ಹೆಣ್ಣು ಮಗಳು
ಅವನಿಗೆ ಗಂಡು ಮಗು ಅಂದರೆ ಇಷ್ಟ.ಹುಟ್ಟಿದ ಮೊದಲ ಮಗು ಹೆಣ್ಣು.ಎರಡನೆಯದ್ದು ಕೂಡ ಹೆಣ್ಣೇ.ಹೆಂಡತಿ ಬಳಿ ಹೇಳಿದ ಮೂರನೆಯದ್ದು ಏನಾದರೂ ಹೆಣ್ಣಾದರೇ ಮಗುವನ್ನು ನಾನೇ ಕೊಂದು ಬಿಡುತ್ತೇನೆ ಎಂದು. ದೇವರ ಪ್ರಸಾದ, ಆಶೀರ್ವಾದವೋ ಎಂಬಂತೆ ಮೂರನೆಯದ್ದು ಕೂಡ ಹೆಣ್ಣೇ ಆಯಿತು. ಮಗು ಹುಟ್ಟಿದ ರಾತ್ರಿ ಯೇ ಮಗುವನ್ನು ಬಿಸಾಡಿ ಬರಲು ನಿರ್ಧರಿಸಿ ಯಾರಿಗೂ ತಿಳಿಯದಂತೆ ಮಗುವನ್ನು ಎತ್ತಿಕೊಂಡು ಒಂದು ಚೀಲಕ್ಕೆ ಹಾಕಿ ಹೊರಗೆ ಹೋಗಲು ರೆಡಿಯಾದ. ಮೊದಲ ಮಗಳು ಅವನನ್ನು ನೋಡಿದಳು. ಅಪ್ಪ ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಕೇಳಿದಳು. ಅರ್ಜೆಂಟ್ ಆಗಿ ಒಂದು ಕೆಲಸ ಇದೆ, ರಪ್ಪ ಹೋಗಿ ಬರುತ್ತೆನೆ ಅಂದ " ಅಪ್ಪಾ...ಪಾಪು ಹುಟ್ಟುವ ಚಿಂತೆಯಲ್ಲಿ ನಿನ್ನೆಯಿಂದ ನೀನು ಊಟವೇ ಮಾಡಿಲ್ಲ, ನೋಡು ಎಷ್ಟು ಸೊರಗಿ ಹೋಗಿದ್ದೀಯಾ, ಈ ಬುತ್ತಿ ತಗೊಂಡು ಹೋಗಪ್ಪ.. ದಾರಿಯಲ್ಲಿ ನಿನಗೆ ಹಸಿವಾಗಬಹುದು..ಪಾಪು ಬಗ್ಗೆ ಚಿಂತೆ ಮಾಡಬೇಡ, ನಾನು ತಂಗಿ ಜೋಪಾನವಾಗಿ ನೋಡಿಕೊಳ್ಳುತ್ತೇವೆ, ನೀನು ಕೆಲಸ ಮುಗಿಸಿ ಬೇಗ ಬಾ ಅಪ್ಪ, ಕಾಯುತ್ತಿರುತ್ತೇವೆ !!" ಅಂದಳು
#ಇಷ್ಟೇ..
ab

Comments
Post a Comment