ನಮ್ಮ ದೇವಸ್ಥಾನಗಳ ಇತಿಹಾಸ ಶ್ರಿಮಂತವಾದದ್ದು

 

ಪ್ರವೀಣ್ ಮೋಹನ್ ಅಂತ.

ಕೆಲವರಿಗೆ ಇವರ ಬಗ್ಗೆ ಅದಾಗಲೇ ಗೊತ್ತಿರಬಹುದು ಇನ್ನು ಕೆಲವರಿಗೆ ಬಹುಶಃ ಇನ್ನೂ ಗೊತ್ತಿರಲಿಕ್ಕಿಲ್ಲ.

ಇವರು YouTube ನಲ್ಲಿ ವೀಡಿಯೊಗಳನ್ನು ಹಾಕಿದರೆ,YouTube ಕೂಡ ಇವರ ಕೆಲವೊಂದು ವೀಡಿಯೋಗಳನ್ನು ಡಿಲೀಟ್ ಮಾಡುತ್ತದೆ! ಹಲವು ಸಲ ಮಾಡಿದೆ ಕೂಡ!!

ಅಂದ ಹಾಗೆ ಯಾರಿವರು.?

ಇವರ Identity ಯೇ ಇವರ ಕೆಲಸಗಳು.

ಇವರ ಕೆಲಸಗಳು ಏನು..ಏನು ಮಾಡುತ್ತಾರೆ ಈ ಮನುಷ್ಯ ?

ಇವರ ಕೆಲಸಗಳು ಇವುಗಳೇ.... ನಿರಂತರವಾದ Independent ಸಂಶೋಧನೆ,ಪುರಾತನ ಇತಿಹಾಸದ ಅನ್ವೇಷಣೆ,ಕಲ್ಲುಗಳು,ಲಿಂಗಗಳು ಇನ್ನಿತರ ವಾಸ್ತುಶಿಲ್ಪಗಳು ಹೇಳೋ ನಿಜವಾದ ಸತ್ಯ,Archeology ಯ ಆಳವಾದ ಅಧ್ಯಯನ ,ದೇವಸ್ಥಾನಗಳಲ್ಲಿರುವ ತಂತ್ರಜ್ಞಾನ,ಆ ಕಾಲದ ವಿಜ್ಞಾನ.. etc etc..

ಸದ್ಯಕ್ಕೆ ಈ ಮನುಷ್ಯ ಅದೆಷ್ಟು ಇಷ್ಟ ಆಗಿ ಬಿಟ್ಟಿದ್ದಾರೆ ಎಂದರೆ, ಸ್ವಲ್ಪವೇ ಸ್ವಲ್ಪ ಬಿಡುವು ಸಿಕ್ಕರೂ ಸಾಕು ನಾನಂತು ಇವರ YouTube Channel ನಲ್ಲಿಯೇ ಕಳೆದು ಹೋಗಲು ಇಷ್ಟ ಪಡುತ್ತೇನೆ. ಇಡೀ ದಿನ ಬೇಕಾದರೂ ನಾನು ಪ್ರವೀಣ್ ಮೋಹನ್ ವೀಡಿಯೋಗಳನ್ನು ಅತೀ ಆಸಕ್ತಿಯಿಂದ,ಶ್ರದ್ಧೆಯಿಂದ ನೋಡಬಲ್ಲೆ.

ನಮಗೆಲ್ಲಾ ಗೊತ್ತು ಭಾರತದಲ್ಲಿ ಈಗಲೂ ಎಲ್ಲಿಯೇ ಅಗೆದರೂ ನಮಗೆ ಹಳೆಯ ಕಾಲದ ದೇವಾಲಯಗಳು, ವಿಗ್ರಹಗಳು ಸಿಕ್ಕೇ ಸಿಗುತ್ತದೆ.ಆದರೆ ಅದು ಅಷ್ಟು ದೊಡ್ಡ ವಿಷಯವೇ ಅಲ್ಲ. ಅದು ನಮಗೆ ಸಾಮಾನ್ಯ ಸಂಗತಿ. ಈ ಮಣ್ಣಿನ ಭೂಗರ್ಭದಲ್ಲಿ ಅದೆಷ್ಟೋ ಸತ್ಯಗಳು,ಇತಿಹಾಸಗಳು ಅಡಗಿ ಹೋಗಿದೆ,ಮತ್ತು ಕಾಲಕಾಲಕ್ಕೆ ಅವು ಅಲ್ಲಿಂದ ಮೇಲೆದ್ದು ಬರುತ್ತಲೇ ಇದೆ.

