ಅಂಬಡೆ, ರಮೇಸ ಮತ್ತು ನಾನು
ಇವತ್ತು ನಾನು ಮಂಗಳೂರಿನ ಫೇಮಸ್ ಮಾಲ್ ಒಂದಕ್ಕೆ ಹೋಗಿದ್ದೆ. ಸ್ವಲ್ಪ ಶಾಪಿಂಗ್ ಮಾಡ್ಲಿಕ್ಕೆ ಇತ್ತು ಹಾಗೆ. ಹೋದವನೇ ಬಟ್ಟೆ purchase ಮಾಡ್ಲಿಕ್ಕೆ ಮೊದಲು ಹೋದೆ.
ಅಲ್ಲಿ ಬಟ್ಟೆ ಶಾಪ್ ಒಂದರಲ್ಲಿ ಕನ್ನಡಕ ಹಾಕಿದ್ದ ಒಬ್ಬರು ನನ್ನನ್ನು ದೂರದಿಂದಲೇ ಗುರುತು ಹಿಡಿದರು, ರಪ್ಪ ಅಲ್ಲೇ ಅವರು ತನ್ನ ಸಹೋದ್ಯೋಗಿ ಗಳಿಗೆ ಕೇಳುವಂತೆ ಹೇಳಿದರು. "ಇವರು ಅವರೇ ಫೇಸ್ಬುಕ್ ಅಲ್ಲಿ ಎಲ್ಲಾ ಬರೀತಾರೆ ಅಲ್ಲ, ಅವರು.. "
ಅಲ್ಲಿ ಕೆಲಸಕ್ಕಿದ್ದವರಲ್ಲಿ ತುಂಬಾ ಜನ ಹುಡುಗಿ ಯರೇ ಇದ್ದರು. ಅವರೂ ಕೂಡ ಖುಷಿಯಿಂದ "ಓಹ್ ಅವರಾ ಇವರು,ಸತ್ಯಾ..? ನಂಬ್ಲಿಕ್ಕೆನೇ ಆಗ್ತಾ ಇಲ್ಲ ." ಅಂದರು. ಅವರೆಲ್ಲರಿಗೂ ನನ್ನ ಮೊದಲೇ ಪರಿಚಯವಿದ್ದಂತೆ ಅನಿಸಿತು.
ಆ ಕನ್ನಡಕದವ ಅವರ ಮ್ಯಾನೇಜರ್ ಅನ್ನು ಕರ್ಕೊಂಡು ಬಂದ. ಅವರಿಗೂ ಕಿವಿಯಲ್ಲಿ ಹೇಳಿದ "ಸಾರ್ ಇವರು ಅವರೇ ಸಾರ್ ಫೇಸ್ಬುಕ್ ಅಲ್ಲಿ ಬರೀತಾರೆ ಅಲ್ಲಾ.."
"Really ಅವರೇನಾ..ಸಂತೋಷ ಸಂತೋಷ.. ಹೋಗಿ refreshments ಗೆ ಏನಾದರೂ ತಗೊಂಡು ಬಾ " ಅಂತ ಕನ್ನಡಕದವನಿಗೆ ಮ್ಯಾನೇಜರ್ ಹೇಳಿ ಕಳುಹಿಸಿದ.
ಮ್ಯಾನೇಜರ್ ನನ್ನ ಬಳಿ ಗೆ ಬಂದು ಹ್ಯಾಂಡ್ ಶೇಕ್ ಮಾಡಿದ." ಸಾರ್ ನೀವು ನಮ್ಮ ಮಳಿಗೆ ಗೆ ಬಂದದ್ದು ನಮ್ಮ ಪುಣ್ಯ, ಬನ್ನಿ ಒಳಗೆ ಮೀಟಿಂಗ್ ರೂಮ್ ಅಲ್ಲಿ ಕೂತ್ಕೊಂಡು ಮಾತಾಡುವ " ಅಂದರು.
