ನಮ್ಮ ಬಸ್ ನಮ್ಮ ಹೆಮ್ಮೆ
ದಿನಾ ಒಂದೇ ಬಸ್ಸಿನಲ್ಲಿ ಹೋಗ್ತಾ ಇದ್ದರೆ, ನಮ್ಮ ಹಾಗೆ ಡೈಲಿ ಬಸ್ಸಿನಲ್ಲಿ ಬರುವವರು, ಸ್ಕೂಲ್ ಮಕ್ಕಳು, ಕಾಲೇಜು ಹುಡುಗಿಯರು, ಹಿರಿಯರು,ಅಂಕಲ್ಸ್, ಆಂಟೀಸ್, ಬಸ್ ಡ್ರೈವರ್, ಕಂಡಕ್ಟರ್.. ಹೀಗೆ ಎಲ್ಲರದ್ದೂ ಪರಿಚಯ ಆಗಿ ಅದೊಂದು ಫ್ಯಾಮಿಲಿ ತರಹ ಆಗ್ತದೆ. ಡೈಲಿ ಬಸ್ ಅಲ್ಲಿ ಹೋಗುವಾಗ, ನಾವು ಯಾರೂ ಬಸ್ಸಿನಲ್ಲಿ ಹೋಗ್ತಾ ಇಲ್ಲ, ಬದಲಾಗಿ ಎಲ್ಲರೂ ಡೈಲಿ ಎಲ್ಲೋ ಫ್ಯಾಮಿಲಿ ಟೂರ್ ಗೆ ಹೋಗ್ತ ಇದ್ದೆವೆ ಅನ್ನೋ ಹಾಗೆ ಫೀಲ್ ಆಗ್ತದೆ.
ಬಸ್ ಹತ್ತಿದ ಕೂಡಲೇ ಬಸ್ ನಲ್ಲಿ already ಇರುವವರು ಎಲ್ಲರೂ ಒಮ್ಮೆ ಮುಗುಳ್ನಕ್ಕು ಹಾಯ್ ಹೇಳ್ತಾರೆ, ಹುಡುಗಿಯರು ಕಣ್ಣಂಚಲ್ಲೇ ನೋಡಿ ನಸುನಕ್ಕು ಬಳುಕುವ ಬಸಳೆ ದಂಟಿನಂತೆ ವೈಯಾರದಿಂದ ನುಲಿತಾರೆ, ಸ್ಕೂಲ್ ಮಕ್ಕಳು ಅಣ್ಣಾ ಅಣ್ಣಾ.. ಎಂದು ಕೂಗಿ ಕರೀತಾರೆ. ನಾನು ಕೂಡ Next ಸ್ಟಾಪ್ ಗಳಲ್ಲಿ ಬಸ್ ಹತ್ತುವವರಿಗೂ ಇದೇ ರೀತಿ greet ಮಾಡಲು ಮರೆಯುವುದಿಲ್ಲ . Bro's & Maam's ನಮ್ಮ ಗ್ಯಾಂಗ್. ನಾವು ಅವರೊಟ್ಟಿಗೆ ಆಸೀನರಾಗುತ್ತೇವೆ. ಕೆಲವೊಮ್ಮೆ ಎಲ್ಲಿ ಸೀಟು ಇರುತ್ತೋ ಅಲ್ಲಿಯೇ ಕುಳಿತುಕೊಳ್ಳುತ್ತೇವೆ, ಎಲ್ಲರೂ ನಮ್ಮವರೇ ಅಲ್ಲ.. ಎಲ್ಲರೊಂದಿಗೂ ಕುಳಿತುಕೊಳ್ಳಲೇಬೇಕು. 😊
ಅಂಕಲ್ಸ್ ನೊಟ್ಟಿಗೆ ಕೂತುಕೊಂಡಾಗ ಕಂಬಳ, ಕೋರ್ದ ಕಟ್ಟ(ಕೋಳಿ ಅಂಕ) ದ ಬಗ್ಗೆ ಡೀಪಾಗಿ ಡಿಸ್ಕಷನ್ ಮಾಡ್ತೇನೆ. ಉರಿಯೆ, ಬಲ್ಲೆ, ಮೈಪೆ, ಕಡ್ಲೆ.. ಕೋಳಿಗಳು ಯಾವ ದಿನ ಚೆನ್ನಾಗಿ ಪೈಟ್ ಮಾಡುತ್ತವೆ ಎಂದು ಕೇಳುತ್ತೇನೆ. ಆಂಟಿ ಜೊತೆ ಕೂತುಕೊಂಡಾಗ ಅವರಿಗೆ ಚಿಕನ್ ಘೀ ರೋಸ್ಟ್ ಸರಿಯಾಗಿ ಮಾಡುವುದು ಹೇಗೆ ಅಂತ you tube ನಲ್ಲಿ ತೋರಿಸಿ ಅವರನ್ನು ಖುಷಿ ಪಡಿಸ್ತೇನೆ. ಸ್ಕೂಲ್ ಮಕ್ಕಳ ಬಳಿ ಕೂತುಕೊಂಡಾಗ ಅವರಿಗೆ trigonometry, differentiation, integration ಮಾತ್ರವಲ್ಲ history ಅದರಲ್ಲೂ ಅವರ text book ಗಳಲ್ಲಿ ಇರದ ನಿಜವಾದ ಇತಿಹಾಸ.. ಶಿವಾಜಿ ಮಹಾರಾಜ್, ರಾಣಾ ಪ್ರತಾಪ್ ಸಿಂಗ್, ಪೇಶ್ವೆ ಗಳ ಸಾಹಸ ಗಳ ಬಗ್ಗೆ ಹೇಳ್ತೇನೆ.
