Drishyam - 2



ಪರಿಮಳದ ಫಿಲ್ಟರ್ ಕಾಫಿ ಕುಡಿದ ನಂತರವೂ ಅದರ ಘಮವೊಂದು ಕ್ಷಣಕಾಲ ಹೇಗೆ ಬಾಯಿ ತುಂಬಾ ಹಾಗೇ  ಆವರಿಸಿಕೊಂಡಿರುವುದೋ,ಅದೇ ರೀತಿ ಈ ಮೂವಿ ಕೂಡ. ಆದರೆ ಇಲ್ಲಿ ಇದರ ಪ್ಲೇವರ್ ಕ್ಷಣಕ್ಕಿಂತಲೂ ದೀರ್ಘವಾಗಿದೆ...



ಒಬ್ಬ ಹೀರೋ ಹೇಗಿರಬೇಕು?


ಸರಳವಾಗಿ ಹೇಳಬೇಕೆಂದರೆ ಅವನು ನಮ್ಮ ನಿಮ್ಮಂತೆ ಸಾಮಾನ್ಯನಂತೆಯೇ ಇರಬೇಕು.ಯಾವಾಗ ನೋಡಿದರೂ  ಅವನೇ ಗಾಳಿಯಲ್ಲಿ ಹಾರಿಕೊಂಡು ಕೆಳಗೆ ನಿಂತ ಐವತ್ತು ಜನ ಅಸಮಾನ್ಯ ವಿಲನ್ ಗಳಿಗೆ ಹೊಡೆಯುವುದಲ್ಲ.ಹೀರೋ ಅದವನು ಸಾಮಾನ್ಯರಂತೆ ಉಳಿದವರಿಂದ ಕೂಡ ಚೆನ್ನಾಗಿ ಹೊಡೆಸಿಕೊಂಡು ಹಣ್ಣುಗಾಯಿ ನೀರುಗಾಯಿ ಆಗುವುದು,ಅವನೂ ಕೂಡ ಹಾರೆ  ಪಿಕ್ಕಾಸು ಹಿಡಿದುಕೊಂಡು ಬಾಳೆಗಿಡ ನೆಡುವುದು,ತೋಟದಲ್ಲಿ ಗೊಬ್ಬರ ಹೊರುವುದು,ರಿಕ್ಷಾ ಬಿಡುವುದು..ಇದೆಲ್ಲ ಮಾಡುವ ಹೀರೋ ನಮಗೆ ಬಹಳ ಹತ್ತಿರವಾಗಿ ಬಿಡುತ್ತಾನೆ.


ಹೀರೊಯಿನ್ ಹೇಗಿರಬೇಕು?


ಹೀರೋಯಿನ್ ಎನಿಸಿಕೊಂಡವಳು ಕೇವಲ ಗ್ಲ್ಯಾಮರ್ ಗೆ ಮಾತ್ರ ಸೀಮಿತವಾಗದೇ,ಡಾನ್ಸ್ ಗೆ, ಡ್ಯುಯೆಟ್ ಗೆ,ಚಿತ್ರದಲ್ಲಿ ಹೆಸರಿಗೆ ಮಾತ್ರ ನಾಯಕಿ ಎಂದು ಆಗದೆ,ಅವಳು ಕೂಡ ಸಾಮಾನ್ಯ ಹೆಂಗಸರಂತೆ ಸೀರೆ ಉಟ್ಟುಕೊಂಡು,ಕತ್ತಿ ಹಿಡಿದುಕೊಂಡು ಗುಡ್ಡಕ್ಕೆ ಹೋಗಿ ಕಟ್ಟಿಗೆ ಒಟ್ಟು ಮಾಡುವುದು,ಮನೆಯಲ್ಲಿ ಮೀನು ಕ್ಲೀನ್ ಮಾಡುವುದು,ಹೊಳೆ ಬದಿ ಬಟ್ಟೆ ಒಗೆಯುವುದು, ತೆಂಗಿನ ಸಿಪ್ಪೆ ಸುಲಿಯುವುದು.. ಇದು ಕೂಡ ಮಾಡಿದರೆ ನಮ್ಮ ಮಹಿಳೆಯರಿಗೆ ಇವಳು  ನಮ್ಮವಳೇ ಅನ್ನಿಸದೇ ಇರದು. ಇನ್ನೂ ಸಾಮಾನ್ಯ ಜನರು ಮಾಡುವ ಅನೇಕ  ಇತ್ಯಾದಿಗಳನ್ನು ಆಕೆ ಅಥವಾ ಅವನು ಮಾಡಬಹುದು.ಮೇಲಿನದ್ದು ಕೇವಲ ಉದಾಹರಣೆಗೆ ಅಷ್ಟೇ ಹೇಳಿದ್ದು. 