" ಅದು.. ಅದು.. ನನಗೆ ಬಟ್ಟೆ ತಗೊಳ್ಳಿಕ್ಕೆ ಇತ್ತು " ಅಂದೆ
" ಸಾರ್ ಬಟ್ಟೆ ಆಮೇಲೆ ತಗೊಳ್ಳುವಿರಂತೆ, ನಿಮ್ಮಂತ ಸ್ಪೆಷಲ್ ಗೆಸ್ಟ್ ಗಳಿಗೆ ಸ್ಪೆಷಲ್ ಡಿಸ್ಕೌಂಟ್ ಮಾಡಿ, ತುಂಬಾ ಕಡಿಮೆ ಯಲ್ಲಿ ಯೇ ಬಟ್ಟೆ ನಾನು ತೆಗೆಸಿಕೊಡ್ತೆನೆ. Dont worry, ನಾನು ಇಲ್ಲಿಯ ಮ್ಯಾನೇಜರ್. ಮೊದಲು ಕಾಫಿ ನೋ ಜ್ಯೂಸೋ ಕುಡ್ಕೊಂಡು, ಕುತ್ಕೊಂಡು ಮಾತಾಡುವ ಸಾರ್,ಬನ್ನಿ ಮೊದಲು ನಡೆಯಿರಿ ಒಳಗೆ "ಅಂದರು.
ನನಗೆ ಅಲ್ಲಿ ಏನು ನಡೀತಿದೆ ಅಂತಾನೇ ಗೊತ್ತಾಗ್ಲಿಲ್ಲ.
ಸುಮ್ಮನೆ ಒಳಗೆ ನಡೆದೆ. ಹುಡುಗಿಯರು ಕೂಡ ಒಳಗೆ ತಾ ಮುಂದು ನಾ ಮುಂದು ಅಂತ ಒಡೋಡಿ ಬಂದರು.
ಈಗ ಮೊದಲು ಮ್ಯಾನೇಜರ್ ಮಾತು ಶುರು ಮಾಡಿದ." ಸಾರ್ ನಾನು ನಿಮ್ಮ ದೊಡ್ಡ ಪ್ಯಾನ್, ನಿಮ್ಮ ಫೇಸ್ಬುಕ್ ನ ಎಲ್ಲಾ ಪೋಸ್ಟ್ ಸಿಕ್ಕಾಪಟ್ಟೆ ಚೆನ್ನಾಗಿರುತ್ತೆ. ತುಂಬಾನೇ ಚೆನ್ನಾಗಿ ಬರೀತೀರಾ.. ನಾನು ಮಾತ್ರ ಅಲ್ಲಾ ನಮ್ಮ ಎಲ್ಲಾ ಸ್ಟಾಪ್ ನಿಮ್ಮ ಅಭಿಮಾನಿಗಳೇ..
... ಈ ರಮೇಶ ಮಾತ್ರ ಎಲ್ಲರಿಗಿಂತ ನಿಮ್ಮ ದೊಡ್ಡ ಪ್ಯಾನ್, ನಿಜ ಹೇಳಬೇಕೆಂದರೆ ಅವನೇ ನಿಮ್ಮ ಪೋಸ್ಟ್ ಗಳನ್ನು ನಮಗೆಲ್ಲಾ ಪ್ರೀ ಟೈಂ ಅಲ್ಲಿ ಓದಿ ಹೇಳೊದು, ಯಾಕೆಂದರೆ ನಾವ್ಯಾರು ನಿಮ್ಮ ಪೋಸ್ಟ್ ಗಳನ್ನು ಡೈರೆಕ್ಟ್ ಆಗಿ ಓದಕ್ಕೆ ಆಗಲ್ಲ ಅಲ್ಲಾ ಸಾರ್, cause ನಾವ್ಯಾರು ಫೇಸ್ಬುಕ್ ಅಲ್ಲಿ ನಿಮ್ಮ ಫ್ರೆಂಡ್ ಅಲ್ಲ, ನಾನು ನನ್ನ ಈ ಸ್ಟಾಫ್ಸ್ ಎಷ್ಟೇ ಸಲ ಪ್ರೆಂಡ್ request ಕಳುಹಿಸಿದರೂ ನೀವು accept ಮಾಡಿಲ್ಲ...
