ಬಹು ಮುಖ ಪ್ರತಿಭೆಗಳು

 

ಕಲೆ ಎಲ್ಲಾ ಕಡೆಯೂ ಇರುತ್ತದೆ..


ಚಂದ್ರನ ಮೇಲಿನ ಮೊಲದಂತಹ ಕಲೆ, ಮುಖದ ಮೇಲಿನ dark circles ಅನ್ನೋ ಕಲೆ,ಬಿಳಿಯ ಶರ್ಟ್ ಮೇಲಿನ ಇಡ್ಲಿ ಸಾಂಬಾರ್  ನ ಕಲೆ, ಪುಸ್ತಕದ ದ ಮೇಲೆ ಚೆಲ್ಲಿದ ಚಾಹ ದ ಕಲೆ..etc etc ಕೊಳೆಯ ಕಲೆ..ಖಂಡಿತವಾಗಿಯೂ ಎಲ್ಲಾ ಆ ರೀತಿಯ ಕಲೆಗಳ ಬಗ್ಗೆ ಇಲ್ಲಿ ನಾ ಹೇಳಹೊರಟಿರುವುದು ಅಲ್ಲಾ.. 


ಮತ್ತೇ..?


ಕಲೆ ಎಂದರೆ ಅದು ಟ್ಯಾಲೆಂಟ್, ಪ್ರತಿಭೆ.. ಇತ್ಯಾದಿ ಇತ್ಯಾದಿ ಎಲ್ಲಾ ಉಂಟಲ್ಲಾ .. ಹಾನ್, ಅದರ ಬಗ್ಗೆಯೇ ಸದ್ಯಕ್ಕೆ ಹೇಳ ಹೊರಟಿರುವುದು.


ಟ್ಯಾಲೆಂಟ್ ಅನ್ನುವುದು ಎಲ್ಲರಲ್ಲೂ ಇರುತ್ತದೆ, ಅದರೆ extraordinary ಟ್ಯಾಲೆಂಟ್.. ಅದು  ಕೆಲವರಲ್ಲಿ ಮಾತ್ರ ಇರುತ್ತದೆ..😊


ಅದರಲ್ಲೂ ಇನ್ನು ಕೆಲವುರು ಇರ್ತಾರೆ, ಅವರಲ್ಲಿ ಯಾವ ರೇಂಜಿಗೆ  ಟ್ಯಾಲೆಂಟ್ ತುಂಬಿ ತುಳುಕಾಡುತ್ತಿರುತ್ತದೆ ಎಂದರೆ.. ಅದನ್ನು ಪದಗಳಲ್ಲಿ ವಿವರಿಸುವುದು ಕೂಡ ಸ್ವಲ್ಪ ಕಷ್ಟವೇ... ಆದರೂ ನನ್ನೆಲ್ಲಾ ಶಕ್ತಿ ಮೀರಿ ನಿಮಗೆ ಮನ ಮುಟ್ಟುವಂತೆ ಅವರ ಟ್ಯಾಲೆಂಟ್ ಅನ್ನು ಅರ್ಥ ಮಾಡಿಸಲು ಪ್ರಯತ್ನ ಮಾಡುತ್ತೇನೆ.. 


ಅವರದ್ದು ಯಾವಾಗಲೂ extraordinary ಟ್ಯಾಲೆಂಟ್ ಗಿಂತಲೂ ಮಿಗಿಲಾದ ಅದಕ್ಕೂ ಮೇಲಿನ ಟಾಪ್ ಲೆವೆಲಿನ ಟ್ಯಾಲೆಂಟ್.. 🙄🤔


ನಾನು ಹೇಳುತ್ತಿರುವ ಈ ಕೆಳಗಿನ  ಕೆಲವು ಟ್ಯಾಲೆಂಟ್ ಎಲ್ಲಾ ಉಂಟಲ್ಲಾ, ಅದು ಎಲ್ಲರಲ್ಲೂ ಇರಲು ಸಾಧ್ಯವೇ ಇಲ್ಲ,ಸಾಮಾನ್ಯ ಜನರಿಗೆ ಅದನ್ನೆಲ್ಲಾ ಕಲ್ಪಿಸಲು ಕೂಡ ಸಾಧ್ಯವಿಲ್ಲ.


