ಹಪ್ಪಳ ಮತ್ತು ಚಂದಿರ


 ಅಪ್ಪ ಎಂದರೆ

ಬರೀಯ ಜನಕ ಅಲ್ಲ

ಬಾಳಿನ ಆಮ್ಲಜನಕ 


* * * * * * * * * * * * * * * * * *


ಅದು ಹಪ್ಪಳ

ಕರಿಯುವುದು ಅಲ್ಲ

ಪೂರ್ಣಚಂದಿರ

ಬಾಣಲೆಯೊಳಗೆ ಅರಳೋದು


* * * * * * * * * * * * * * * * * *


ಕರ್ತವ್ಯ ಅಂದರೆ

ಸೂರ್ಯಗ್ರಹಣದ ದಿನವೂ

ಸೂರ್ಯಕಾಂತಿ ಅರಳುವುದು


* * * * * * * * * * * * * * * * * *


ಚಿಪ್ಪು ಬಿಟ್ಟರೆ ಮುತ್ತು

ಹುಟ್ಟಿಸುವ ಕಲೆ

ಗೊತ್ತಿರುವುದು ಕೆಸುವಿನ ಎಲೆಗೆ


* * * * * * * * * * * * * * * * * *


ಇಡ್ಲಿ ಜೊತೆಗೆ ವಡೆ

ಪೂರಿ ಜೊತೆಗೆ ಬಾಜಿ

ಮತ್ತು ನನ್ನ ಜೊತೆ ಅವಳು


* * * * * * * * * * * * * * * * * *


ಹಿತವಾಗಿ ಹದವಾಗಿ 


ab pacchu

moodubidire

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