ಕರಡಿ ಮತ್ತು ಹಲಸು
ಎಷ್ಟೇ ಒಳ್ಳೆಯ ಗ್ರಿಪ್
ಇರೋ ಶೂ,ಚಪ್ಪಲಿ ಇದ್ದರೂ
ಪ್ರೀತಿಯಲ್ಲಿ ಜಾರಿ
ಬೀಳುವವರೇ ಹೆಚ್ಚು
* * * * * * * * * * * * * * * * * *
ಹಿಂದಿನ ಮಕ್ಕಳೇ
ಇಂದಿನ ಪ್ರಜೆಗಳು
ಇಂದಿನ ಮಕ್ಕಳೇ
ಲಾಕ್ ಡೌನ್ ಪ್ರೀಯರು
* * * * * * * * * * * * * * * * * *
ಹಲಸಿನ ಮರ ಹಣ್ಣೊಂದನ್ನು
ಉಳಿಸಿ ಕಾದಿದೆ
ಕರಡಿ ಜೇನು ಸಿಗಲಿ ಆಮೇಲೆ
ಬರುವೆ ಎಂದು ಹೇಳಿದೆ
* * * * * * * * * * * * * * * * * *
ಚಕ್ರವ್ಯೂಹ ದ ಸುತ್ತು
ಹೆಚ್ಚಾದಷ್ಟು ಕಷ್ಟ
ಚಕ್ಕುಲಿಗೆ ಸುತ್ತು
ಹೆಚ್ಚಾದಷ್ಟು ಇಷ್ಟ
* * * * * * * * * * * * * * * * * *
ಮಾವ ಇಲ್ಲದವರಿಗೂ
ಒಬ್ಬ ಮಾಮ ಇದ್ದಾನೆ
ಅಮ್ಮನ ಊಟ ಮಾಡಿಸುವಾಗ
ಬರುವನು ಚಂದ ಮಾಮ
* * * * * * * * * * * * * * * * * *
ಹಿತವಾಗಿ ಹದವಾಗಿ
ab pacchu
moodubidire

Comments
Post a Comment