ಅದಕ್ಕಾಗಿಯೇ ಇಂತಹ ಕಲೆಗಳನ್ನೆಲ್ಲ ಹೊಂದಿರುವವರ ಟ್ಯಾಲೆಂಟ್ ನನ್ನ ಪಾಲಿಗಂತೂ extraordinary ಟ್ಯಾಲೆಂಟ್ ಗಿಂತಲೂ ಅಧಿಕವಾದ  ಟ್ಯಾಲೆಂಟ್ ಅಂತಾನೇ ಯಾವಾಗಲೂ ಅನಿಸೋದು.


ಅದಕ್ಕಾಗಿಯೇ ಈ  ಟಾಪಿಕ್ ಅನ್ನು ಬರೆಯಲು ಸೆಲೆಕ್ಟ್ ಮಾಡಿದ್ದು, ಅದೇ ರೀತಿ ನನಗೆ ಅಂತಹ  ಟ್ಯಾಲೆಂಟೆಡ್ ಜನ ಹಾಗೂ ಅವರ ಟ್ಯಾಲೆಂಟ್ ಗಳೇ ಬೇರೆ ಎಲ್ಲಾ  ಟ್ಯಾಲೆಂಟ್ ಗಳಿಗಿಂತ ಯಾವಾಗಲೂ ಅತಿಯಾಗಿ ಇಷ್ಟ ಆಗೋದು..


ನಾನು ಎಲ್ಲಿಗೆ ಹೋದರೂ ಕೂಡ , ಜಾಸ್ತಿಯಾಗಿ ಗಮನಿಸೋದು ಅವರನ್ನೇ,ಹಾಗೂ ಅವರ ಈ ರೀತಿಯ ಟ್ಯಾಲೆಂಟ್ ಗಳನ್ನೇ...


ಮತ್ತೊಂದು ವಿಷಯ ನಾನು ಎಲ್ಲಿ ಹೋದರೂ ನನಗಂತು ಈ ರೀತಿಯ ಜನಗಳೇ ಸಿಗುತ್ತಾರೆ... 


ಬನ್ನಿ ಒಂದೊಂದೇ ಅದ್ಭುತ ಟ್ಯಾಲೆಂಟ್ ಗಳ ಒಂದು ಜಲಕ್ಕ್ ಹಾಗೇ ನೋಡಿಕೊಂಡು ಬರೋಣ..ಸ್ವಾರಿ, ಓದಿಕೊಂಡು ಬರೋಣ.. 


ಮನೆಯಲ್ಲಿ ಟೂತ್ ಪೇಸ್ಟ್ ಎಲ್ಲರೂ use ಮಾಡ್ತಾರೆ.. ಆದರೆ ಟ್ಯೂಬ್ ನ ಒಳಗೆ ತಲೆಮರೆಸಿಕೊಂಡಿರುವ  ಕೊನೆಯ ಆ ಒಂದು drop  ಪೇಸ್ಟ್ ಉಂಟಲ್ಲಾ, ಅದನ್ನು ಸ್ವಲ್ಪವೂ ಉಳಿಸದೆ  ಹೊರಗೆ ತೆಗೆಯುವುದು  ಮಾತ್ರ ಎಲ್ಲರ ಕೈಯಿಂದ ಸಾಧ್ಯವಿಲ್ಲ.. ಆದರೆ ಕೆಲವರಿಗೆ ಅದು ಸಾಧ್ಯವಿದೆ ... ಇದು.. ಇದು ಕಲೆ ಅಂದ್ರೆ... ಒಂದು ಹನಿ ಪೇಸ್ಟ್ ವೇಸ್ಟ್ ಆಗದಂತೆ, ಕೈ ಕಾಲಿನಿಂದ ಒತ್ತಿ ಒತ್ತಿ ತೆಗೆಯಲು.. ಹಲ್ಲಿನಿಂದ ಕಚ್ಚಿ ಕಚ್ಚಿ ತೆಗೆಯಲು ಕೂಡ  multi talented skill ಬೇಕೆ ಬೇಕು...ಅದಪ್ಪಾ.. ಕಲೆ ಅಂದ್ರೆ. 