ಪುಟ್ಟ ಮಕ್ಕಳು ಹೇಗೆ ದೇಶ ಪ್ರೇಮಿಗಳಾಗಬೇಕು ಎಂದು ತಿಳಿ ಹೇಳುತ್ತೇನೆ.ಮಕ್ಕಳು ಮಂತ್ರ ಮುಗ್ಧರಾಗಿ ತದೇಕ ಚಿತ್ತದಿಂದ ಹೇಳಿದ ಎಲ್ಲವನ್ನೂ ಕೇಳಿಸಿಕೊಳ್ಳುತ್ತಾರೆ.
ಕಾಲೇಜು ಹುಡುಗನ ಬಳಿ ಕೂತುಕೊಂಡಾಗ ಹುಡುಗಿಯರನ್ನು ಪಟಾಯಿಸುವುದು ಹೇಗೆ, ಕಾಳು ಹಾಕುವುದು ಹೇಗೆ etc etc ಟ್ಯಾಲೆಂಟ್ ಗಳ ಬಗ್ಗೆ ಹೇಳಿಕೊಡ್ತೇನೆ, ಅದೇ ಡಿಗ್ರಿ ಹುಡುಗಿಯರ ಬಳಿ ಕುಳಿತುಕೊಂಡಾಗ ಯಾವ ರೀತಿಯ ಹುಡುಗರನ್ನು ರಿಜೆಕ್ಟ್ ಮಾಡ್ಬೇಕು, ನನ್ನಂತಹ ಒಳ್ಳೆಯ ಬಂಗಾರದಂತಹ ಹುಡುಗನನ್ನು ಒಲಿಸಿಕೊಳ್ಳುವ ಬಗೆ ಹೇಗೆ ಎಂಬುದರ ಬಗ್ಗೆ ಮಾರ್ಗದರ್ಶನ ನೀಡ್ತೇನೆ. ಅದೇ ಹಿರಿಯರ ಬಳಿ ಕುಳಿತು ಕೊಂಡಾಗ ಊರಿನಲ್ಲಿ ನಡೆದ ಯಕ್ಷಗಾನ, ತಾಳಮದ್ದಲೆ ಪ್ರಸಂಗಗಳ ಕುರಿತು, ಮಹಿಷಾಸುರ ನ ಅಬ್ಬರದ ಕುರಿತು...ಯಾವತ್ತೋ ಕೇಳಿದ ಗುರು ರಾಜುಲು ನಾಯ್ಡು ರವರ ಗಜ ಗೌರಿ ವ್ರತ ಹರಿಕಥೆ ಯ ಬಗ್ಗೆ ಮಾತಾಡ್ತೆನೆ...
