ಜಿಲೇಬಿ ಬಾಳು

 

ನಾನು ಮುತ್ತಿನ ವ್ಯಾಪಾರ 

ಆರಂಭಿಸಲು ಮುಖ್ಯ ಕಾರಣ

ನೀನು ನಕ್ಕಾಗಲೆಲ್ಲ

ಮುತ್ತು ಉದುರಿದ್ದು


* * * * * * * * * * * * * * * * * *


ಹರಡಿರೋ ಬಾಳೆ ಎಳೆಯ

ಚಂದಿರ ಹಪ್ಪಳವಾದರೆ 

ಸಣ್ಣ ಪುಟ್ಟ ನಕ್ಷತ್ರಗಳು 

ಎಲೆ ತುದಿಯಲ್ಲಿರೋ ಸಂಡಿಗೆಗಳು


* * * * * * * * * * * * * * * * * *


ಜಗತ್ತೆಲ್ಲಾ ನೋಡುವ ನಾವು

ಭಾಗ್ಯಶಾಲಿ ಅಂತ ಅನಿಸೋದೇ ಇಲ್ಲ

ನಂದಿ ಗರ್ಭಗುಡಿಯ ಶಿವನನ್ನು ಬಿಟ್ಟರೆ

ಎಂದಿಗೂ ಬೇರೆನನ್ನೂ ನೋಡುವುದೇ ಇಲ್ಲ


* * * * * * * * * * * * * * * * * *


ಎಣ್ಣೆಯಲ್ಲಿಯೇ ಅರಳಿದರೂ 

ಜಿಲೇಬಿಯದ್ದು ರಸವತ್ತಾದ ಬಾಳು 

ಚಕ್ಕುಲಿಯದ್ದು ಕರ್ರುಂ ಕುರ್ರಂ

ತಾಳಮೇಳದ ಜೀವನ


* * * * * * * * * * * * * * * * * *


ಚಿಟ್ಟೆ ಸಿಹಿ ಹೀರುತ್ತಾ ಕೇಳಿತು

ನೋವಾಗುತ್ತಿದೆಯಾ ನಿನಗೆ

ಹೂವು ಹೇಳಿತು,ಇಲ್ಲ ನಾನು

ಅರಳಿದ್ದು ಸಾರ್ಥಕವಾಯಿತು


* * * * * * * * * * * * * * * * * *


ಹಿತವಾಗಿ ಹದವಾಗಿ 


ab pacchu

moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