ಪಂಕ್ತಿ ಊಟಕ್ಕೆ ಕೂತಿರುತ್ತೇವೆ, ಎಲೆಯ ತುಂಬೆಲ್ಲಾ ಬೇಕು ಬೇಕಾದುದನ್ನು ಹಾಕಿಕೊಂಡು, sorry.. ಬಂದ ಎಲ್ಲವನ್ನೂ ಕೇಳಿ ಕೇಳಿ ಹಾಕಿಕೊಂಡು ಎಲೆಯನ್ನು ಭರ್ತಿ ಮಾಡಿಕೊಂಡು ನಿಧಾನವಾಗಿ  ಊಟ ಮಾಡುತ್ತಿರುತ್ತೇವೆ..ಯಾವಾಗ ನಮ್ಮ ಸಾಲಿಗೆ ಪಾಯಸ ಬರುತ್ತೋ.. ಕ್ಷಣಾರ್ಧದಲ್ಲಿ ಎಲೆಯ ಅಷ್ಟು ಐಟಮ್ ಗಳನ್ನು ಖಾಲಿ ಮಾಡಿ ಎಲೆಯಲ್ಲಿ ಪಾಯಸಕ್ಕೆ ದೊಡ್ಡ ಜಾಗ ಮಾಡಿಕೊಡುವುದು ಉಂಟಲ್ಲಾ...ಅದು ಕೂಡ  ಒಂದು ರೀತಿಯ ಅಧ್ಬುತವಾದ ಟ್ಯಾಲೆಂಟ್.


ಶಾಲೆಯಲ್ಲಿ ಇಡೀ ದಿನ ಜಿಂಕೆಯಂತೆ ಕುಣಿದು ಕುಪ್ಪಳಿಸುವವನು,ನವಿಲಿನಂತೆ ನಲಿಯುವವನು.. ಶಾಲೆಯ ಗ್ರೌಂಡ್ ನಲ್ಲಿ ಬೆಳಿಗ್ಗೆ ನಡೆಯುವ ಪ್ರಾರ್ಥನೆ ಹಾಗೂ ಪೆರೇಡ್ ಸಮಯದಲ್ಲಿ, ಪ್ರತೀ ದಿನ ತಪ್ಪದೇ ತಲೆ ತಿರುಗಿ ಬಿಳೋದು  ಕೂಡ...ಒಂದು ರೀತಿಯ ಕಲೆಯೇ.


ಚಿಕ್ಕಂದಿನಲ್ಲಿ ತಟ್ಟೆಯೊಳಗಿನ ಅನ್ನದಳೊಗೆ  ನಮ್ಮ ಇಷ್ಟದ ಪದಾರ್ಥ ವನ್ನು ಬಚ್ಚಿಟ್ಟುಕೊಂಡು, ಅದರ ಮೇಲೆ ಮತ್ತಷ್ಟು ಅನ್ನ ಹಾಕಿ ಕವರ್ ಮಾಡಿಕೊಂಡು, ಅನ್ನದ ಗುಡ್ಡೆ ಮಾಡಿಕೊಂಡು , ಅಮ್ಮಾ.. ನೋಡಮ್ಮ..ನಂಗೆ ಜಾಸ್ತಿ ಪದಾರ್ಥ ಹಾಕಿಯೇ ಇಲ್ಲ, ಹಾಕಿದ್ದು ಕೂಡ ಎಲ್ಲಾ  ಖಾಲಿ ಆಯಿತು, ಇನ್ನು ಸ್ವಲ್ಪ ಪದಾರ್ಥ ಹಾಕಮ್ಮಾ.. ಅಂತ ಅಮ್ಮನ ಮುಂದೆ ಮುಗ್ಧ ಬಾಲಕನಂತೆ ಪಿಳಿ ಪಿಳಿ ಕಣ್ಣು ಬಿಡುವುದು ಕೂಡ ....ಒಂದು ರೀತಿಯ ಕಲೆಯೇ.