ಎಲ್ಲಕ್ಕಿಂತ ಹೆಚ್ಚಾಗಿ ಇದ್ದದ್ದನ್ನು ಇದ್ದ ಹಾಗೆಯೇ ತೋರಿಸಿವುದು ಕೂಡ ಒಂದು ಕಲೆಯೇ.. ಅದಕ್ಕಾಗಿ ಅಂತಹ ಖರ್ಚು ಏನು  ಮಾಡಬೇಕಾಗಿಲ್ಲ.ಅದ್ದೂರಿ ಸೆಟ್ ಗಿಂತಲೂ ಪ್ರಕೃತಿಗಿಂತ ಒಳ್ಳೆಯ ಕ್ಯಾನ್ವಾಸ್ ಬೇರೆ ಬೇಕೇ..ಇದೇ ಮಲಯಾಳಂ ಮೂವಿಗಳ ಬಂಡವಾಳ.ಅದಕ್ಕಾಗಿಯೇ ಅಲ್ಲಿಯ ಲೋ ಬಜೆಟ್ ಮೂವಿಗಳು ಕೂಡ  Realistic ಮೂವಿಗಳಾಗಿರುವ ಕಾರಣ,ಇಂದು ವಿಶ್ವ ಸಿನಿ ಪ್ರೀಯರ ಮನ ಗೆಲ್ಲುವುದು.


ಅಲ್ಲಿ ಎಷ್ಟೇ ದೊಡ್ಡ ಹೀರೋ.. ಹೀರೋಯಿನ್ ಹೆಸರಿಗೆ ಮಾತ್ರ. ಕಥೆಯೇ ಹೀರೋ ಆಗುವ ಮೂವಿಗಳೇ ಅಲ್ಲಿಗೆ ತೆರೆಗೆ ಬರುವುದು.ಬಿಲ್ಡ್ ಅಫ್  ಹೀರೋಯಿಸಂ ಮೂವಿಗಿಂತಲೂ ಕಥೆಯೇ ಪ್ರಧಾನವಾಗಿರುವ ಸರಳ ಸುಂದರ ಮೂವಿಗಳೇ ಯಾವತ್ತೂ ಹೆಚ್ಚಿನ ತೂಕ ಹೊಂದಿರುವುದು.ಅದಕ್ಕಾಗಿಯೇ ನನಗೂ  ಮಲಯಾಳಂ ಮೂವಿ ಅಂದರೆ ಇಷ್ಟ.


