ನಾನು ಮತ್ತು ಜಾತ್ರೆಯ ಆಟಗಳು
ನನಗೆ ಊರಿನ ಜಾತ್ರೆ ಗಳು ಮತ್ತು ಜಾತ್ರೆಗೆ ಹೋಗುವುದು ಅಂದರೆ ಬಾರೀ ಇಷ್ಟ. ನಾಲ್ಕು ಕಾರಣಗಳಿಗಾಗಿ ನಾನು ಜಾತ್ರೆ ಗೆ ಹೋಗ್ತೇನೆ.
1. ದೇವರ ದರ್ಶನ,ಪೂಜೆ, ಬಾಕಿ ಇಟ್ಟಿರುವ ಹರಕೆ ತೀರಿಸುವುದು, ಪ್ರಸಾದ, ಅನ್ನಸಂತರ್ಪಣೆ ಇತ್ಯಾದಿ
2. ಊರವರು, ಗೆಳೆಯರು ಎಲ್ಲಾ ಒಂದೇ ಕಡೆ ಸಿಗ್ತಾರೆ , So, jolly ಆಗ್ತದೆ.
3.food stall - ಜಾತ್ರೆಯಲ್ಲಿ ನಾನು ಏನೇ ತಿನ್ನದಿದ್ದರೂ ಚರುಂಬುರಿ ಮಾತ್ರ ತಿಂದೇ ತಿನ್ತೇನೆ ಮತ್ತು ತಿನ್ಲೇ ಬೇಕು, ಅದು ಅಲಿಖಿತ ನಿಯಮ.
4. This is very important, ಜಾತ್ರೆಯ ಸಂತೆಯಲ್ಲಿ ವಿವಿಧ ಆಟಗಳು ಬರುತ್ತವೆ, ಅದಕ್ಕಾಗಿ.
ಕೊನೆಯಲ್ಲಿ ಹೇಳಿದೆ ಅಲ್ಲಾ ನಾಲ್ಕನೇ ಪಾಯಿಂಟ್, ಅದು ನನಗೆ ಜಾತ್ರೆಯ ಸಂತೆಯಲ್ಲಿ ಅತ್ಯಂತ ಹೆಚ್ಚು attract ಮಾಡುವಂತಹದ್ದು , ನಾನು ಜಾತ್ರೆ ಗೆ ಹೋದ ಕೂಡಲೇ ನನ್ನನ್ನು ಮೊದಲು ಕೈ ಬೀಸಿ ಕರೆಯುವುದು ಅದೇ. ನಾನು ಜಾತ್ರೆ ಗೆ ಹೋದರೆ ಆಡದ ಆಟನೇ ಇಲ್ಲ.ಜಾತ್ರೆಯ ಸಂತೆಯಲ್ಲಿ, ಆಟ ಆಡುವುದರಲ್ಲಿ ನಾನು ಯಾವತ್ತೂ ಕಿಲಾಡಿನೇ.
ಅದು ರಿಂಗ್ ಬಿಸಾಡುವ ಗೇಮ್ ಉಂಟಲ್ಲಾ ,ಅದರಲ್ಲಿ ನಾನು ರಿಂಗ್ ಬಿಸಾಡಿದ್ರೆ ಒಂದು ಸೋಪು ಇಲ್ಲವೇ ಪಾರ್ಲೆ ಜಿ ಬಿಸ್ಕೆಟ್ confirm.
ಹತ್ತು ಸಲ ಬಿಸಾಡಿದ್ರೆ ಹತ್ತು ಸೋಪು ಇಲ್ಲವೇ ಹತ್ತು ಪಾರ್ಲೆ ಜಿ ಬಿಸ್ಕೆಟ್ ನನ್ನ ಪಾಲಿಗೆ ಪಕ್ಕ.