ಯಾರಾದರೂ ಪೋನಿಗೆ ಕಾಲ್ ಮಾಡಿ ಎಲ್ಲಿಗಾದರೂ ಬರಲು ಒತ್ತಾಯಿಸಿದಾಗ.. ಹೋಗಲು ಇಷ್ಟವಿರದಿದ್ದರೆ, ಮನಸ್ಸಿಲ್ಲದಿದ್ದರೆ.. ಇನ್ನೂ ಮಲಗಿರುವಂತೆ, ಇಲ್ಲ ಜೋರು ಕಫ, ಶೀತ ಬಂದಂತೆ, ಜೋರಾಗಿ ಕೆಮ್ಮುತ್ತಾ ನಟಿಸಿ ಮಾತನಾಡಿ... ನನಗೆ ಇವತ್ತು ಏನೋ ಮೈ ಹುಷಾರ್ ಇಲ್ಲ.. ಅಂತ ಹೇಳಿ ನಟಿಸುವುದು ಕೂಡ..... ಒಂದು ರೀತಿಯ ನಟ ಭಯಂಕರ ಕಲೆಯೇ. 


ಸಂಜೆ ಕ್ರಿಕೆಟ್ ಗ್ರೌಂಡ್ ಗೆ ಜನ ಎಲ್ಲಾ ಬಂದು ಸೇರಿ, ಎರಡು ಟೀಮ್ ಕೂಡ ಆಗಿ, ಆಟ ಶುರುವಾಗಿದೆ ಎಂದು confirm ಆದ ಮೇಲೆ, ದೂರದಿಂದಲೇ ಮನೆಯವರೆಗೆ ಆಟ ಆಡುವವರ ಸೌಂಡ್ ಕಿವಿಗೆ ಬಿದ್ದ ಮೇಲೆ.. ದೊಡ್ಡ ಉದಾಸೀನ ದ ಮಾರಿ ಆಗಿದ್ದರೂ ಸಹ, ನಿಧಾನವಾಗಿ ರಾಜನಂತೆ ಗ್ರೌಂಡ್ ಗೆ ನಡೆದುಕೊಂಡು ಬರುವುದು ಕೂಡ ...ಒಂದು  ರೀತಿಯ ಕಲೆಯೇ..


ಓವರಿನ ಮೊದಲ ಐದು ಬಾಲ್ ಆಡಿ, sorry.. ವೇಸ್ಟ್ ಮಾಡಿ,ಪ್ರತೀ ಓವರಿನ ಕೊನೆಯ ಬಾಲಿಗೆ ಮಾತ್ರ ಚಾಕಚಕ್ಯತೆಯಿಂದ ಜೀವ ಬಿಟ್ಟು ಸಿಂಗಲ್ ರನ್ ತೆಗೆದು ಪುನಃ ನೆಕ್ಸ್ಟ್ ಓವರ್ ನಲ್ಲಿ strike ನಲ್ಲಿ ಆಡೋದು ಕೂಡ... ಒಂದು ರೀತಿಯ  ಕಲೆಯೇ..

ಅದೇ ರೀತಿ ಸೋಲುತ್ತೇವೆ ಎಂದು ಗೊತ್ತಾಗುವಾಗ ಚೊರೆಪಟ್ ಮಾಡಿ ಮ್ಯಾಚ್ ನಿಲ್ಲುವಂತೆ ಮಾಡುವುದು, ಇಲ್ಲ ಬಾಲ್ ಒಟ್ಟೆ ಮಾಡಿ, ರೀ ಮ್ಯಾಚ್ ಅಂತ ಹೇಳುವುದು ಕೂಡ.... ಒಂದು ರೀತಿಯ ಕಲೆಯೇ..


