ಸೆಲ್ಫೀ ಮತ್ತು ನಾನು
ನನಗೇನಾದರೂ ಭೇಟಿ ಮಾಡುವ ಅವಕಾಶ ಸಿಕ್ಕರೆ, ಹಾಗೇ ಮಾತನಾಡುತ್ತಾ ಮಾತನಾಡುತ್ತಾ ಅವರ ಮನೆಯಲ್ಲಿಯೇ ಫಳಾರ ಸೇವಿಸುತ್ತಾ, ಕೊನೆಯಲ್ಲಿ ಬರುವಾಗ ಹಾಗೇ ಒಂದು selfie ತೆಗೆಯೋ ಚಾನ್ಸ್ ಸಿಗುವಂತಿದ್ದರೆ..... ಈ ಕೆಳಗಿನವರ ಬಳಿ selfie ತೆಗೆದುಕೊಂಡು ಬಂದು ಬಿಡುತ್ತೇನೆ.ನನ್ನ ಪಟ್ಟಿ ತುಂಬಾ ದೊಡ್ಡದಿದೆ ಮತ್ತು ಅದು ತುಂಬಾನೇ ಹಿಂದಿನಿಂದಲೇ ಶುರುವಾಗುತ್ತದೆ.
ಬೇಟಿ ಮಾಡಲು ಸೆಲ್ಫೀ ತೆಗೆಯಲು ಮೊದಲು ನಾನು ಪುರಾಣಕ್ಕೆ ಓಡಿಬಿಡ್ತೇನೆ..ಹಾಗೇ ಸೆಲ್ಫೀ ತೆಗೆದ ಬಳಿಕ ಅವರ ಬಳಿ ಕೇಳಲು ನನ್ನ ಬಳಿ ಕೆಲವು ಪ್ರಶ್ನೆ ಗಳು ಕೂಡ ಇದೆ.
1.ರಾಹು ಮತ್ತು ಕೇತು (ತಲೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು.. ದೇಹ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಂತ ನಿಮಗೆ ಯಾವತ್ತೂ ಕೂಡ ಅನಿಸಿಯೇ ಇಲ್ಲವೇ.. ಎಂದು ಕೇಳ್ತೇನೆ )
2.ಇಂದ್ರ( ನೀನು ಯಾಕೆಯಾ ಯಾವಾಗಲೂ ಅಷ್ಟೊಂದು rash.. ಎಂದು ಕೇಳ್ತೇನೆ )
3.ವಾಲಿ(ನೀನು ಆಗ್ಬಹುದಾ ರಾವಣನಿಗೆನೇ ನೀರು ಕುಡಿಸಿದೆ ಅಲಾ.. ಆದ್ರೆ ಸ ನೀನು ಸ್ವಲ್ಪ ಒಳ್ಳೆಯನಾಗಿರ್ಬೇಕಿತ್ತು ಮಾರಾಯ )
4.ಹನುಮಂತ(ಹೇಯ್ ಆಂಜನೇಯ,ಭಕ್ತಿ ಅಂದರೆ ನೀನು, ನೀನು ಅಂದರೆ ಭಕ್ತಿ.. ನನಗೂ ತುಸು ಹೇಳಿಕೋಡು ಪ್ರಭು ಶ್ರೀರಾಮಚಂದ್ರನ ಹೃದಯದೊಳಗೆ ಹಾಗೇ ಇಳಿದುಬಿಡುವ ಆ ನಿನ್ನ ಪರಿಯ.. )
4. ನಳ ಮಹಾರಾಜ (ನನಗೊಮ್ಮೆ ಹಾಗೇ ಆಶೀರ್ವಾದ ಮಾಡಿ ಬಿಡಿ, ನನಗೂ ನಿಮ್ಮಂತೆ ಯೇ ಒಳ್ಳೆಯ ಬಾಣಸಿಗನಾಗ ಬೇಕೆಂಬ ಆಸೆ )
4. ಅಶ್ವತ್ಥಾಮ (ನೀನು ಮಾತ್ರ ಭಯಂಕರ ಗಡಿಬಿಡಿ ಮಾರಾಯ..potential ಇದ್ರೂ ವೇಸ್ಟ್ ಅಂತ ಅನಿಸಿದ್ದು ನೀನೇ.. )