ಗಾಳ ಹಾಕಿ ಕೋಲ(ಕೋಕ್ ಅಂತ ತಿಳ್ಕೊಳ್ಳಿ ಆಯ್ತಾ) ಬಾಟಲ್ ಮೇಲೆ ಎತ್ತುವುದರಲ್ಲಿ ನನ್ನದು ಯಾವಾಗಲೂ ಎತ್ತಿದ ಕೈ. ಕನಿಷ್ಟ ನಾಲ್ಕೈದು ಬಾಟಲ್ ಆದ್ರೂ ಗೆಲ್ತೇನೆ, ಕೊನೆಗೆ ಆಟ ದ ಅಂಗಡಿಯವನೇ ಹೇಳ್ತಾನೆ, ಬೇಡ ಅಣ್ಣಾ ಪಾಪದವ ಈ ರೀತಿ ಗೆದ್ದು ಹೊಟ್ಟೆಗೆ ಹೊಡಿಬೇಡಿ ಎಂದು.
Next ನಾನು move ಆಗುವುದು, ಪಿರಮಿಡ್ ನಂತೆ ಪೇರಿಸಿಟ್ಟಿರುವ ಲೋಟ ಗಳನ್ನು ಬಾಲ್ ಬಿಸಾಡಿ, ಎಲ್ಲವನ್ನೂ ಬೀಳಿಸುವ ಆಟದಲ್ಲಿ. ಅದರಲ್ಲಿ ನಾನು ಹೆಚ್ಚು ಸಕ್ರೀಯನಾಗಿಯೇ ಪಾಲ್ಗೊಳ್ಳುತ್ತೇನೆ. ಊರಿನ ಗದ್ದೆಯಲ್ಲಿ ಆಡುವಾಗ ಜನರು ನನಗೆ "ಊರಿನ ಜಾಂಟಿ ರೋಡ್ಸ್" ಅಂತ ಕರೀತಾ ಇದ್ದರು.ನನ್ನದು ಆ ರೀತಿಯ ಫೀಲ್ಡಿಂಗ್. ಇನ್ನು ಈ ಪೊಟ್ಟು ಬಾಲ್ ಬಿಸಾಡಿ, ಲೋಟ ಬೀಳಿಸುವುದು ನನಗೆ ಯಾವ ಲೆಕ್ಕ. ಎಲ್ಲರೂ ಸಮಯ ತೆಗೆದುಕೊಂಡು ಗುರಿ ಇಟ್ಟು ತಾಳ್ಮೆಯಿಂದ ಬಾಲ್ ಎಸೆದರೆ ನಾನು ಯಾವಾಗಲೂ ಈ ಆಟದಲ್ಲಿ ಕಣ್ಣು ಮುಚ್ಚಿ ಯೇ ಬಾಲ್ ಎಸೆಯುವುದು. ರಿಸಲ್ಟ್ ಎನಂತ ಕೇಳ್ಬೇಡಿ. ವಿನ್ ಆದವನಿಗೆ ಕೊಡ್ಲಿಕ್ಕೆ ಅಂತ ತಂದಿರೋ 5 sprite ಬಾಟಲ್ ಕೂಡ ಯಾವಾಗಲೂ ನನ್ನದೇ ಆಗಿರುತ್ತೆ.
ಅಲ್ಲಿಂದ ನಾನು ಮುಂದೆ ಹೋಗಿ ಆಡೋ ಆಟನೇ, ಬಲೂನ್ ಗೆ ಡಮ್ಮಿ ಬಂದೂಕಿನಿಂದ ಶೂಟ್ ಮಾಡಿ ಬಲೂನ್ ಹೊಡೆಯೋ ಆಟ. ಎಲ್ಲರೂ ಬೆಲೂನ್ ಕಡೆ ನೋಡಿಕೊಂಡು ಶೂಟ್ ಮಾಡ್ತಾ ಇದ್ದರೆ, ನಾನು ಮಾತ್ರ opposite ಸೈಡ್ ನೋಡಿ, ಅಂದ್ರೆ ಹಿಂದೆ ನೋಡಿಕೊಂಡು ಬಂದೂಕ್ ಅನ್ನು ಬೆಲೂನ್ ಕಡೆಗೆ ಗುರಿಇಟ್ಟು ಶೂಟ್ ಮಾಡ್ತೆನೆ. ಅಲ್ಲಿ ಕೂಡ ಗೆಲುವು ನನ್ನದೇ, ಒಮ್ಮೆ ಗೆದ್ದರೆ ನೂರು ರೂಪಾಯಿ ಸಿಗುತ್ತೆ. ನಾನು ಅದೇ ಆಟವನ್ನು ಹತ್ತು ಸಲ ಆಡ್ತೀನಿ. ಸಾವಿರ ರೂಪಾಯಿ ಆದ್ ಮೇಲೆ ಅಲ್ಲಿಂದ ಹೊರಡ್ತೀನಿ..