... ನಮ್ಮಲ್ಲಿ ಈ ರಮೇಶ್ ಮಾತ್ರ ನಿಮ್ಮ ಫ್ರೆಂಡ್, ಹಾಗಾಗಿ ಅವನು ನಿಮ್ಮ ಎಲ್ಲಾ ಪೋಸ್ಟ್ ರೆಗ್ಯುಲರ್ ಆಗಿ ಒದಿ ಹೇಳ್ತಾನೆ, ನಾವು ಕೇಳಿಸಿಕೊಂಡು ಖುಷಿ ಪಡ್ತೀವಿ.. "ಎಂದು ಕನ್ನಡಕದವನನ್ನು ತೋರಿಸಿ ಅವನೇ ನಿಮ್ಮ ಭಯಂಕರ ಪ್ಯಾನ್ ರಮೇಶ್ ಎಂದು ಹೇಳಿದ ಮ್ಯಾನೇಜರ್.
ಒಹ್ ಹೋ.. ಈ ಕನ್ನಡಕದವನು ರಮೇಸ ನಾ.. ಹೂಂ ಇರಲಿ ಇರಲಿ.. ಅಂದುಕೊಂಡೆ.
ಹುಡುಗಿ ಒಬ್ಬಳು ಶುರು ಮಾಡಿದಳು" ಸಾರ್ ನಾನು ಶಾಲ್ಮಲಿ ಅಂತ , ನಿಮ್ಮ ಲವ್ ಕಥೆಗಳು ನನಗೆ ತುಂಬಾ ಇಷ್ಟ ಸಾರ್ " ಅಂದಳು "
ಬಹುಶಃ ಇವಳಿಗೆ ನನ್ನ" ಪ್ರೇಮ ಪಲ್ಲವಿ " ಕಥೆ ಇಷ್ಟ ಆಗಿರಬೇಕು ಎಂದು ಕೊಂಡೆ. ಎಲ್ಲರಿಗೂ ನಾನು ಬರೆದುದರಲ್ಲಿ ಇಂದಿಗೂ ಜಾಸ್ತಿ ಇಷ್ಟ ಆಗಿದ್ದು ಅಂದರೆ ಅದೇ, ತುಂಬಾ ಜನ ಸ್ಟೋರಿ ಓದಿ ಕಣ್ಣೀರು ಆಗಿದ್ದು ಕೂಡ ಇದೇ.
" ಹೌದಾ ತುಂಬಾ ಥ್ಯಾಂಕ್ಸ್ ಶಾಲ್ಮಲಿ ಅವರೇ ನಿಮ್ಮ ಈ ಪ್ರೀತಿ ಹೀಗೆ ಇರಲಿ " ಅಂದೆ.
ಮತ್ತೊಬ್ಬಳು ಹುಡುಗಿ ಶುರು ಮಾಡಿದಳು" ಸಾರ್ ನಾನು ಆಕಾಂಕ್ಷ, ನಂಗೆ ನಿಮ್ಮ ಲಾಜಿಕ್ ಇಲ್ಲದ ಮರ್ಲ್ ಕಥೆ ಗಳು ಎಲ್ಲಾ ಇಷ್ಟ ಸಾರ್ " ಅಂದಳು.
ಇರಬಹುದು ಇರಬಹುದು,ನಾನು ಜಾಸ್ತಿ ಬರೆಯುವುದು ಮರ್ಲೇ ಅಲ್ಲವೇ.." ಥ್ಯಾಂಕ್ಸ್ ಆಕಾಂಕ್ಷ ಅವರೇ, ಥ್ಯಾಂಕ್ಯು ಸೋ ಮಚ್ " ಅಂದೆ.
ಇನ್ನೊಬ್ಬಳು ಶುರು ಮಾಡಿದಳು" ಸಾರ್ ನಾನು ಮೊನಾಲಿಸ, ನನಗೆ ನಿಮ್ಮ ಪೆಟ್ಟ್ ಲಡಾಯಿ ಯ ಕಥೆಗಳು ತುಂಬಾನೇ ಇಷ್ಟ " ಅಂದಳು.