ಎಲ್ಲಾ ಪೆಟ್ಟ್ ಲಡಾಯಿ, ಮಾತಿನ ಚಕಮಕಿ ಮುಗಿದ ಮೇಲೆ ಬಂದು  .. "ಶೇ, ನೀವು ಒಂದು ಏನೂ ಮಾಡ್ಲೇ ಇಲ್ವಾ ಮರ್ರೆ ಅವನಿಗೆ.. ಜಸ್ಟ್ ಹೀಗೆಯೇ ಇಷ್ಟೂ ಜನ ನೋಡುತ್ತಾ ನಿಂತದ್ದಾ,ನೀವೆಲ್ಲಾ ವೇಸ್ಟ್ .. ನಿಮಗೆಲ್ಲಾ ಚೂರೂ  ಧೈರ್ಯ ಇಲ್ಲ ಮರ್ರೆ ಸಾವ್, ನಾನಿರಬೇಕಿತ್ತು..ನಾನಾಗಿದ್ರೆ  ಅವನ ಕೈ ಕಾಲು ಮುರಿದು ಅವನ ಕೈಗೆನೇ  ಕೊಡ್ತಿದ್ದೆ.." ಎಂದು ಹೇಳೋನು, ಪ್ರತೀ ಸಣ್ಣ ಪುಟ್ಟ ಜಗಳವನ್ನು ಕೂಡ ಬೇಕು ಬೇಕುಂತಲೇ calculate ಮಾಡಿಯೇ ತಪ್ಪಿಸಿಕೊಂಡಿರುತ್ತಾನೆ,ಮಾತ್ರವಲ್ಲ ಪ್ರತೀ  ಜಗಳ ಮುಗಿದ ಕೂಡಲೇ ಅಲ್ಲಿ ಪ್ರತ್ಯಕ್ಷ ಆಗಿರುತ್ತಾನೆ, ಮತ್ತು ಪ್ರತೀ ಸಲವೂ ಮೇಲಿನ ಡೈಲಾಗ್ ಅನ್ನೇ ಪುನರುಚ್ಛರಿಸಿ  ಹೇಳುತ್ತಾನೆ, ಇದೂ ಕೂಡ... ಒಂದು ರೀತಿಯ ಕಲೆಯೇ. 


ಅಮ್ಮ ಅಪ್ಪನ ಜೊತೆಗೆ ಸಂಬಂಧಿಕರ ಮನೆಗೆ ಹೋದಾಗ ಅವರು ಟೇಬಲ್ ನಲ್ಲಿ ಒಂದು ಪ್ಲೇಟ್ ಪೂರ್ತಿ ಬಾಳೆಕಾಯಿ ಚಿಪ್ಸ್, ಹಾಗೂ ಇನ್ನೊಂದು ಪ್ಲೇಟ್ ನಲ್ಲಿ ಕರಿದ ಗೋಡಂಬಿ ಇಟ್ಟರೆ.. ಅವರು ತಿನ್ನಿ ತಿನ್ನಿ ಎಂದು ಎಷ್ಟೇ ಒತ್ತಾಯ ಮಾಡಿದರೂ, ಎದುರಿಗೆ ಇರುವಾಗ ಸಂಕೋಚಕ್ಕೆ ಜಸ್ಟ್ ಒಂದು ಚಿಪ್ಸ್ ಮತ್ತು ಒಂದು ಗೋಡಂಬಿ  ತಿನ್ನುವುದು ಮತ್ತು ಅವರು ಒಳಗೆ ಜ್ಯೂಸ್ ಇಲ್ಲವೇ ನೀರು ತರಲು ಹೋದಾಗ ಅಮ್ಮ ಅಪ್ಪನ ವಕ್ರ ದೃಷ್ಟಿಯನ್ನು ಕಡೆಗಣಿಸಿ ," ಹೋದಲ್ಲಿ ಬಂದಲ್ಲಿ ನಮ್ಮ ಮರ್ಯಾದೆ ತೆಗಿಬೇಡ ಓ ಮಾರಾಯ.. "ಎನ್ನುವ  ಆಜ್ಞೆಯನ್ನು ದಿಕ್ಕರಿಸಿ, ಎದುರಿಗಿರುವ ಚಿಪ್ಸ್ ಹಾಗೂ ಕರಿದ ಗೋಡಂಬಿ ಪ್ಲೇಟ್ ಅನ್ನು ಅರ್ಧಕ್ಕರ್ಧ  ಖಾಲಿ ಮಾಡುವುದು ಕೂಡ.... ಒಂದು ರೀತಿಯ ಕಲೆಯೇ.. 