ಮೀನು ಮಾರುವ ತಾಯಂದಿರು ಕೂಡ ಬರ್ತಾರೆ ಅವರ ಬಳಿ ಕೊಡೈ, ಅಂಜಲ್, ಎಟ್ಟಿ, ಮಾಂಜಿ ಮೀನುಗಳಿಗೆ ರೇಟ್ ಹೇಗಿದೆ ಎಂದು ಕೇಳ್ತೀನಿ. ಅವರೊಬ್ಬರು ರಾಜಕೀಯ ಪಾರ್ಟಿ office ನಲ್ಲಿ ಕೆಲಸ ಮಾಡುವವರು, ನಮ್ಮ ಬಸ್ಸಿನಲ್ಲಿ ಅವರೇ ರಾಜಕೀಯ ಧುರೀಣ,ಹಿರಿಯ ರಾಜಕೀಯ ಮುತ್ಸದ್ದಿ, ರಾಜಕೀಯ ವಿಶ್ಲೇಷಕ ಎಲ್ಲಾ. ಅವರ ಬಳಿ ಈ ಸರ್ತಿ ನಮ್ಮ ಭಾರತ ಸರ್ಕಾರ POK ಯನ್ನು ಹೇಗೆ ವಶಪಡಿಸಿಕೊಳ್ಳುತ್ತೆ, ಪಾಕಿಸ್ತಾನದ ಬಳಿ ಎಷ್ಟು ಪರಮಾಣು ಬಾಂಬು ಇದೆ.. ಅಂತ ಚರ್ಚಿಸುತ್ತೇನೆ. ಅರ್ಥಶಾಸ್ತ್ರ ದ ಪ್ರೋಪೆಸರ್ ಒಬ್ಬರು ಇದ್ದಾರೆ ಅವರ ಬಳಿ ಕುಳಿತುಕೊಂಡಾಗ ಈ ದೇಶದ ಮುಂದಿನ ಅರ್ಥಿಕತೆಯ ಬೆಳವಣಿಗೆಯಲ್ಲಿ ಸಾಮಾನ್ಯ ಜನರ ಕೊಡುಗೆ ಏನು ಎನ್ನುವುದರ ಬಗ್ಗೆ ತುಂಬಾ ಡೀಪಾಗಿ ವಿಚಾರ ವಿನಿಮಯ ಮಾಡ್ತೆನೆ.
ಅಷ್ಟು ಮಾತ್ರವಲ್ಲ..
"ತಿರುಗಿ ತಿರುಗಿ ನೋಡುವಂತ ಹುಡುಗಿ ಏನಲ್ಲ.. ಕನಸಿಗೆ ಬಂದು ಕಾಡುವುದಿಲ್ಲ.. curly hair ಇವಳಿಗಿಲ್ಲ.. Blue eyes ಇವಳದಲ್ಲ.. ಆದರೂ ಗೊತ್ತಿಲ್ಲ ಇವಳಿಗೇ ಬಿದ್ದೆನಲ್ಲಾ..."
ಅಂತಹ ಹೇಳಬಹುದಾದ ಹೃದಯವನ್ನೇ ಕದಿಯಬಲ್ಲ ಹಲವಾರು ಚೊರಿಯರು ಕೂಡ ಇದ್ದಾರೆ. ಅವರ ಹತ್ತಿರ ನಾನು ಬಸ್ಸಿನಲ್ಲಿ ಮಾತಾಡಲ್ಲ, ಡೌಟ್ ಬರ್ತದೆ ಅಂತ ವಾಟ್ಸಪ್ ನಲ್ಲಿ ಚಾಟ್ ಮಾತ್ರ ಮಾಡ್ತೇನೆ.
ಬಸ್ ಅಲ್ಲಿ ಮಾತನಾಡುತ್ತಾ ಮಾತನಾಡುತ್ತಾ, ಮನೆಯಿಂದ ತಂದಿದಂತಹ ತಿಂಡಿಗಳು ಕೂಡ ಡೈಲಿ exchange ಆಗಿ ಬಿಡುತ್ತದೆ. ಇವತ್ತು ಸುಜಾತಮ್ಮ ನವರು ತೆಕ್ಕರೆ/ತೆಕ್ಕರ್ಪೆ(ಮುಳ್ಳು ಸೌತೆ) ಯಿಂದ ಮಾಡಿದ ಸಿಹಿ ಮಣ್ಣಿ( ಇಡ್ಲಿ ಪಾತ್ರೆಯಲ್ಲಿ ಬಾಳೆ ಎಲೆಯ ಮೇಲೆ ಕಡೆದಿಟ್ಟಂತಹ ಹಿಟ್ಟು ಹೊಯ್ದು, ಹಬೆಯಲ್ಲಿ ಬೇಯಿಸಿ ಮಾಡುವ ಒಂದು ರೀತಿಯ ಕಡುಬು) ಕೊಟ್ಟರು😋😋. ಮೇಲೆ pic ಹಾಕಿದ್ದೆನೆ ಅಲ್ಲ ಅದೇ ಅದು. ಒಂದೊಂದು ದಿನ ಒಬ್ಬೊಬ್ಬರ ಬುತ್ತಿ ಹೊಟ್ಟೆ ಸೇರುತ್ತೆ.