ಇವಳು ಬಹುಷಃ ಪೆಟ್ಟಿಸ್ಟ್ ಸಂತುನ ಸ್ಟೋರಿ ಒದಿರಬೇಕು ಅಂದು ಕೊಂಡೆ" ಥ್ಯಾಂಕ್ಸ್ ಮೊನಾಲಿಸ ಅವರೇ ನಿಮ್ಮ ಅಭಿಮಾನ ಕ್ಕೆ ನಾನು ಚಿರಋಣೆ" ಅಂದೆ.
"ನಿಮ್ಮದೊಂದು autograph ಬೇಕು ಸಾರ್, plzzz.. "ಅಂದಳು ಮೊನಲಿಸಾ.
" autograph ಎಲ್ಲಿ ಹಾಕಲಿ ಮೊನಲಿಸಾ.. " ಅಂದೆ.
" ಸಾರ್ ಇಲ್ಲೆ ಕೈ ಮೇಲೆ ಹಾಕಿ.. " ಅಂದಳು ಮೊನಲಿಸಾ.
" ಓಕೆ. ಪೆನ್ನು ಕೊಡಿ.. " ಅಂದೆ.
" ಪೆನ್ನು ಇಲ್ಲ ಸಾರ್,ಮಾರ್ಕರ್ ಇದೆ, ಅದರಲ್ಲಿಯೇ ಹಾಕಿ" ಅಂದಳು ಮೊನಲಿಸಾ.
ಯಾವುದೋ ಅನ್ಯಗ್ರಹದ ಲ್ಯಾಂಗ್ವೇಜ್ ನಲ್ಲಿ ಯಾರಿಗೂ ಅರ್ಥವಾಗದ ರೀತಿಯಲ್ಲಿ ಮೊನಲಿಸಾ ಕೈ ಮೇಲೆ ಆಟೋಗ್ರಾಪ್ ಗೀಚಿ ಬಿಟ್ಟೆ.
ಮೊನಲಿಸಾ ಖುಷಿ ಪಟ್ಟು ಕೊಂಡು, ನನ್ನ ಆಟೋಗ್ರಾಪ್ ಮೇಲೆ ಮುತ್ತು ಕೊಟ್ಟು ಕೊಂಡು ನಾಚಿ ನೀರಾದಳು.
ಸತ್ಯ ಹೇಳ್ಬೆಕೆಂದ್ರೆ ನಾನು ಕೂಡ ಆಟೋಗ್ರಾಪ್ ಕೊಡುವ ಅಷ್ಟು ದೊಡ್ಡ ಜನ ಆಗ್ತೆನೆ ಲೈಫ್ ಅಲ್ಲಿ ಅಂತ ದೇವರಾಣೆ ಗೂ ಗೊತ್ತಿರಲಿಲ್ಲ.
ಆದರೆ ಇಲ್ಲಿ ಎಲ್ಲವೂ ನನಗೇ ಅರಿವಿಲ್ಲದೇ ಆಗ್ತಾ ಉಂಟು.
ಬಹುಶಃ ಈಗ ಜಾತಕದಲ್ಲಿ ಒಳ್ಳೆಯ ದೆಸೆ ಬಂದಿರಬೇಕು ನನಗೆ. ಇಲ್ಲದಿದ್ದರೆ ನನಗೆ ಎಲ್ಲಿ ಬರಬೇಕು ಇಂತಹ ಯೋಗ.
ಇರಲಿ ಇರಲಿ ಸುಮ್ಮನೆ ಎಂಜಾಯ್ ಮಾಡು ಅಂತ ಹೇಳಿತು ಮನಸ್ಸು.
ನಮ್ಮ ಕನ್ನಡ ಕದ ರಮೇಸ ಒಂದು ದೊಡ್ಡ ಗ್ಲಾಸ್ ಅಲ್ಲ ಆರೆಂಜ್ ಜ್ಯೂಸ್ ಮತ್ತು ಒಂದು ಪ್ಲೇಟ್ ಅಲ್ಲಿ ಅಂಬಡೆ ಮತ್ತು ಶೀರಾ ತಂದು ಇಟ್ಟ.