ಆದರೆ ಇತ್ತೀಚಿನ ದಿನಗಳಲ್ಲಿ ದೂರದ ವಿಯೆಟ್ನಾಂ, ಕೊಲಂಬಿಯಾಗಳ ಮಣ್ಣಿನ ಅಡಿಯಲ್ಲೂ ಕೂಡ  ಶಿವ ಲಿಂಗಗಳು ನಮಗೆ ದೊರೆಯುತ್ತಿದೆ.. ಆದರೆ ಅದು ಹೇಗೆ ಸಾಧ್ಯ...ಈ ರೀತಿಯಾಗಿ ವಿಶ್ವದೆಲ್ಲೆಡೆ ಶಿವ ಲಿಂಗಗಳು ಕಾಣಸಿಗುವುದು ಹೇಗೆ,ಏತಕ್ಕಾಗಿ?

ವಿಶ್ವದ ಅತೀ ದೊಡ್ಡ ದೇವಾಲಯ ಸಂಕೀರ್ಣ ಎಂದೆನಿಸಿರುವ ಕಾಂಬೋಡಿಯಾದ Angkor Wat..ನಿಜವಾಗಿಯೂ ಒಂದು ಬುದ್ಧ ದೇವಾಲಯವೇ..? ಅಥವಾ ಅದು ಅದೆಷ್ಟು ಹಿಂದೂ ದೇವಾಲಯ!

ನಮ್ಮಲ್ಲಿ ಪಾದರಸದ ಲಿಂಗಗಳು(ರಸ ಲಿಂಗಗಳು) ಆ ಕಾಲದಲ್ಲಿಯೇ ಮಾಡಲ್ಪಟ್ಟಿದ್ದವು.ಆದರೆ ಪಾದರಸ ಸಹಜ ಸ್ಥಿತಿಯಲ್ಲಿ ಘನ ವಸ್ತು ಆಗಿ ಇಂದಿಗೂ ಅಷ್ಟು ಸುಲಭಕ್ಕೆ ಮಾರ್ಪಾಡು ಆಗುವುದಿಲ್ಲ. ಆದರೆ ಆ ಕಾಲದಲ್ಲಿಯೇ ನಮ್ಮವರು ಅದನ್ನು ಹೇಗೆ ಸಾಧಿಸಿದರು..?

ಪಿರಮಿಡ್ಡು ಗಳು ಕೇವಲ ಈಜಿಪ್ಟ್ ಜನಗಳು ಮಾತ್ರ ಕಟ್ಟಿದ್ದೇ.. ಪುರಾತನ ಹಿಂದುಗಳು ಕಟ್ಟಿದ ಪಿರಮಿಡ್ಡುಗಳು ಯಾವುದು?

ವಿಮಾನ, ಪುಷ್ಪಕ ವಿಮಾನ ಎಂಬುವುದು ಬರೀಯ ಕಾಲ್ಪನಿಕವೇ ಅಥವಾ ಆದಾರಗಳು ಇವೆಯೇ?

ಕಲ್ಲುಗಳನ್ನು ಒಡೆದು ಅಂತಹ ಬೃಹತ್ ದೇವಾಲಯಗಳನ್ನು, ದೇವಾಲಯ ಕಳಶಗಳನ್ನು ಬರೀ ಉಳಿ(chisel),ಸುತ್ತೆಯಿಂದ ಕೆತ್ತುತ್ತಾ ಕಟ್ಟುತ್ತಾ ಕುಳಿತುಕೊಳ್ಳಲು  ಸಾಧ್ಯವೇ? ನಮ್ಮಲ್ಲಿದ್ದ Rock Cutting Technology ಎಂತಹದ್ದು..?

ಕಲ್ಲುಗಳನ್ನು ಕಟ್ ಮಾಡುವುದು ಬಿಡಿ..ಕಲ್ಲುಗಳನ್ನೇ ಕರಗಿಸಿ ಬೆಲ್ಲದ ಪಾಕದಂತೆ ಮಾಡಿ ಅದು ಹೇಗೆ ಅವರು ಆ ಕಾಲದಲ್ಲಿ ವಿಗ್ರಹಗಳನ್ನು,  ಇನ್ನಿತರ ನಿರ್ಮಾಣಗಳನ್ನು ಮಾಡಿದರು..? ಇಲ್ಲಿ ಲೋಹದ ಬಗ್ಗೆ ಹೇಳುತ್ತಿಲ್ಲ! ಕಲ್ಲನ್ನು ಕರಗಿಸುವ ತಂತ್ರಜ್ಞಾನದ ಬಗ್ಗೆ ಹೇಳುತ್ತಿರುವುದು!