4. ಬೀಷ್ಮಾಚಾರ್ಯ (ಅಜ್ಜ ನೀವು ಯಾಕೆ ಹಾಗೆ ಸತ್ತು ಹೋದಿರಿ... ಬದುಕ ಬಹುದಿತ್ತಲ್ಲವೇ? ಈಗಲೂ ಇದ್ದಿದ್ದರೆ ಎಷ್ಟು ಚಂದ ಇತ್ತು ಅಲಾ.. ನಿಮ್ಮ ಬಳಿಯೇ ಕೇಳಬೇಕೆಂದಿದ್ದ ಹಲವು ಕಥೆಗಳು ಇದ್ದವು .. )
5.ಕರ್ಣ (ಕರ್ಣ ನೀನು ಕೌರವನ ಪಾರ್ಟಿ ಸೇರಿರದೇ ಇದ್ದಿದ್ದರೆ, ನಿನ್ನಷ್ಟು ಇಷ್ಟ ಯಾರೂ ಕೂಡ ಆಗುತ್ತಿರಲಿಲ್ಲವೇನೋ.. )
7.ರಾಧೆ (ನಿನ್ನ ಮೌನ ಪ್ರೀತಿಗೆ ಅದೆಂತಹ ಶಕ್ತಿ, ಹೇಗೆ ನೀನು ನಮ್ಮ ಕೃಷ್ಣ ನನ್ನು ಅಷ್ಟು ಸುಲಭವಾಗಿ ಒಲಿಸಿಕೊಂಡೆ.. )
6. ಶ್ರೀ ಕೃಷ್ಣ ಪರಮಾತ್ಮ (ಹೇಯ್ ವಾಸುದೇವ, ಹೇಗೋ ಯಾವಾಗ ನೋಡಿದರೂ ಸದಾ ನಗುತ್ತಲೇ ಇರುತ್ತೀಯಲ್ಲೋ ..ನಮಗೂ ಚೂರು ಅದನ್ನು ದಾರೆ ಎರೆಯ ಬಲ್ಲೆಯಾ...ಕೃಷ್ಣಂ ವಂದೇ ಜಗದ್ಗುರುಂ 😊🙏🏻)
ಇನ್ನು ಸ್ವಲ್ಪ ಮುಂದೆ ಬರ್ತೆನೆ.. ಆಗ ನಾವೆಲ್ಲ ಹುಟ್ಟಿರಲಿಲ್ಲ ಮತ್ತೆ ಇವರಾರೂ ಕೂಡ ಈಗ ಇಲ್ಲ.
1.ಬ್ರಹ್ಮಗುಪ್ತ (ನಿಮ್ಮ ಸೊನ್ನೆಯಿಂದಲೇ ಈ ಜಗತ್ತು ಇಂದು ಲೆಕ್ಕ ಮಾಡುತ್ತಿದೆ,ನಮಗೆ ನಿಮ್ಮ ಬಗ್ಗೆ ಹೆಮ್ಮೆ ಇದೆ.. )
2.ಛತ್ರಪತಿ ಶಿವಾಜಿ ಮಹಾರಾಜ್(ನಿಮ್ಮನ್ನು ನಾವು ಈಗಲೂ ನೆನಪಿಸಿಕೊಳ್ತೇವೆ ಗೊತ್ತಾ, ಆಹಾ ಅದೆಂತಹ ಕ್ಷಾತ್ರ ತೇಜಸ್ಸು ನಿಮ್ಮದು..ನಿಮ್ಮ ಹೆಸರಲ್ಲೇ ಅದೆಂತಹ ಶಕ್ತಿ ಇದೆ .. )
3.ಮಂಗಲ್ ಪಾಂಡೆ (ಎಲ್ಲರಿಗಿಂತ ಮೊದಲು ದೊಡ್ಡದಾಗಿ ಸ್ವಾತಂತ್ರ್ಯ ದ ಕಿಡಿ ಹೊತ್ತಿಸಿದ ನಿಮ್ಮನ್ನು ಈ ದೇಶ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ )
4.ಭಗತ್ ಸಿಂಗ್ (ಏನು ಹೇಳಲಿ... ಹೆಸರು ಹೇಳಿದಕೂಡಲೇ ಮೈ ಮನ ರೋಮಾಂಚನವಾಗಿಬಿಡುತ್ತದೆ. ಬಲಿಧಾನ, ತ್ಯಾಗ, ದೇಶ ಪ್ರೇಮ ಅಂದರೆ ಅದು ನೀವೇ ಅಲ್ಲವೇ.. )
5. ಸುಭಾಷ್ ಚಂದ್ರ ಬೋಸ್ (ನೇತಾಜಿ.. ನೀವು ಹಾಗೇ ಮರೆಯಾಗಿ ಹೋಗಬಾರದಿತ್ತು..ನಮಗೆ ಭಾಗ್ಯ ಇಲ್ಲ )
