ಇವರದ್ದೊಂದು ಅಡುಗೆ ಮಾತು ಎರಡೂ ಚಂದವೇ


ನನಗೆ ಇವರದ್ದೊಂದು ಅಡುಗೆ ಬಹಳ ಇಷ್ಟ.ಮಂಗಳೂರು ಕನ್ನಡಲ್ಲಿಯೇ ಮಾತಾಡುತ್ತಾ ಟಿಪಿಕಲ್ ದಕ್ಷಿಣ ಕನ್ನಡ ಶೈಲಿಯ ಸಸ್ಯಾಹಾರಿ ಅಡುಗೆಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಪರಿಚಯಿಸುತ್ತಾರೆ ಸುದರ್ಶನ್ ಭಟ್ ಬೆದ್ರಾಡಿ. ಮೂಲತಃ ನಮ್ಮ ಗಡಿಭಾಗ ಕಾಸರಗೋಡಿನವರು. Bhat'n'bhat ಅಂತ ಅವರದ್ದೇ youtube channel ಕೂಡ ಇದೆ.ಮಾತಿನ ಸೊಗಡಿನಂತೆ ಮಾಡುವ ಅಡುಗೆಗಳು ಸಹ ಬಹಳ ರುಚಿ ರುಚಿಯಾದದ್ದೇ.. 😋😊😍

ಹೆಚ್ಚಿನವರಿಗೆ ಗೊತ್ತಿದೆ,ಗೊತ್ತಿಲ್ಲದವರು ಒಮ್ಮೆ ಅಗತ್ಯವಾಗಿ Bhat'n'bhat channel ಗೆ ಭೇಟಿ ಕೊಟ್ಟು ಜಿಲ್ಲೆಯ ವಿಶಿಷ್ಟವಾದ ಪಾರಂಪರಿಕ ರೆಸಿಪಿಗಳನ್ನು ಮತ್ತೊಮ್ಮೆ ಮೆಲುಕಿ ಹಾಕಿಕೊಳ್ಳಬಹುದು.ಮಿಕ್ಸರ್ ಅನ್ನು ಕೂಡ ಬಳಸದೇ ಕಡೆಯುವ ಕಲ್ಲಿನಲ್ಲಿಯೇ ನುಣ್ಣಗೆ ರುಬ್ಬಿ ಅಡುಗೆ ಮಾಡಿ ತೋರಿಸುತ್ತಾರೆ ಇವರು.ಇನ್ನೂ ಈ ಚಾನೆಲ್ ಬಗ್ಗೆ ಗೊತ್ತಿಲ್ಲದ್ದಿದ್ದರೆ,ನೀವೂ ಸಹ ಅಡುಗೆ ಪ್ರೀಯರಾಗಿದ್ದಾರೆ ಒಮ್ಮೆ ಈ ಚಾನೆಲ್ ಗ್ ಬೇಟಿ ಕೊಡಿ.. ಬಹುಶಃ ನಿಮಗೂ ಇಷ್ಟ ಆಗಬಹುದು... 😊🙏🏻
ab

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