ಈ ಪ್ರೀತಿ ಈ ವಿಶ್ವಾಸ





ಊರಲ್ಲಿ ಯಾರಾದರೂ ಪರಿಚಯದವರ ಮನೆಗೆ, ಅಥವಾ ಚಿಕ್ಕಂದಿನಲ್ಲಿ ಆಟವಾಡಿದ್ದ ಸ್ನೇಹಿತರ ಮನೆಗೆ ಹೀಗೆ ಅಪರೂಪಕ್ಕೆ  ತಿರುಗಾಡಿಕೊಂಡು ಬರುವ ಅಂತ ಹೋದರೆ... ಅವರು ನನ್ನನ್ನು ಹಾಗೇ ಹಿಂದೆ ಕಳುಹಿಸುವುದೇ ಇಲ್ಲ..  ಯೋಗ ಕ್ಷೇಮ ಎಲ್ಲಾ ವಿಚಾರಿಸಿ, ಎಷ್ಟು ಸಮಯದ ನಂತರ ಬಂದಿದ್ದೀಯಾ ಪಚ್ಚು, ಬೆಳೆದು ಎಷ್ಟು ದೊಡ್ಡ ಗೋಣ ನ ಹಾಗೆ ಹಾಕಿದ್ದಿಯಾ ಅಂತ ಹೇಳಿ,ಮೊದಲು ಒಂದು ದೊಡ್ಡ ಚೊಂಬು ಮಜ್ಜಿಗೆ ಕುಡಿಯಲು ಕೊಡ್ತಾರೆ. ನಂತರ ನನಗೆ ತೋಟ, ಗದ್ದೆ, ತರಕಾರಿಗಳು ಇಷ್ಟ ಅಂತ ಅವರಿಗೂ ಗೊತ್ತು, ಹಾಗಾಗಿ ಕೈ ಹಿಡಿದು ಬಾ ತೋಟಕ್ಕೆ ಹೋಗುವ.. ಅಂತ ಕರ್ಕೊಂಡು ಹೋಗ್ತಾರೆ. ಅಲ್ಲಿ ಎರಡು ಗೆಂದಾಳೆ ಬೊಂಡ ಹೊಟ್ಟೆ ಸೇರ್ತದೆ.

ನಂತರ ಎಲ್ಲಾ ತೋಟ ನೋಡಿ ಹಿಂತಿರುಗುವಾಗ ನನಗೆ ಕೊಡ್ಲಿಕ್ಕೆ ಅಂತ  ಒಂದು ಕಟ್ಟು ಬಸಳೆ, ಒಂದು ಹತ್ತು ಹದಿನೈದು ಊರಿನ ಬದನೆ, ಗುಳ್ಳ, ನಾಲ್ಕು ಜೀ ಗುಜ್ಜೆ, ಒಂದು ಕೈಲ್ ಬೊಂಡ, ಒಂದು ಕೈಲ್ ಬಾಳೆಹಣ್ಣು, ಒಂದು ಕೆಂಬುಡೆ, ಒಂದು ದೊಡ್ದ ಕುಂಬುಡ ,ಎರಡು ಪೆಲಕಾಯಿ ಹಣ್ಣು,ನಾಲ್ಕು ಫೈನ್ ಆಪಲ್, ಒಂದು ತೊಟ್ಟೆ ತೊತಾಪುರಿ ಮ್ಯಾಂಗೋ, ಒಂದು ತೊಟ್ಟೆ ಪೇರಳೆ, ಒಂದು ತೊಟ್ಟೆ ಮನೋಳಿ,ಎರಡು ತೊಟ್ಟೆ ಗೆಣಸು, ಮೂರು ತುರೆ.. ಹೀಗೆ  ತಗೋ ತಗೋ ಅಂತ ಎಲ್ಲಾ ಕೊಟ್ಟು ಕಳುಹಿಸ್ತಾರೆ.. ಅವರ ಪ್ರೀತಿಗೆ ನನಗೆ ಬೇಡ ಅಂತ ಹೇಳ್ಲಿಕ್ಕೆ ಮನಸ್ಸೇ ಬರುವುದಿಲ್ಲ, ಅವರಿಗೆ ಬೇಜಾರು ಆಗ್ಬಾರ್ದು ಅಂತ ನಾನು ಸ  ಕೊಟ್ಟ ಎಲ್ಲವನ್ನೂ ಒಂದೂ ಬಿಡದೇ ಮನೆಗೆ ತರ್ತೆನೆ.