ಮತ್ತೊಂದು ಆಟ ಇದೆ, ಅದರಲ್ಲಿ ಇಳಿಜಾರಾಗಿ ಒಂದು ಹಲಗೆಯ ಬಾಕ್ಸ್ ಇರ್ತದೆ. ಕೆಳಗೆ ನಂಬರ್ಸ್ ಬರ್ದು ಇರ್ತಾರೆ. ನಮ್ಮ ಕೈಗೆ ಒಟ್ಟು ಆರು ಬಾಲ್ ಕೊಡ್ತಾರೆ,ನಾವು ಮೇಲಿನಿಂದ ಆ ಇಳಿಜಾರಿನಲ್ಲಿ ಬಾಲ್ ಅನ್ನು ಬಿಡಬೇಕು. ಆ ಬಾಲ್ ಕೆಳಗೆ ಹೋಗಿ ಬೀಳುತ್ತೆ. ಅವರು ಅದರಲ್ಲಿ ಕೆಳಗೆ ಬರೆದಿರುವ ನಂಬರ್ ನೋಟ್ ಮಾಡ್ತಾರೆ. ಹೀಗೆ ಆರು ಸಲ ಬಾಲ್ ಬಿಟ್ಟು ಆದ್ ಮೇಲೆ ನಮಗೆ ಸಿಕ್ಕಿದ ಎಲ್ಲಾ ನಂಬರ್ ಟೋಟಲ್ ಮಾಡ್ತಾರೆ. ನಂತರ ಆ ನಂಬರ್ ಗೆ ಯಾವ ಪ್ರೊಡಕ್ಟ್ ಅಂತ ಹೇಳ್ತಾರೆ. ಪ್ರೊಡಕ್ಟ್ ಹಾಗೂ ಅದರ ಮೇಲಿರುವ ನಂಬರ್ ಗಳನ್ನು ಸಹ ಅಲ್ಲೇ ಅಂಗಡಿ ಎದುರಿನಲ್ಲಿಯೇ ಎಲ್ಲರಿಗೆ ಕಾಣುವಂತೆ ಮೊದಲೇ display ಮಾಡಿರ್ತಾರೆ. ಕೆಲವರಿಗೆ ಏನೂ ಸಿಗುವುದಿಲ್ಲ. ಇನ್ನು ಕೆಲವರಿಗೆ ಟೂತ್ ಪೇಸ್ಟ್, ಮ್ಯಾಗಿ ಎಲ್ಲಾ ಸಿಗ್ತದೆ. ನಂಗೆ ಲಾಸ್ಟ್ ವರ್ಷ ಮಿಕ್ಸಿ ಸಿಕ್ಕಿತ್ತು, ಅದರ ಹಿಂದೆ ಗ್ರೈಂಡರ್ ಸಿಕ್ಕಿತ್ತು. ಈಗಲೂ ನಮ್ಮ ಮನೆಯಲ್ಲಿ ಇಡ್ಲಿ ಗೆ ಚಟ್ನಿ ನಾನು ಗೆದ್ದಂತಹ ಅದೇ ಮಿಕ್ಸರ್ ನಲ್ಲಿಯೇ ಮಾಡುವುದು. ಮತ್ತು ಚಿಕನ್ ಪುಳಿಮುಂಚಿ ಗೆ ಅರೆಪು(ಮಸಾಲ) ಕಡೆಯುವುದು ಸ ನಾನು ಗೆದ್ದ ಗ್ರೈಂಡರ್ ನಲ್ಲಿಯೇ 🤷♂
Next ಬೇರೆ ಯಾವುದಾದರೂ ಹೊಸ ಹೊಸ ಆಟ ಬಂದಿದ್ದರೆ ಅದರ ಕಡೆಗೆ ಕೂಡ ಮುಖ ಮಾಡ್ತೀನಿ. ಟೋಟಲಿ ಜಾತ್ರೆಯ ಸಂತೆಯ ಆಟದಲ್ಲಿ ನಾನೇ ಚಾಂಪಿಯನ್.. ನಾನು ಈ ವಿಷಯದಲ್ಲಿ ಸೋಲಿಲ್ಲದ ಸರದಾರ..