ಎಲ್ಲೋ ಇದ್ದ ಕಲ್ಲುಗಳನ್ನು ,ಟನ್ ಗಳಷ್ಟು ಭಾರದ ಕಲ್ಲುಗಳನ್ನು ಅಷ್ಟೊಂದು ಸುಲಭವಾಗಿ ನೂರಾರು ಕಿಲೋಮೀಟರ್ ಸಾಗಿಸುವುದು ಆ ಕಾಲದಲ್ಲಿ ಅಷ್ಟೊಂದು ಸುಲಭವೇ..?

ಆಗಿನ ಕಾಲದಲ್ಲಿ ಕಲ್ಲಿನ ಕಂಬಗಳನ್ನು,ಬೀಮುಗಳನ್ನು  ಬಹಳ ನುಣುಪಾಗಿ ಹೊಳೆಯುವಂತೆ ಮಾಡಿ ಬಿಡುತ್ತಿದ್ದರು.. ಆದರೆ ಈಗಲೂ ಲೇತ್ ಮಿಷಿನ್ ಗಳಿಲ್ಲದ್ದೇ ಅಂತಹ ನಿರ್ಮಾಣ ನಮ್ಮಲ್ಲಿ ಸುಲಭ ಸಾಧ್ಯವಿಲ್ಲ. ಆ ಕಾಲದಲ್ಲಿಯೇ ಅದು ಹೇಗೆ ಸಾಧ್ಯ?

ಬಹಳ ಅಂದವಾಗಿ ಕಾಣುವ ಕಲ್ಲಿನ ಸರಪಳಿ(ಚೈನು) ಮಾಡುವುದು ನಿಜವಾಗಿಯೂ ನಾವು ಎಣಿಸಿದಷ್ಟು ಸುಲಭವೇ? (ಶೃಂಗೇರಿಯ ದೇವಳದಲ್ಲಿ ಈಗಲೂ ಉಂಟು)

ಗಾಯತ್ರಿ ಮಂತ್ರವಾಗಲಿ ಅಥವಾ ಬೇರೆ ಮಂತ್ರವಾಗಲಿ ನಾವು 108 ಬಾರಿ ಪಠಿಟಿಸುತ್ತೇವೆ.. ಆಧ್ಯಾತ್ಮಿಕ ಬಿಟ್ಟು ನೂರ ಎಂಟು ಬಾರಿ ಯಾವುದೇ ಮಂತ್ರ ಪಠಿಸುವುದರ ಹಿಂದೆ ಇರಬಹುದಾದ ವೈಜ್ಞಾನಿಕ ಲಾಭ ಏನು..?

ಗಣಿತದ Fibonacci series,Golden Ratio ನಿಸರ್ಗದಲ್ಲಿ, ಸೂರ್ಯಕಾಂತಿಯಲ್ಲಿ ಮಾತ್ರವಲ್ಲ ನಮ್ಮ ಮೃತ್ಯುಂಜಯ ಯಂತ್ರದಲ್ಲೂ ಅಡಗಿದೆಯೇ..?

ಓಂಕಾರ ಪಠಿಸಿದಾಗ ಅದರ ಧ್ವನಿ ತರಂಗಗಳನ್ನು ಚಿತ್ರ ರೂಪದಲ್ಲಿ ಕಂಡರೆ ಮೂಡುವ ಆಕಾರ ಯಾವುದು..?

ಇಂತಹ ಪ್ರಶ್ನೆಗಳು ನಿಮ್ಮಲ್ಲೂ ಇದ್ದರೆ, ಖಂಡಿತವಾಗಿಯೂ ನೀವು ಒಮ್ಮೆ ಪ್ರವೀಣ್ ಮೋಹನ್ ಚಾನಲ್ ಗೆ ಭೇಟಿ ಕೊಡಲೇ ಬೇಕು.
ಎಲ್ಲವನ್ನೂ ಬಹಳ ಸೊಗಸಾಗಿ ಹೇಳುತ್ತಾರೆ ಪ್ರವೀಣ್ ಮೋಹನ್. ಅದು ಬರೀ  ಹೇಳುವುದಲ್ಲ...ಇದ್ದ ಸತ್ಯವನ್ನು ನಮ್ಮ ಮುಂದೆ ತೆರೆದಿಡುವುದು.