6.ಸಾವರ್ಕರ್ (ಈಗೀಗ ಒಂದು ದಿನ ಮನೆಯಲ್ಲಿ ಹಾಗೇ ಕುಳಿತುಬಿಡಲು ಬೋರ್ ಆಗುತ್ತೆ, ಅದೇಗೆ ಅಷ್ಟು ದಿನ ಅಂಡಮಾನ್ ನ ಕತ್ತಲ ಜೈಲುಗಳಲ್ಲಿ ಕಳೆದು ಬಿಟ್ಟಿರಿ ನೀವು... )
7.ಸೌರಭ್ ಕಾಲಿಯಾ( ಸೈನಿಕರು ಅಂತ ಬಂದಾಗ ನಿಮ್ಮ ಹೆಸರು ನನಗೆ ಮೊದಲು ನೆನಪಾಗುತ್ತೆ ಸಾರ್.. ಆಹಾ ಅದೆಂತಹ ಬಲಿದಾನ ನಿಮ್ಮದು.. ನಿಮಗಿದೆ ನನ್ನದೊಂದು ನಿರಂತರ ಸೆಲ್ಯೂಟ್ )
8.ಪೂರ್ಣಚಂದ್ರ ತೇಜಸ್ವಿ (ನಂಗೆ ನೀವೂ ಇಷ್ಟ ನಿಮ್ಮ ತಂದೆಯೂ ಇಷ್ಟ. ನಂಗೆ ನಿಮ್ಮಂತೆ ಯೇ ಕಾಡುಗಳಲ್ಲಿ ಗದ್ದೆ ಬದುವಲ್ಲಿಯೇ ಕಳೆದು ಹೋಗಿ ಬಿಡಬೇಕೆಂಬ ಆಸೆ)
9. P. B ಶ್ರೀನಿವಾಸ್ ( ನಿಮ್ಮ ಹಾಡುಗಳು ಇನ್ನೂ ಸತ್ತಿಲ್ಲ...)
10. ಮುಕೇಶ್ ಕುಮಾರ್ (ನಿಮ್ಮ ಹಾಡುಗಳಿಗೆ ಅದೇಗೆ ಅಷ್ಟೊಂದು ನಶೆ ಏರಿಸೋ ಶಕ್ತಿ..)
11. ಕಲ್ಪನಾ ಚಾವ್ಲ (ಹೆಣ್ಣು ಮಕ್ಕಳಿಗೆ ಬಹುಶಃ ನಿಮಗಿಂತ ಒಳ್ಳೆಯ ರೋಲ್ ಮಾಡೆಲ್ ಯಾರಿರಲು ಸಾಧ್ಯ..)
11. ಅಟಾಲ್ ಬಿಹಾರಿ ವಾಜಪೇಯಿ (ತಾತ.. "yeh desh rehna chahiye, iss desh ka lokthantra Amar rehna chahiye.." ಇನ್ನೂ ಕಿವಿಯಲ್ಲಿ ಹಾಗೇ ಮೊಳಗ್ತಾ ಇದೆ... ನೀವು ಇರಬೇಕಿತ್ತು ಅಜ್ಜ)
12. A.P.J ಅಬ್ದುಲ್ ಕಲಾಂ (ಈ ದೇಶ ರಾಕೆಟ್ ಬಿಟ್ಟಾಗಲೆಲ್ಲ ನಿಮ್ಮದೇ ನೆನಪಾಗುತ್ತೆ ಸಾರ್.. Please ಇನ್ನೊಮ್ಮೆ ಹುಟ್ಟುವುದಿದ್ದರೆ ಈ ದೇಶದಲ್ಲಿಯೇ ಹುಟ್ಟಿ ಬನ್ನಿ ☺️🙏)
ಇನ್ನೂ ಹಲವಾರು ಹೆಸರುಗಳಿವೆ. ಅನುದಿನವೂ ಕಾಡುವಂತವರು. ಅವರೆಲ್ಲರೂ ಸತ್ತಿಲ್ಲ.. ನೆನಪುಗಳಲ್ಲಿಯೇ ಇನ್ನೂ ಜೀವಂತವಾಗಿದ್ದಾರೆ.. ❤️🙏
........................................................................................
#ಏನೋ_ಒಂದು..
ab pacchu
moodbidri

Comments
Post a Comment