ಸದ್ಯಕ್ಕೆ ಕೊರೊನ ಬಂದು ಜಾತ್ರೆ ಯಲ್ಲಿ, ಜಾಸ್ತಿ ಯಾಗಿ ಸಂತೆ ಹಾಕುವಂತಿಲ್ಲ. ಇದು ನನ್ನಂತಹ ಟ್ಯಾಲೆಟೆಂಡ್ ಸಂತೆ ಕಿಲಾಡಿಗೆ ಅತೀವ ದುಃಖ ವನ್ನು ತಂದಿದೆ. ಜಾತ್ರೆ ಗೆ ಹೋದಾಗ ನನ್ನ ಟ್ಯಾಲೆಂಟ್ ತೋರಿಸಲು ಸಂತೆಯ ಗದ್ದೆಯಲ್ಲಿ ಆಟಗಳಿಲ್ಲ. 😭😭 ಇದಕ್ಕೆ ಕಾರಣವಾದ ಕೊರೊನ ಹೆಮ್ಮಾರಿಗೆ ನನ್ನ ಶಾಪ ತಟ್ಟದೇ ಇರದು..😡
ಇರಲಿ ನೆಕ್ಸ್ಟ್ ಜಾತ್ರೆಯಲ್ಲಿ ನಾನು ಸೋಪು, ಪಾರ್ಲೆ ಜಿ ಬಿಸ್ಕೆಟ್, sprite, ಕೋಲ ಗಳನ್ನು ಡಬಲ್ ಡಬಲ್ ಗೆದ್ದು.. ಹಾಗೇ ನಂಬರ್ ಗೆ ಮೇಲಿನಿಂದ ಬಾಲ್ ಬಿಡುವ ಆಟದಲ್ಲಿ ಒಂದು ಗೇರ್ ಸೈಕಲ್ ಇಲ್ಲವೇ ಪ್ರಿಡ್ಜ್ ಅನ್ನು ಗೆದ್ದು, ಈ ಬಾರಿ ಆಟ ಆಡಲು ಸಾಧ್ಯವಾಗದೇ ಇರುವ ಸೇಡನ್ನು ಡಬಲ್ ಆಗಿಯೇ ತೀರಿಸಿಕೊಳ್ಳುತ್ತೇನೆ 😏😏
ಒಂದು ಮಾತು ನೆನಪಿಟ್ಟುಕೊಳ್ಳಿ, ಜಾತ್ರೆ ಗೆ ಬಂದು, ಆಟ ಆಡದೇ, ಸೋಪು ಬಿಸ್ಕೆಟ್ ಗೆಲ್ಲದೇ..ಬರೀಕೈಯಲ್ಲಿ ಹಿಂದಿರುಗುವುದು.. ಸಂತೆ ಕಿಲಾಡಿಗಳಿಗೆ ಯಾವತ್ತೂ ಅವಮಾನವಾದಂತೆ ಹಾಗೂ ಅದು ಅಷ್ಟೇ ಭಯಂಕರವಾಗಿ ಅವರನ್ನು hurt ಕೂಡ ಮಾಡುತ್ತೆ..
ab pacchu

Comments
Post a Comment