ಮೇಲಿನ ಅಷ್ಟು ಮಾತ್ರವಲ್ಲ ಇನ್ನೂ ಹಲವಾರು ವಿಷಯಗಳನ್ನು.. ಅದರಲ್ಲೂ ಸತ್ಯ ವಿಷಯಗಳನ್ನು ವೈಜ್ಞಾನಿಕ ಆಧಾರಗಳನ್ನು ಬಳಸಿಕೊಂಡೆ ನಮಗೆ ಸವಿವರವಾಗಿ experiment ಗಳನ್ನು ಮಾಡಿಯೇ ತೋರಿಸಬಲ್ಲರು ಪ್ರವೀಣ್ ಮೋಹನ್.

ನಮಲ್ಲಿ ತಂತ್ರಜ್ಞಾನ ಎಂದರೆ ಈಗಲೂ Western countries, Germany ಎಂದು ಮುಖ ಮಾಡುವ ಸಮಯದಲ್ಲಿ, ನಮ್ಮ ಪುರಾತನ ಭಾರತೀಯರು ಇಂದಿನ ವಿಜ್ಞಾನಕ್ಕೂಸುಲಭಕ್ಕೆ ಸಾಧ್ಯವಾಗದ ಮಹಾನ್ ನಿರ್ಮಾಣಗಳನ್ನು,ಸಾಧನೆಗಳನ್ನು ಅಂದೇ ಮಾಡಿದ್ದರು.

ನಿಜವಾಗಿಯೂ ಬೆರಗು ಹುಟ್ಟಿಸುವುದು ಮಾತ್ರವಲ್ಲ.. ನಾವೆಲ್ಲ ನಮ್ಮ ಪೂರ್ವಜರ ವಿಜ್ಞಾನ ತಂತ್ರಜ್ಞಾನಗಳ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಲೇಬೇಕು. ಆದರೆ ನಾವು ಹಾಗೇ ಮಾಡುವುದೇ ಇಲ್ಲ.. ನಮಗೆ ಪೀಸಾದ ವಾಲು ಗೋಪುರ,ಫ್ರಾನ್ಸ್ ನ ಐಫೆಲ್ ಟವರ್, ಈಜಿಪ್ಟ್ ನ ಮಮ್ಮಿ ಪಿರಮಿಡ್ಡುಗಳು,ಪೆರುವಿನ ಮಾಚು ಪಿಚು.. Etc Etc ಗಳು ಮಾತ್ರವೇ ಅಧ್ಭುತ. ಅವುಗಳಿಗಿಂತಲೂ ಎಷ್ಟೊ ಅತ್ಯಧ್ಭುತವಾದ ನಮ್ಮ ದೇವಾಲಯ ನಿರ್ಮಾಣ ಕೌಶಲ್ಯತೆಯ ಬಗ್ಗೆ ನಮಗೆ ಆಸಕ್ತಿ ಕಡಿಮೆಯೇ..

ನಮ್ಮ ದೇವಾಲಯಗಳು ಬರೀ ಶ್ರದ್ಧಾ ಕೆಂದ್ರಗಳು ಅಲ್ಲವೇ ಅಲ್ಲ.ನಮ್ಮ ದೇವಾಲಯಗಳು ನಮ್ಮ  ಪುರಾತನ ಸಂಸ್ಕೃತಿಯ ಹಾಗೂ ಪುರಾತನ ಇತಿಹಾಸದ ಒಂದು ಭಾಗ ಮತ್ತು ಆ ಕಾಲದ ವಿಜ್ಞಾನ ತಂತ್ರಜ್ಞಾನ ಪ್ರತಿರೂಪ. ಅಧ್ಯಯನ ಯೋಗ್ಯ ಲೈಬ್ರರಿ ಅದು.

