ಕರ್ಚೀಪು ರಿಸರ್ವೇಶನ್

 


ಅಪಾಯಕಾರಿ ಆಟಗಳನ್ನು ಆಡುವುದು ನನ್ನ ಬ್ಲಡ್ ನಲ್ಲಿಯೇ ಇತ್ತು....

ಅವತ್ತೊಂದು ದಿನ ಹೀಗೆ ಆಯಿತು. ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ನಿಂತಿದ್ದೆ. ಬಸ್ ಬಂತು. "ಬೇರೆ ಕಡೆ ಹೋಗುವ ಬಸ್ ಗಿಂತ   ನಾನು ಹೋಗುವ ಬಸ್ಸಿನಲ್ಲಿಯೇ ಯಾವತ್ತೂ ರಶ್ ಜಾಸ್ತಿ" ಎಂತ ನೀವೆಲ್ಲಾ ಹೇಗೆ ಫೀಲ್ ಮಾಡ್ತಿರೋ,ನಾನು ಕೂಡ ಹೆಚ್ಚು ಕಡಿಮೆ ಅದೇ ಕೆಟಗರಿ ಮತ್ತು ಯಾವಾಗಲೂ ನನ್ನದು ಅದೇ ಅವಸ್ಥೆ. 

ಜನರು ಬಾಹುಬಲಿ ಮೂವಿ ಯ ಕಾಲಕೇಯ ಸೈನ್ಯದಂತೆ ಬಸ್ ಅನ್ನು ಮುತ್ತತೊಡಗಿದರು.

ನಾನು ಬಹಳ ಚಾಲು, ಹೋ ಎನ್ನುತ್ತಾ ಎಲ್ಲರಿಗಿಂತ ಮೊದಲೇ, ಮೊದಲನೆಯವನಾಗಿ ಬಸ್ ಹತ್ತಿದೆ. ಆದರೆ ಅದಾಗಲೇ ಅದ್ಯಾರೋ ವಿಂಡೋ ಸೀಟ್ ಗಳಲ್ಲಿ ಕರ್ಚೀಪು ಹಾಕಿ ಸೀಟು ರಿಸರ್ವ್ ಮಾಡಿ ಇಟ್ಟಿದ್ದರು.

ಇದನ್ನು ನೋಡಿ ನನ್ನ ಬ್ಲಡ್ ಕೊತ ಕೊತನೇ ಕುದಿಯತೊಡಗಿತು. Discrimination ಅಂದರೆ ನನಗೆ ಆಗಲ್ಲ, ಎಲ್ಲರೂ ಕಷ್ಟ ಪಟ್ಟೇ ಬಸ್ ಹತ್ತಿ ಸೀಟು ಹಿಡಿಯಬೇಕು. ಈ ರೀತಿಯಾಗಿ ಆರಾಮವಾಗಿ ಸೀಟು ಹಿಡಿಯುವವರನ್ನು ಕಂಡರೆ ನನಗೆ ಪಿತ್ತ ನೆತ್ತಿಗೇರುತ್ತದೆ. ಆದರೂ ಕೂಡ ನಾನು ಏನೂ ಮಾಡಲ್ಲ, ಯಾಕೆಂದರೆ ಕಾನೂನನ್ನು ಕೈಗೆತ್ತಿಕೊಳ್ಳುವುದು ನನಗೆ ಇಷ್ಟವಿಲ್ಲ .

ಈ ರೀತಿ ಸೀಟು ಹಿಡಿದು ತಮ್ಮನ್ನು ತಾವು ಬುದ್ಧಿವಂತರು ಅಂತ  ತಿಳಿದುಕೊಳ್ಳುವ ಇಂತವರಿಗೆ ಒಂದು ಒಳ್ಳೆಯ ಮದ್ದು ಅರೆಯಬೇಕೆಂದು ನಾನು ತುಂಬಾ ದಿನಗಳಿಂದ ಕಾಯುತ್ತಿದ್ದೆ.

ಇವತ್ತು ಮಾಡ್ತಿನಿ ಇವರಿಗೆ ಸರಿಯಾಗಿ ಎಂದು,ಜನರು ಮೇಲೆ ಬರುವ ಮೊದಲೇ ಎಲ್ಲಾ ವಿಂಡೋ ಸೀಟ್ ನಲ್ಲಿ ಬಿದ್ದಿದ್ದ ಕರ್ಚೀಪು ಗಳನ್ನು ಹೆಕ್ಕಿ, ಯಾವುದೋ ಒಂದು ಸೀಟ್ ನ ಅಡಿಯಲ್ಲಿ ಬಿಸಾಕಿದೆ.

ಹಾಗೆ ಬಿಸಾಡಿದವನೇ ಯಾವುದೇ ಸೀಟಿನಲ್ಲಿ ಕುಳಿತುಕೊಳ್ಳದೇ ಸೈಲೆಂಟ್ ಆಗಿ ನಿಂತುಕೊಂಡೆ.

ಜನ ಎಲ್ಲಾ ಒಂದೊಂದಾಗಿ ಬಸ್ ಒಳಗೆ ಬಂದರು. ಈಗ ನೋಡಿ ಅಸಲಿ ಆಟ ಶುರು. 
ಚೊರೆಪಟ್, ಪೆಟ್ಟ್-ಲಡಾಯಿ ಎಲ್ಲಾ ಶುರುವಾಯಿತು. ರಿಸರ್ವೇಶನ್, ಸಮಾನತೆಯ ಹಕ್ಕು ಎಲ್ಲಾ ವಿಷಯದ ಬಗ್ಗೆ ಅಲ್ಲೊಂದು ಡಿಬೇಟ್ ಶುರುವಾಯಿತು. ನಾನು ಏನೂ  ಗೊತ್ತಿಲ್ಲದ್ದ ಅಮಾಯಕನಂತೆ ಈಯರ್ ಫೋನ್ ಹಾಕಿಕೊಂಡು ಸಾಂಗ್ ಕೇಳುವವನಂತೆ ನಟಿಸಿತೊಡಗಿದೆ ಮತ್ತು ಅವರೆಲ್ಲರ ಮೊಂಡುವಾದಗಳನ್ನು ಶ್ರದ್ಧೆಯಿಂದ ಆಲಿಸತೊಡಗಿದೆ.

ಬಸ್ ಮುಂದೆ ಚಲಿಸತೊಡಗಿತು,ಆದರೆ ಇವರ ವಾಗ್ವಾದ ಮಾತ್ರ ಮುಗಿಯುವ ಲಕ್ಷಣ ಕಾಣುತ್ತಿರಲಿಲ್ಲ. ಮಧ್ಯದಲ್ಲಿ ಯಾರೋ ಜೋರಾಗಿ ಹೇಳಿದ್ದು ಕಿವಿಗೆ ಬಿತ್ತು. " ಆ ಬಡ್ಡಿಮಗ ನನ್ನ ಹೊಸ ಕರ್ಚೀಪು ಬಿಸಾಕಿದವ ಒಮ್ಮೆ ಸಿಗ್ಬೇಕಿತ್ತು..." 
😅🤣😂

     " #ಕರ್ಚೀಪು_ರಿಸರ್ವೇಶನ್   "

................................................

story by - AB Pacchu,
                 Moodbidri
                 Mangalore(D.K)



Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