ಮಳೆಗಾಲದ ಮುಗ್ಧ ಪ್ರಾರ್ಥನೆ

ಜೂನ್ ಒಂದು ಎಂದರೆ ಒಂದು ಉದ್ದದ ರಜೆ ಕಳೆದು, ಕೈಯಲ್ಲಿ ಕೊಡೆ ಇದ್ದರೂ ಮಳೆಯಲ್ಲಿ ಅರ್ಧಂಬರ್ದ ಒದ್ದೆಯಾಗುತ್ತಾ, ನಲಿಯುತ್ತಾ, ಕೊಡೆಯಿಂದ ಹೊರಗೆ ಕೈ ಚಾಚಿ ಹನಿ ನೀರಿಗೆ ಕೈಯೊಡ್ಡುತ್ತಾ... ಶಾಲೆಗೆ ಹೋಗುತ್ತಿದ್ದ ದಿನಗಳು ಅವು. ನಾನಂತು ಜೋರು ಮಳೆ ಬಂದು ಶಾಲೆ ಮುಳುಗಿ ಹೋಗಲಿ, ಶಾಲೆ ಬಿದ್ದು ಹೋಗಲಿ, ಶಾಲೆಯ ಸೂರು ಕಿತ್ತು ಹೋಗಲಿ, ಶಾಲೆಗೆ ಖಾಯಂ ರಜೆ ಸಿಗಲಿ... ಎಂದು ಮುಗ್ಧನಾಗಿ, ತುಂಬಾ ವಿನೀತನಾಗಿ ದೇವರ ಮುಂದೆ ಬೇಡಿಕೊಳ್ಳುತ್ತಿದ್ದೆ.ಇಂತಹ  ಮುಗ್ಧ ಬೇಡಿಕೆ ಗಳಿಗೆಲ್ಲ ದೇವರು ತಥಾಸ್ತು ಎಂದು ಹೇಳಿದ್ದಿದ್ದರೆ ನಾನು ಹೋಗಿದ್ದ  ಅಷ್ಟೂ ಶಾಲೆಗಳು ಯಾವತ್ತೋ ಬಿದ್ದು ಹೋಗುತ್ತಿದ್ದವು...


ಆದರೆ ದೇವರು ದೊಡ್ಡವನು ನೋಡಿ, ನನ್ನ ಬೇಡಿಕೆಗಳನ್ನು ಈಡೇರಿಸದೆ ಈ ಸಮಾಜಕ್ಕೆ ಒಳ್ಳೆಯದು ಮಾಡಿದ ಅಂತ ಕಾಲೇಜು ಬಿಟ್ಟ ಮೇಲೆ ನನಗೆ ನಿಧಾನಕ್ಕೆ ಅರ್ಥ ಆಯಿತು..ಆದರೂ ಕಾಲೇಜಿನಲ್ಲಿ ಕೂಡ ನನ್ನ ಮುಗ್ಧ ಬೇಡಿಕೆಗಳು ಇದೇ ರೀತಿ ಇದ್ದವು ಮಾತ್ರ..ಆದರೆ ಕಾಲೇಜು ಗಳು  ಪ್ರಾಥಮಿಕ ಶಾಲೆಗಳಿಗಿಂತ ಸ್ಟ್ರಾಂಗು ನೋಡಿ, ಅವುಗಳೆಲ್ಲ ಹಾಗೇ ಗಾಳಿ ಮಳೆಗೆ ಸುಲಭಕ್ಕೆ ಬಿದ್ದು ಹೋಗುವ ಪ್ರಶ್ನೆಯೇ ಇರಲಿಲ್ಲ..ಆದರೂ ಪ್ರೀ ಟೈಂ ಅಲ್ಲಿ ಕಾಲೇಜಿನ ಗೋಡೆಗಳನ್ನು ಮುಟ್ಟಿ ಮುಟ್ಟಿ ನೋಡುತ್ತಿದ್ದೆ, ಹೇಗೆ ಜೋರು ಗಾಳಿ ಮಳೆ ಬಂದರೆ ಬೀಳಬಹುದೋ ಇಲ್ಲವೋ ಎಂದು...


🙄🤔🏃🏻🏃🏻


#ಏನೋ_ಒಂದು 

ab

 

Comments

Popular posts from this blog

ಗಗನದ ಸೂರ್ಯ

ಒಂದು ಉಗ್ರ ಪ್ರತಿಭಟನೆ

The Priest.!