"ನೀವು ಕುಡೀರಿ ಸಾ ಕುಡೀರಿ.. "ಎಂದು ರಮೇಸ force ಮಾಡಿದ.
ಇವನ ಭಯಂಕರ ಅಭಿಮಾನ ಕ್ಕೆ ನಾನು ಫಿಧಾ ಆದೆ. ಲಾಸ್ಟ್ ಗೆ ಮಾತ್ರ ಇವನಿಗೊಂದು ಒಳ್ಳೆಯ ಟ್ರೀಟ್ ಕೊಡಲೇಬೇಕು ಎಂದು ಆಗಲೇ ನಿರ್ಧರಿಸಿ ಬಿಟ್ಟೆ. ಯಾಕೆಂದರೆ ನಾನು ಇಲ್ಲಿ ಇಷ್ಟೊಂದು ಫೇಮಸ್ ಆಗಲು ಮಾತ್ರವಲ್ಲ ನಾನೀಗ ಅನುಭವಿಸುತ್ತಿರುವ ಸೆಲೆಬ್ರೆಟಿ ಫೀಲ್ ಗೂ ಇವನೇ ಅಲ್ಲವೇ ಕಾರಣ. ಹೌದೌದು ಇವನಿಗೆ ಖುಷಿ ಪಡಿಸುವುದು ನನ್ನ ಆದ್ಯ ಕರ್ತವ್ಯ. 😌
ಆಹಾ.. ಪೇಸ್ಬುಕ್ ಬರಹಗಾರನನ್ನು ಈ ಸೆಲೆಬ್ರೇಟಿ ರೇಂಜ್ ಗೆ ಎಲ್ಲಾ ಟ್ರೀಟ್ ಮಾಡ್ತಾರ. ನನಗಂತೂ ಹಗುರವಾಗಿ ಗಾಳಿಯಲ್ಲಿ ತೇಲಿದ ಅನುಭವ, ಇರಲಿ ಇರಲಿ ಇನ್ನೂ ಎಂಜಾಯ್ ಮಾಡುವ ಅಂತ ನನಗೆ ನಾನೇ ಹೇಳಿಕೊಂಡೆ.
ನಿಧಾನವಾಗಿ ಒಂದು ಸಿಪ್ ಆರೆಂಜ್ ಜ್ಯೂಸ್ ಎಳೆದು. ಒಂದು ಅಂಬಂಡೆ ಯನ್ನು ಬಾಯಿಗೆ ಇಟ್ಟೆ.
ಮ್ಯಾನೇಜರ್ ಪುನಃ ಶುರು ಮಾಡಿದ" ಸಾರ್ ಮತ್ತೆ ನೀವು ಮೊನ್ನೆ ಬರೆದ ದೀಶಾ ಳ ಸ್ಟೋರಿ, ಕಿಸ್ ಕೊಡ್ಲಿಕ್ಕೆ ಹೋಗುವ ಸೀನ್, ಮತ್ತೆ ಅದು ಲಾಸ್ಟ್ ಗೆ ಎಲ್ಲವೂ ಕನಸೆಂದು ಗೊತ್ತಾದದ್ದು , ನಿಜವಾಗಿಯೂ ಮಜಾ ವಾಗಿತ್ತು ಸಾರ್ ಆ ಕಥೆ "ಅಂದರು.
ರಮೇಸ ನೂ ಸೇರಿ ಅಲ್ಲಿದ್ದ ಎಲ್ಲಾ ಹುಡುಗಿಯರೂ" ಹೌದು ಸಾರ್.. ಸೂಪರ್ ಸ್ಟೋರಿ" ಅಂದರು ರಾಗವಾಗಿ.
🙄🤔🤔ಹಾನ್, ಯಾವ ದಿಶಾ.. ಯಾವ ಕಿಸ್ಸು.. ಯಾವ ಕನಸು.. ನಾನು ಯಾವತ್ತೂ ಇವರು ಹೇಳುವ ಈ ಸ್ಟೋರಿ ಬರೀಲಿಲ್ಲಾ ಅಲ್ವಾ.. ಎಲ್ಲೋ ಮಿಸ್ ಹೋಡಿತಾ ಇದೆ ಅಂತ ಅನ್ನಿಸಿತ್ತು.ಮೊದಲೇ ಅನ್ನಿಸಿತು, ಆದರೆ ಈಗ ಡೌಟ್ ಜಾಸ್ತಿ ಆಯ್ತು. ಅಂಬಂಡೆ ಅರ್ಧ ಮಾತ್ರ ತಿಂದಿದ್ದೆ. ಅರ್ಧ ಕೈಯಲ್ಲಿಯೇ ಇತ್ತು.