ಎಲ್ಲರೂ ಹೂವು ಬೆಳೆಸುತ್ತಾರೆ, ಕೆಲವರು ಹೂ ಕಟ್ಟುತ್ತಾರೆ, ಇನ್ನು ಕೆಲವರು ಕಸದಿಂದ ರಸ ಅಂತ ವೇಸ್ಟ್ ಪೇಪರ್ ಬಾಟಲಿ ಗಳನ್ನು ಬಳಸಿ ಕಲಾತ್ಮಕವಾದ ಹೂ ಮಾಡ್ತಾರೆ, ಆದರೆ ಕೆಲವರು ಕಲೆಗಾರರು ಇರ್ತಾರೆ.. ಅವರದ್ದು ಅದೆಂತಹ ಕಲೆ ಅಂದರೆ.. ದಿನಾಲೂ ಹಲ್ಲು ಉಜ್ಜುವ ಬ್ರಶ್ ಅನ್ನು.. ಉಜ್ಜಿ ಉಜ್ಜಿ.. ಟೂತ್ ಬ್ರಶ್ ನಲ್ಲಿ ಒಂದು ಸೂರ್ಯ ಕಾಂತಿ ಯನ್ನೇ  ಅರಳಿಸಿರುತ್ತಾರೆ.. ಟ್ಯಾಲೆಂಟ್ ಅಂದ್ರೆ ಇದು, ಇದು ಮಾತ್ರ ಎಲ್ಲರಿಗೂ ಬರಲ್ಲ ಸಾಮೇ..


ಏನೇ ಹೇಳಿ ಇಂತಹ ಟ್ಯಾಲೆಂಟ್ ಜನಗಳನ್ನು ಯಾರು ಕೂಡ ಗುರುತಿಸಿ, ಜಗಮಗಿಸುವ ವೇದಿಕೆ ಗೆ ಕರೆದು, ಹಣ್ಣು ಹಂಪಲು ಕೊಟ್ಟು ರೇಷ್ಮೆ ಶಾಲು ಹಾಕಿ ಸನ್ಮಾನಿಸುವುದೇ ಇಲ್ಲ,ಅದೇ ಬೇಜಾರಿನ ಸಂಗತಿ..


ಎಷ್ಟೇ ಆದರೂ ಟ್ಯಾಲೆಂಟ್..ಟ್ಯಾಲೆಂಟೇ ಅಲ್ವಾ..

ಸಮಾಜ ಯಾಕೆ ಇವರತ್ತ ಇನ್ನೂ ಹೆಚ್ಚಿನ ಗಮನ ಹರಿಸುತ್ತಿಲ್ಲ ಅನ್ನುವುದೇ ನನಗೆ  ಯಕ್ಷ ಪ್ರಶ್ನೆಯಾಗಿ ಕಾಡಿದೆ.. 


ಆದರೆ ಏನೇ ಹೇಳಿ, ಅಂತಹ ಟ್ಯಾಲೆಂಟೆಡ್ ಜನಗಳು ನನಗಂತೂ ಬಲು ಬೇಗ ಇಷ್ಟ ಆಗ್ತಾರಪ್ಪಾ..

ಯಾಕೆಂದರೆ ಮೇಲೆ ಹೇಳಿದ ಕೆಲವು ಭಯಂಕರ ಟ್ಯಾಲೆಂಟ್ ಗಳಲ್ಲಿ, ಕೆಲವೊಂದು ಟ್ಯಾಲೆಂಟ್ ನನಗೇ ಗೊತ್ತಿಲ್ಲದೇ ನನ್ನಲ್ಲೂ ಕೂಡ ಇದೆ.. 😅🏃🏻🏃🏻


.....................................................................................


#ಏನೋ_ಒಂದು


AB Pacchu

Moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