ಒಮ್ಮೆ ಹಳೆಯ ಕಾಲದ ಯಾವುದೇ ದೇವಾಲಯಕ್ಕೆ ಹೋದಾಗ ದೇವರ ದರ್ಶನ ಆದ ನಂತರ.. ಅಲ್ಲಿರುವ ಶಿಲ್ಪಕಲೆಯನ್ನು ಬೆರಗು ಕಣ್ಣಿನಿಂದ ನೋಡಿ.. ಇದೆಲ್ಲಾ ಆ ಕಾಲದಲ್ಲಿ ಹೇಗೆ ಸಾಧ್ಯ ಎಂದು ಯೋಚಿಸಿ..ನಮಗೆಲ್ಲಾ Main Stream ಇತಿಹಾಸಕಾರರು ಶಿಲಯುಗದ  ಕಾಲದಲ್ಲಿ ನಮ್ಮವರು  ಮೈಗೆಲ್ಲಾ ಸೊಪ್ಪು ಸುತ್ತಿಕೊಂಡು ಕಾಡಿನಲ್ಲಿ ಓಡಾಡುತ್ತಿದ್ದರು  ಎಂದು ಹೇಳಿ ಕೊಟ್ಟರು.ಪಾಶ್ಚಿಮಾತ್ಯರು ಅಂತು ನಮ್ಮನ್ನು ಹಾವಾಡಿಗರು ಎಂದೇ ಕರೆದರು.. ಆದರೂ ಇಡೀ ಜಗತ್ತಲ್ಲೇ ಸಣ್ಣದೊಂದು ಕಲ್ಲನ್ನು ಚಚ್ಚೌಕವಾಗಿ ಕೆತ್ತುವ ತಂತ್ರಜ್ಞಾನವೇ ಇರದೇ ಇದ್ದಾಗ.. ನಮ್ಮವರು ಅದು ಹೇಗೆ ಇಂತಹ ಅಧ್ಭುತ ಗಳನ್ನು ಸಾದಿಸಿ ಬಿಟ್ಟರು? ಅಂತಹ ತಂತ್ರಜ್ಞಾನಗಳ ಬಗ್ಗೆ  ಇತಿಹಾಸಕಾರರು ಏತಕ್ಕಾಗಿ ನಮಗೆ ತಿಳಿಸುವ ಸಾಹಸವನ್ನೇ  ಮಾಡಲಿಲ್ಲ!!

ಹಳೆಯ ದೇವಸ್ಥಾನಕ್ಕೆ ಹೋದಾಗ ಕೈಯಲ್ಲಿರುವ ಗಂಧ ಪ್ರಸಾದವನ್ನು ಯಾರಿಗೂ ಗೊತ್ತಾಗದಂತೆ  ಅಲ್ಲಿನ ಕಲ್ಲಿನ ಕಂಬಕ್ಕೆ ಉಜ್ಜಿ ಬರುವ ಮೊದಲು(ದೇವಸ್ಥಾನಕ್ಕೆ ಮಾತ್ರವಲ್ಲ ಅದು ಕಲೆಗೆ ಮಾಡುವ ಅಕ್ಷಮ್ಯ ಅಪರಾಧ) ಆ ಕಂಬಗಳಲ್ಲಿರುವ ಸಣ್ಣಪುಟ್ಟ ಮೈಕ್ರೋ ಕೆತ್ತನೆಗಳನ್ನು ನೋಡಿ... ಯಾವ ತಂತ್ರಜ್ಞಾನದಿಂದ ಇಷ್ಟು ಸುಲಭವಾಗಿ ಇವರು ರಂಗೋಲಿ ಹಾಕಿದಂತೆ ಕೆತ್ತಿ ಬಿಟ್ಟಿದ್ದಾರೆ ಎಂದು.

ಪ್ರವೀಣ್ ಮೋಹನ್ ಬಗ್ಗೆ ಹುಡುಕಿದರೂ ಅವರ ಬಗ್ಗೆ ಹೆಚ್ಚಿನ ಮಾಹಿತಿಗಳು ಸಿಗುವುದೇ ಇಲ್ಲ. ಅವರೇ ಒಂದು ಕಡೆ ಹೇಳಿದಂತೆ ಅವರಿರುವುದು Pittsburgh, Pennsylvania ದಲ್ಲಿ. ಆದರೆ ಅವರ ಮೂಲ ನೆಲೆ  ತಮಿಳುನಾಡು. ಅದಕ್ಕಿಂತ ಹೆಚ್ಚಿನ ಮಾಹಿತಿ ಎಲ್ಲಿಯೂ ಸಿಗುವುದಿಲ್ಲ ಸ್ವತಃ ಅವರೇ ಅವರ ವೈಯಕ್ತಿಕ ಜೀವನದ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಅವರಿಗೆ ಸದ್ಯಕ್ಕೆ ಇರುವ ಧ್ಯೇಯ ಒಂದೇ ಭಾರತದ ಪುರಾತನ ತಂತ್ರಜ್ಞಾನದ ಮೇಲೆ ಬೆಳಕು ಚೆಲ್ಲುವುದು.ಅವರಿಗಿರುವ ಆಸಕ್ತಿ ನಿಜವಾಗಿಯೂ ಬೆರಗು ಮೂಡಿಸುತ್ತದೆ.

