ಹಪ್ಪಳ ಮತ್ತು ಲಾಡು...
ವಿಷಯ ಎಂತ ಗೊತ್ತುಂಟಾ.. ಒಂದು ಸಮಾರಾಧನೆ ಉಂಟು.ಇನ್ನು ಶುರು ಆಗ್ಲಿಲ್ಲ..ಹಪ್ಪಳ ಮತ್ತು ಲಾಡು ಹಂಚಲು ನಾನು ಸದ್ಯಕ್ಕೆ ಮನಸು ಮಾಡಿದ್ದೇನೆ.ಹೀಗೆ ಮನಸು ಮಾಡುವ ನಡುವಲ್ಲಿ ಒಂದೆರಡು ಲಾಡು ಹಾಗೂ ಹಲವು ಹಪ್ಪಳಗಳನ್ನು ಬಡಿಸುವುದಕ್ಕಿಂತ ಮೊದಲೇ ಟೇಸ್ಟ್ ನೋಡಿ ನೋಡಿಯೇ ನಾನು ಸಪಾಯಿ ಮಾಡಿದ್ದೇನೆ..ನಾಲ್ಕು ಪೋಡಿಯ ಟೇಸ್ಟ್ ಸಹ ಸೂಪರ್ ಇತ್ತು. ಪುಣ್ಯಕ್ಕೆ ಗೋಬಿ ಮಂಚೂರಿ ಇರ್ಲಿಲ್ಲ.
ಹಾಗಾಗಿ Next ನಾನು ಊಟಕ್ಕೆ ಕುಳಿತಾಗ ಲಾಡು, ಪೋಡಿ ಮತ್ತು ಹಪ್ಪಳ ಈ ಮೂರನ್ನು ಬಡಿಸಿಕೊಳ್ಳಲೇಬಾರದೆಂದು ಮನಸ್ಸಿನಲ್ಲಿಯೇ ದೃಢ ನಿಶ್ಚಯ ಮಾಡಿದ್ದೇನೆ..ಮತ್ತೆ ಯಾರಾದರೂ ಜಾಸ್ತಿ ಒತ್ತಾಯ ಮಾಡಿದರೆ ಆಗ ಮಾತ್ರ ನಾನು ಎಂದಿನಂತೆ ಸಭೆಗೆ ಮರ್ಯಾದೆ ಕೊಡ್ಲೇ ಬೇಕಾಗ್ತದೆ...ಅದು ನನ್ನ ಧರ್ಮ, ಕರ್ತವ್ಯ ಹಾಗೂ ಜವಾಬ್ದಾರಿ ಆಗಿದೆ ಎಂದು ನಾನು ಅರಿತಿದ್ದೇನೆ..
ಊಟದ ಗೌರವ ಯಾವತ್ತೂ ನಾವು ಎತ್ತಿ ಹಿಡಿಯಬೇಕು😌😎😋🤟
ಪಚ್ಚುಪಟಗಳು
ab
Comments
Post a Comment