" ಅದು..ಅದು..ನೀವು ಯಾವ ಸ್ಟೋರಿ ಬಗ್ಗೆ ಮಾತಾಡ್ತಾ ಇದ್ದೀರಾ.. ನಾನು ಆ ತರಹ ದ ಸ್ಟೋರಿ ಬರ್ದೇ ಇಲ್ಲ ಅಲ್ವಾ " ಅಂದೆ
ಮ್ಯಾನೇಜರ್ " ಫೇಸ್ಬುಕ್ ನ ಫೇಮಸ್ ಸೆಲೆಬ್ರೇಟಿ ಬರಹಗಾರ, ಕಥೆಗಾರ ಪಾರ್ಥಸಾರಥಿ ಅಂದ್ರೆ ನೀವೇ ಅಲ್ವಾ, ನಿಮ್ಮ ಕಥೆಗಳನ್ನೇ ನಮಗೆ ರಮೇಶ್ ಹೇಳಿದ್ದು " ಅಂದ.
" ಅಲ್ಲ, ನಾನು ಪಚ್ಚು, ab ಪಚ್ಚು.. " ಅಂದೆ.
ಮ್ಯಾನೇಜರ್ ಗೆ ಸಿಟ್ಟು ಬಂತು. ರಮೇಸ ನ ಕಡೆಗೆ ತಿರುಗಿ ಬೈಯ್ಲಿಕ್ಕೆ ಶುರು ಮಾಡಿದ" ಯಾರನ್ನೆಲ್ಲಾ ಕರ್ಕೊಂಡು ಬರ್ತಿ ಮಾರಾಯ , ನಿಂಗೆ ಕಣ್ಣು ಕಾಣಲ್ವ, ಮಾಡ್ಲಿಕ್ಕೆ ಬೇರೆ ಕೆಲಸ ಇಲ್ವಾ ,ನಾವೆಲ್ಲ ಪಾರ್ಥಸಾರಥಿ ಸಾರ್ ಅಂತ ಎಷ್ಟು ಖುಷಿಯಲ್ಲಿ ಇದ್ರೆ,,ನೀನು ಬೇರೆ ಯಾವುದೋ ಅಸಾಮಿ ಯನ್ನು ಕರ್ಕೊಂಡು ಬಂದಿದ್ದಿಯಲ್ಲಾ ಮರ್ರೆ, ಪಚ್ಚು ನಾ ಕಚ್ಚು ನಾ ಮೊದಲು ಈ ಜನ ವನ್ನು ಬೇಗ ಕಳುಹಿಸು..ಜ್ಯೂಸು ವೇಸ್ಟ್,ಅಂಬಂಡೆ ನೂ ವೇಸ್ಟ್.. ಟೈಮೂ ವೇಸ್ಟ್.. ಹಾನ್ ನೀವೆನು ನೋಡ್ತಾ ಇದ್ದೀರಾ, ಎಲ್ಲಾ ನಿಮ್ಮ ನಿಮ್ಮ ಕೆಲಸ ನೋಡಿ ಹೋಗಿ " ಎಂದವನೇ ಸಿಟ್ಟಲ್ಲಿ ಸೀದಾ ಅಲ್ಲಿಂದ ಹೊರ ನಡೆದ.