ಕೆಲವೊಮ್ಮೆ ಪತ್ರೊಡೆ, ಮರುವಾಯಿ ಪುಂಡಿ, ಪೆಲಕಾಯಿ ಗಟ್ಟಿ (ಹಲಸಿನ ಕಡುಬು), ತೆಳ್ಳವು, ಕಲ್ತಪ್ಪ, ನೈಯಪ್ಪ .. ಹೀಗೆ ತರಹೇವಾರಿ ತಿಂಡಿ. ಎಲ್ಲರೂ ಬುತ್ತಿ ಬಿಚ್ಚಿದಾಗ..ಬಸ್ಸೊಳಗೆ ಮಿನಿ ಕ್ಯಾಂಟೀನ್ ಒಂದು ಓಪನ್ ಆದಂತೆ.ಯಾವುದು ಬೇಡ ಅಂತ ಹೇಳಲು ಮನಸ್ಸು ಬರುವುದಿಲ್ಲ. ಪ್ರೀತಿಯಿಂದ ಯಾರು ಕೊಟ್ಟರೂ ನಾನು ಬೇಡ ಅಂತ ಹೇಳುವುದೇ ಇಲ್ಲ.
ನಾಳೆ ಶಾಲಿನಿ ಆಂಟಿ ಸೇಮೆದಡ್ಡೆ(ಒತ್ತು ಶ್ಯಾವಿಗೆ) ಮತ್ತು ಸಿಹಿ ತೆಂಗಿನಹಾಲು ತರ್ತೆನೆ ಅಂತ ಹೇಳಿದ್ದಾರೆ, ಆದರ ನಾಡಿದ್ದು ಮಿಲಿಟ್ರಿ ಅಂಕಲ್ ಒಂದು ಕಂಬ (ರಮ್) ಕೊಡ್ತೇನೆ ಅಂತ ಹೇಳಿದ್ದಾರೆ, ಮುಂದಿನ ದಿನಗಳಲ್ಲಿ ಚಿಕನ್ ಸುಕ್ಕ, ಬಿರಿಯಾನಿ ಗಳು ಹೊಟ್ಟೆ ಯನ್ನು ತಂಪು ಮಾಡಲಿವೆ. 😋😋.
ಹೇಯ್ ಭಗವಾನ್, ಯಾವ ಜನ್ಮದ ಮೈತ್ರಿಯೋ, ಪುಣ್ಯವೋ ಇವರೆಲ್ಲ ನನ್ನದೇ ಬಸ್ ನಲ್ಲಿ ಬರುವುಂತಾದದ್ದು ನನ್ನ ಭಾಗ್ಯ. ಆ ಭಗವಂತ ನನ್ನ ರೂಟಿನಲ್ಲಿ ಈ ಬಸ್ ಹಾಕಿರುವ, ಬಸ್ ಓನರ್ ಅನ್ನು ಚೆನ್ನಾಗಿ ಇಟ್ಟಿರಲಿ. ಅವನ ಹೊಟ್ಟೆ ತಣ್ಣಗಿರಲಿ. 😊🙏
ಈ ಸ್ನೇಹ ವಾತ್ಸಲ್ಯ
ಅಪುರೂಪವಾದದ್ದು. ನಮ್ಮ ಬಸ್ ಜರ್ನಿ ಅಮರವಾಗಲಿ.. ದಿನವೂ ನಿತ್ಯ ನೂತನವಾಗಲಿ...ನೂರು ವರ್ಷ ಕಳೆದರೂ ಕೂಡ ಈ ಬಸ್ ಹಾಳಾಗದಿರಲಿ,ಡ್ರೈವರ್ ಅವರೇ ಇರಲಿ, ಕಂಡಕ್ಟರ್ ಕೂಡ ಅವರೇ ಬರಲಿ, ಇದೇ ಪ್ಯಾಸೆಂಜರ್ಸ್ಸ್ ಕೂಡ ಡೈಲಿ ಬರಲಿ, ಇನ್ನಷ್ಟು ತಿಂಡಿ ತರಲಿ,ಎಲ್ಲವನ್ನೂ ನನಗೆ ಕೊಡಲಿ.. ಎಂದಷ್ಟೇ ಭಗವಂತನಲ್ಲಿ ನನ್ನ ಸದಾ sencier ಆದ ಪ್ರಾರ್ಥನೆ.. 😌🙏🏻
Ab Pacchu

Comments
Post a Comment