ಇವತ್ತು ಮೋಹಿನಿಯಕ್ಕನ ಮನೆಗೆ ಹೋಗಿದ್ದೆ, ಅವರ ಗಂಡ ಸದಾಶಿವಣ್ಣ ಬೇಡ ಬೇಡ ಅಂತ ಹೇಳಿದ್ರೂ ಈ ಸರ್ತಿ ಆಗಿದ್ದೇ ಇಷ್ಟು ಪಚ್ಚು ಅಂತ ಬೇಜಾರು ಮಾಡಿಕೊಂಡು  ಗಿಡದಿಂದ ಒಂದೈದು ಬದನೆ ಕಿತ್ತು, ದೊಂಪ ದಿಂದ ಒಂದು ಕಟ್ಟು ಆಗುವಷ್ಟು ಬಸಳೆ ಕಟ್ ಮಾಡಿ ನನಗೆಂದೇ ತೆಗೆದರು. Next ಮಿಸ್ ಮಾಡದೇ ಬರಬೇಕು ಆವಾಗ ಬೇರೆ ಎಲ್ಲಾ ತರಕಾರಿ ಕೂಡ (ಮೇಲೆ ಹೇಳಿದ ಲೀಸ್ಟ್ ನಲ್ಲಿರುವ ಉಳಿದ ಐಟಮ್ಸ್) ಆಗಿರ್ತದೆ, ಅದನ್ನು ಸ ತಗೊಂಡು ಹೋಗ್ಲೇಬೇಕು ನೀನು ಅಂತ ಹೇಳಿ ಎಲ್ಲವನ್ನು ತೊಟ್ಟೆಯಲ್ಲಿ ಹಾಕಿ ಕೊಟ್ಟು ಪ್ರೀತಿಯಿಂದ ಕಳುಹಿಸಿದರು.

ಈ ಮುಗ್ಧ ಪ್ರೀತಿಗೆ ಏನೆಂದು ಹೇಳಲಿ.ಇಂತಹ ಹಿರಿಯರು ಸಿಕ್ಕಿದ್ದು ನನ್ನ ಪುಣ್ಯ, ಇವರ ಸಂತತಿ ಸಾವಿರವಾಗಲಿ.

Next time ಹೋಗುವಾಗ ಮೋಹಿನಿಯಕ್ಕನ ಮನೆ ಮಾತ್ರ ಅಲ್ಲ ಇನ್ನೂ ಪರಿಚಯದವರ ನಾಲ್ಕು ಮನೆಗೆ ಹೋಗ್ಬೇಕು.ಮತ್ತು ಹಾಗೆ ಒಂದು ಟೆಂಪೋ ವೋ, ಲಾರಿ ಯೋ ಮಾಡ್ಕೊಂಡೇ ಹೋಗ್ಬೇಕು ಅಂತ ಡಿಸೈಡ್ ಮಾಡಿದ್ದೀನಿ ..ಹಾಗೇ ವಾಪಸ್ ಬರುವಾಗ ಅವರೆಲ್ಲರ ತೋಟವನ್ನೇ ತುಂಬಿಸಿಕೊಂಡು  ಬರಬೇಕು ಅಂತ ಕೂಡ ಅಂದುಕೊಂಡಿದ್ದೇನೆ.
ಬಾಡಿಗೆ ಟೆಂಪೋ ಮಾಡ್ಕೊಂಡು ಹೋಗುವುದು ಕಷ್ಟ ಅನ್ನಿಸಲ್ಲ, ಅವರು ಪ್ರೀತಿಯಿಂದ ನೀಡುವುದನ್ನು ತಿರಸ್ಕರಿಸುವುದು ಕಷ್ಟ ಅನಿಸುತ್ತದೆ...

ಈ ಹಿರಿಯರ ವಾತ್ಸಲ್ಯ ಕಳೆದುಕೊಳ್ಲಿಕ್ಕೆ ನನಗೆ ಮನಸ್ಸಿಲ್ಲ, ದೇವರು ಕಣ್ಣು ಬಿಟ್ರೆ ಮುಂದಿನ ವರ್ಷ ಒಂದು ಟೆಂಪೋ ಖರೀದಿಸ್ತೇನೆ, ನಂತರ ವರ್ಷ ವರ್ಷ ಟೆಂಪೋ ಬಾಡಿಗೆ ಮಾಡಿಕೊಂಡು ಹೋಗುವುದು ಕೂಡ ತಪ್ಪುತ್ತದೆ..ಟೆಂಪೋ ದವನಿಗೆ ದುಬಾರಿ ಬಾಡಿಗೆ, Waiting charge ಕೂಡ ಕೊಡುವುದು ತಪ್ಪುತ್ತದೆ.. ಮಾತ್ರವಲ್ಲ ಈ ಪ್ರೀತಿ ವಿಶ್ವಾಸ ವೂ ಉಳಿಯುತ್ತದೆ.. 😌🤷‍♂

ab pacchu



Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