ಎಲ್ಲಾ ಹುಡುಗಿಯರು ಕೂಡ ಸಿಟ್ಟಲ್ಲಿ ಮುಖ ಸಿಂಡರಿಸಿಕೊಂಡು ಹೊರಟು ಹೋದರು .ಮೊನಲಿಸಾ ಮಾತ್ರ ಮಾರ್ಕರ್ ನಲ್ಲಿ ನಾನು ಹಾಕಿದ ಆಟೋಗ್ರಾಪ್ ಅನ್ನು ಉಜ್ಜುತ್ತಾ ಉಜ್ಜುತ್ತಾ ಕಂಪ್ಲೀಟ್ ಆಗಿ ಆಟೋಗ್ರಾಪ್ ತೆಗೆಯಲು ವಾಶ್ ರೂಮ್ ಕಡೆಗೆ ಓಡಿದಳು.
ಈಗ ನಾನು ಮತ್ತು ರಮೇಸ ಇಬ್ಬರೇ ರೂಮ್ ನಲ್ಲಿ. ನನ್ನ ಕೈಯಲ್ಲಿ ಅರ್ಧ ತಿಂದ ಅಂಬಂಡೆ ಇತ್ತು. ಅದನ್ನು ಏನು ಮಾಡುವುದು ಅಂತ ಗೊತ್ತಾಗ್ಲಿಲ್ಲ.
ರಮೇಸ "ಸಾರ್ ಬೇಕಾದರೆ ತಿನ್ನಿ, ಯಾಕೆ ಸುಮ್ಮನೆ ವೇಸ್ಟ್ ಮಾಡುವುದು " ಅಂದ.
ನನ್ನ ಮರ್ಯಾದೆ ಯನ್ನು ಗುಡಿಸಿ ಗುಂಡಾತರ ಮಾಡಿದ ಇವನಿಗೆ ಮೊದಲು ಒಂದು ಗತಿ ಕಾಣಿಸುವುದಾ ಅಥವಾ ಈ ಅಂಬಂಡೆ ಗೆ ಗತಿ ಕಾಣಿಸುವುದಾ ಅಂತ ಗೊತ್ತಾಗ್ಲಿಲ್ಲ.
ರಮೇಸ ಪುನಃ "ಸಾ ನೀವು ತಿನ್ನಿ ಸಾ.. ಬೇಜಾರು ಮಾಡ್ಕೊಬೇಡಿ" ಅಂದ.
ಅಮಾಯಕ ರಮೇಸನಿಗೆ ಎರಡು ಕೊಡುವ ಅಂತ ಅನಿಸಿದರೂ ಮನಸ್ಸು ಬರಲಿಲ್ಲಾ,ಎಕೆಂದರೆ ಅವನ ಅಭಿಯಾನ ಉತ್ಕಟವಾಗಿತ್ತು.ತಾನು ಇಷ್ಟ ಪಡುವ ಬರಹಗಾರನ ಮೇಲೆ ಇಷ್ಟೊಂದು ಅಭಿಮಾನ ಅದರಲ್ಲೂ ಎರಡೆರಡು ಲೈನ್ ಗಳಲ್ಲಿ ಸ್ಟೇಟಸ್ ಫೋಸ್ಟ್ ಗಳನ್ನು ಮುಗಿಸುವ ಈ ಕಾಲದಲ್ಲಿ, ಸುದೀರ್ಘ ಕಥೆ ಗಳನ್ನು ಓದುವುದು ಮಾತ್ರವಲ್ಲ ಅದನ್ನು ತನ್ನ ಸಹೋದ್ಯೋಗಿ ಗಳಿಗೂ ಓದಿ ಹೇಳಿ ಅವರೂ ಅಭಿಮಾನಿಗಳಾಗುವಂತೆ ಮಾಡುವುದು ಇದೆಯಲ್ಲಾ ಅದು ಈ ತರಹದ ಪರಿಶುದ್ಧ ಹೃದಯದವರಿಗೆ ನಿಷ್ಕಲ್ಮಷ ಮನಸ್ಸಿನವರಿಗೆ ಮಾತ್ರ ಸಾಧ್ಯ.
ಯಾರೇ ಆಗಲಿ ರಮೇಶ ನಂತಹ ಮುಗ್ಧ ಓದುಗನನ್ನು ಅಭಿಮಾನಿ ಯಾಗಿ ಪಡೆಯಲು ಪುಣ್ಯ ಮಾಡಿರಬೇಕು.
