ನೆನಪಿನ ಹುಡುಗಿಯೇ..
ಭಟ್ಟರ ಒಲವಿನ ಸಾಲಿಗೆ ವಿಜಯ ಪ್ರಕಾಶ್ ನೇರಾ ಹೃದಯಕ್ಕೆ ನಾಟುವಂತೆಯೇ ಹಾಡಿದ "#ನೆನಪಿನ_ಹುಡುಗಿಯೇ..." ನಿಜವಾಗಿಯೂ ಕಳೆದುಹೋಗುವಷ್ಟು ಚೆನ್ನಾಗಿದೆ..
ಅಜನೀಶ್ ಲೋಕನಾಥ್ ಸಂಗೀತದ ಇದರಲ್ಲಿ ವಾಯಲಿನ್ BGM ತೀವ್ರವಾಗಿ ಕಾಡುವಂತಿದ್ದರೆ,ಈ ಕೆಳಗಿನ ಸಾಲುಗಳು ಹೃದಯಕ್ಕೆ ತಕ್ಕ ಮಟ್ಟಿಗೆ ಗಾಯ ಮಾಡಬಲ್ಲದು....
" ಈ ಮುಗಿಯದ ಕಥೆಯಲ್ಲಿ
ಮೊದಲ ಸಾಲು ನನದೇ
ಕೊನೆ ಸಾಲು ಕೂಡ ನನದೇ
ನಿಂದೇನಿದೆ.?!...."
" ಹಳೆ ಬಯಕೆಯ ಬಳ್ಳಿಯಲಿ,
ಹೂವೆಲ್ಲವು ನಿನದೇ..
ಮುಳ್ಳು ಕೂಡ ನಿನದೇ,
ನಂದೇನಿದೆ?!.... "
ಇನ್ನೂ ಕೇಳದಿದ್ದರೆ, ಒಮ್ಮೆ ಕೇಳಿ... ನಿಮಗೂ ಇಷ್ಟ ಆಗಬಹುದು.
(ಪೂರ್ತಿ ಹಾಡು YouTube ನಲ್ಲಿದೆ)
ab
Comments
Post a Comment