ಹೌದು ಮೊದಲೇ ಹೇಳಿದಂತೆ.. ಪ್ರವೀಣ್ ಮೋಹನ್ ಎಷ್ಟೋ ವೀಡಿಯೋಗಳನ್ನು ಸ್ವತಃ YouTube ಬ್ಯಾನ್ ಮಾಡುತ್ತೆ!

ಆದರೆ ಏಕೆ?

ಏಕೆಂದರೆ ಅವರು ಹೇಳುವ ಸತ್ಯ ಕೆಲವರಿಗೆ  ರುಚಿಸುವುದಿಲ್ಲವೋ ಅಥವಾ YouTube ಗೂ ಇಷ್ಟವಾಗುವುದಿಲ್ಲವೋ ಗೊತ್ತಿಲ್ಲ..ನಿರಂತವಾಗಿ ಅವರ ವೀಡಿಯೊಗಳು ರಿಪೋರ್ಟ್ ಆಗಿ ಅವರ ವೀಡಿಯೊಗಳು  ಬ್ಯಾನ್ ಆಗುತ್ತದೆ! ಆದರೆ ಆ ಮನುಷ್ಯನ ಸಂಶೋಧನೆ ಅವರು ಹೇಳುವ ವಿಷಯಗಳಿಗೆ ಅದೆಷ್ಟೋ ವಿದೇಶಿಯರು ಬೆರಗಾಗಿ.. ಅವರಿಗೆ ಮತ್ತು ಭಾರತದ ಪುರಾತನ ವಿಜ್ಞಾನ ತಂತ್ರಜ್ಞಾನಕ್ಕೆ ಉಘೇ ಉಘೇ ಹೇಳುತ್ತಾರೆ. ಆದರೆ ನಮ್ಮವರಿಗೆ ಅದೆಕೋ ಅವರೆಂದರೆ ದಿವ್ಯ ನಿರ್ಲಕ್ಷ್ಯ.

ಆದರೆ ಪ್ರವೀಣ್ ಮೋಹನ್ ಎಂದಿನಂತೆ ತಮ್ಮ ಸಂಶೋಧನೆಗಳನ್ನು ಮುಂದುವರಿಸುವುದನ್ನು ಬಿಟ್ಟಿಲ್ಲ.. ಈ ನೆಲದ ಮೂಲ ಗಣಿತ,ಪುರಾತನ ವಿಜ್ಞಾನ,ತಂತ್ರಜ್ಞಾನ ಗಳನ್ನು ವಿಶ್ವಕ್ಕೆ ತೋರಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತಲೇ ಇದ್ದಾರೆ ಅವರು.

ನೋಡಲು ಬಹಳ ಸರಳ ವ್ಯಕ್ತಿ. ಪ್ಯಾಂಟ್ - ಟೀ ಶರ್ಟ್ ಹಾಕಿಕೊಳುವ Praveen Mohan ಕಣ್ಣಿಗೆ ಸದಾ ನೀಲಿ ಬಣ್ಣದ ಗ್ಲಾಸ್ ಹಾಕಿಕೊಳ್ಳುತ್ತಾರೆ. ಅವರ YouTube channel ಲೋಗೋ ಕೂಡ ಅದೇ. ಚಿನ್ನದ ಬಣ್ಣದ ತಲೆಗೊಂದು ನೀಲಿಯ ಕನ್ನಡಕ.. ಅವರ ಹೆಸರಿನಲ್ಲಿಯೇ ಚಾನೆಲ್ YouTube channel ಇದೆ. ಆಸಕ್ತರು ಭೇಟಿ ಕೊಡಬಹುದು.

ಅವರು ಇನ್ನಷ್ಟು ಸಂಶೋಧನೆಗಳನ್ನು ಮಾಡಿ ಈ ದೇಶದ ದೇವಸ್ಥಾನಗಳಲ್ಲಿ ಅಡಗಿರುವ ನಮಗೆ ಇನ್ನೂ ಗೊತ್ತೇ ಇರದ ಮತ್ತಷ್ಟು ಅಧ್ಭುತ ವಿಷಯಗಳನ್ನು ನಮ್ಮೆದುರು ತೆರೆದಿಡುವಂತಾಗಲಿ ಎಂಬುವುದೇ  ನನ್ನಂತವನ ಆಸೆ.. 😊🙏

Ab Pacchu
Moodubidire


Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