ಆದರೆ ಏನೋ ಆಚಾತುರ್ಯ ದಿಂದ ಸರಿಯಾಗಿ ಗುರುತಿಸದೇ ಪಜೀತಿ ಮಾಡಿಕ್ಕೊಂಡು ಬಿಟ್ಟಿದ್ದ ರಮೇಶ.
ಎದ್ದು ನಿಂತವನೇ ನಾನು ರಮೇಸ ನ ಹೆಗಲಿಗೆ ಕೈ ಹಾಕಿ "ರಮೇಶ್..ನಿಮ್ಗೆ ಒಂದು ಸೀರಿಯಸ್ ಆಗಿ advise ಮಾಡ್ಲ.. ಪ್ಲೀಸ್ ರಮೇಶ್ ಮೊದಲು ನೀವು ನಿಮ್ಮ ಈ ಕನ್ನಡಕವನ್ನು ಚೆಂಜ್ ಮಾಡ್ಕೊಳ್ಳಿ , ಟೆಸ್ಟ್ ಮಾಡಿಸಿ ಒಳ್ಳೆಯ ಹೊಸ ಒಂದು ಕನ್ನಡ ಹಾಕ್ಕೊಳ್ಳಿ.. ನಿಮ್ಗೂ ಒಳ್ಳೆಯದಾಗುತ್ತೆ, ನಂನಂತವರಿಗೂ ಒಳ್ಳೆಯದಾಗುತ್ತೆ..ಮಾತ್ರವಲ್ಲ ಎಲ್ಲರಿಗೂ ಒಳ್ಳೆಯದಾಗುತ್ತೆ " ಅಂದವನೇ ಅಲ್ಲಿ ನಿಲ್ಲದೇ ಏನೋ ಫೀಲ್ ಆಗಿ ಭಾರವಾದ ಹೃದಯದೊಂದಿಗೆ ಹೊರ ನಡೆದೆ.
ಆದರೆ ಆ ಟೆನ್ಶನ್ ನಲ್ಲಿ ಅರ್ಧ ಅಂಬಂಡೆ ಅಲ್ಲೇ ಬಿಟ್ಟು ಬರಲು ಮರೆತಿದ್ದೆ. ಅದು ಕೈಯಲ್ಲೇ ಇತ್ತು. ಮೊದಲೇ ನಾಚಿಕೆಟ್ಟಿದ್ದರಿಂದ ಪುನಃ ವಾಪಸ್ ಹೋಗಿ ಇದನ್ನು ಅಲ್ಲೇ ಇಟ್ಟು ಬರಲು ಮನಸ್ಸು ಬರಲಿಲ್ಲ.
ರಮೇಸ ಹೇಳಿದ್ದು ನೆನಪಿಗೆ ಬಂತು... "ಸಾರ್ ಬೇಕಾದರೆ ತಿನ್ನಿ, ಯಾಕೆ ಸುಮ್ಮನೆ ವೇಸ್ಟ್ ಮಾಡುವುದು.."
ಆಹಾ ಎಂತಹ ಮುಗ್ಧತೆ.
ಹಾಗೆ ಉಳಿದ ಅರ್ಧ ಅಂಬಂಡೆ ಯನ್ನು ಬಾಯಿಗೆ ತುರುಕಿಕೊಂಡು , ಅಲ್ಲೇ ಮಾಲ್ ನ ಹೊರಗಡೆ ಆಟೋ ಹಿಡಿದು, ಸ್ಟೇಟ್ ಬ್ಯಾಂಕ್ ಕಡೆಗೆ ಹೊರಟೆ..
ಸ್ಟೇಟ್ ಬ್ಯಾಂಕ್ ಮುಟ್ಟುವಾಗ ನನ್ನ ಫೇಸ್ಬುಕ್ ಆಕೌಂಟ್ ಗೆ ಒಂದು ಫ್ರೆಂಡ್ request ಅದಾಗಲೇ ಬಂದಿತ್ತು,ಹೆಸರು ರಮೇಶ್ ಕುಮಾರ್ ಅಂತ.. 😌😌
............................................
Story by - Ab Pacchu

Comments
Post a Comment