ಇನ್ನು "ದೃಶ್ಯಂ - 2" ಬಗ್ಗೆಯೇ ಹೇಳಬೇಕಾದರೆ,ಒಂದೊಳ್ಳೆಯ ಮೂವಿ ಅಂದರೆ ಆ ಮೂವಿ ಮುಗಿದ ಕೂಡವೇ "Waaw.." ಎನಿಸುವಂತೆ ಮಾಡಿಬಿಡಬೇಕು.. ಎನ್ನುವ ಅಭಿಪ್ರಾಯ ನೀವು ಹೊಂದಿದ್ದರೆ, ಖಂಡಿತವಾಗಿಯೂ ಇದನ್ನು ನೀವು ನೋಡಲೇಬೇಕು.ಮೊದಲ ದೃಶ್ಯಂ ನಂತೆಯೇ ಇದರ ಕಥೆ ಕೂಡ ಬಹಳ ರೋಚಕವಾಗಿಯೇ ಇದೆ..ಕೊನೆಯಲ್ಲಿ ಅಂತು ಅದು Intensive ಆಗಿದೆ. 


ಶುರುವಲ್ಲಿ ಬೋರಿಂಗ್ ಇದೆ.. ಎನ್ನುವ ಅಭಿಪ್ರಾಯವನ್ನೇ ನೀವು Interval ನಂತರ ಮರೆತು ಬಿಡುತ್ತೀರಿ.ಆದರೆ ಮೊದಲಿನ ಭಾಗ ಕೂಡ ಅಷ್ಟೊಂದು ಬೋರಿಂಗ್ ಖಂಡಿತವಾಗಿಯೂ ಇಲ್ಲ,ಕಥೆ ಕಟ್ಟಿ ಕೊಡಲು,ಮೂವಿಯಲ್ಲಿ ಕೊನೆಗೊಂದು  ಫವರ್ ಫುಲ್ Impact ನೀಡಲು ಬೇಕಾದ ರಂಗಸಜ್ಜಿಕೆ ಅದು ಅಷ್ಟೇ.


ಮೋಹನ್ ಲಾಲ್ ಬಗ್ಗೆ ಏನು ಹೇಳಿದರೂ ಕಡಿಮೆಯೇ.. ಅದಕ್ಕಾಗಿ ಆತ ಈಗಲೂ ಅಲ್ಲಿಯ ಸೂಪರ್ ಸ್ಟಾರ್ ಅನಿಸುತ್ತಾನೆ.ಯುವಕರನ್ನು ಮೀರಿಸುವಂತೆ ನಟಿಸುತ್ತಾನೆ ಮೋಹನ್ ಲಾಲ್.ಮೀನಾ ಅಭಿನಯವೂ ಚೆನ್ನಾಗಿದೆ.


ಎಂದಿನಂತೆ ಕಥೆ ಹೇಳಲಾರೆ.ಮೂವಿ Prime ನಲ್ಲಿ ಇದೆ.ಫಿಲಂ ಯಾವುದಾದರೂ ಓಕೆ...ಅದರಲ್ಲಿ ಒಂದೆರಡು ಸಕತ್ ಫೈಟ್, ಮಾಸ್ ಡೈಲಾಗ್,ಸೂಪರ್ ಡ್ಯಾನ್ಸ್,ಬಳುಕುವ ಚಂದದ  ಹೀರೋಯಿನ್ ಬೇಕು... ಅನ್ನುವವರಾದರೆ ಈ ಸಿನೆಮಾ ನೋಡದಿದ್ದರೂ ನಿಮಗೆ ಅಂತಹ  ನಷ್ಟವೇನೂ ಆಗದು.ಆದರೆ ಒಳ್ಳೊಳ್ಳೆಯ ಸಿನಿಮಾಗಳನ್ನು ಹುಡುಕಿ ಹುಡುಕಿ ನೋಡುವ ಆಸಕ್ತಿ ಉಳ್ಳವರಾಗಿದ್ದಾರೆ,ಅಂತಹ ಸದಭಿರುಚಿಯ ಚಲನಚಿತ್ರ ಪ್ರೇಮಿಗಳು ನೀವು ಕೂಡ ಆಗಿದ್ದರೆ ಖಂಡಿತವಾಗಿಯೂ ಮಿಸ್ ಮಾಡಬೇಡಿ 👉 #Drishyam_2: The Resumption


#Movie_Reviews

ab pacchu

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..