Secrets of sinauli :Discovery of the Century

 

Secrets of_Sinauli:Discovery of the Century'

ನಮಗೆ ಮೇಲಿನ ಅಂತರಿಕ್ಷದಲ್ಲಿ ಗೊತ್ತಿರುವುದಕ್ಕಿಂತಲೂ ಗೊತ್ತಿಲ್ಲದ ಸಂಗತಿಗಳೇ ಹಲವಾರು ಇದೆ.ವಿಜ್ಞಾನಿಗಳಿಗೆ ಏನೆನೋ ಗ್ರಹ,ಉಪಗ್ರಹ,ಕಾಯಗಳು ಆಗಾಗ  ಗೋಚರಿಸುತ್ತಲೇ ಇರುತ್ತದೆ.

ಸಾಗರದ ತಳವು ಕೂಡ ಕಾಲ ಕಾಲಕ್ಕೆ ತನ್ನ ಗರ್ಭದಿಂದ ಹೊಸ ಹೊಸ ಕಥೆ ಹೇಳುತ್ತಲೇ ಬಂದಿದೆ.ಅಲ್ಲಿಯೂ ಸಂಶೋಧನೆಗಳು ಮುಂದುವರಿದಿದೆ.

ಆದರೆ ಮಣ್ಣು?

ಮಣ್ಣಿನ ಅಡಿಯಲ್ಲೂ ಬೇಕಾದಷ್ಟು ವಿಷಯಗಳಿವೆ.ಅಲ್ಲಿ ಹುದುಗಿದ ಸತ್ಯವಿದೆ,ತಿರುಚಿದ ಇತಿಹಾಸಕ್ಕೆ ಸಾಕ್ಷಿ ಇದೆ,ಪ್ರಾಚೀನ ಸಂಸ್ಕೃತಿಯ - ತಾಂತ್ರಿಕತೆಯ ಅನಾವರಣ ಆಗುವ ಸಾಧ್ಯತೆಗಳು ಯಾವಾಗಲೂ ಬಹಳ  ಹೆಚ್ಚೇ ಇದೆ.

ಆದರೆ ಅದಕ್ಕೆ ಅಗೆಯಬೇಕು..!

ಮತ್ತು ಭಾರತೀಯ ಪುರಾತತ್ವ ಇಲಾಖೆಯವರು ತಕ್ಕ ಮಟ್ಟಿಗೆ ಅಗೆದಿದ್ದಾರೆ ಕೂಡ..

ಎಲ್ಲಿ?

ಉತ್ತರಪ್ರದೇಶದ Sinauli ಯಲ್ಲಿ.

ಇನ್ನು ಮುಂದೆಯೂ ಅಗೆದು ತೆಗೆದು ಜಗತ್ತಿಗೆ ಗೊತ್ತಿಲ್ಲದ ಹಳೆಯ ಭಾರತೀಯ ಸಂಸ್ಕೃತಿಯನ್ನು,ತಾಂತ್ರಿಕತೆಯನ್ನು ಸಾಕ್ಷಿ ಸಮೇತವಾಗಿಯೇ ಪರಿಚಯಿಸಲಿದ್ದಾರೆ..

ಉತ್ತರಪ್ರದೇಶದ Sinauli ಯಲ್ಲಿ 2005 ಮತ್ತು 2018 ರಲ್ಲಿ ನಡೆದ ಉತ್ಖನನ ಜಗತ್ತಿನ ಕಣ್ಣು ಭಾರತದ ಮೇಲೆ ಮತ್ತೊಮ್ಮೆ ಹೊರಳುವಂತೆ ಮಾಡಿದ್ದು ಸುಳ್ಳಲ್ಲ,ಅಷ್ಟು ಮಾತ್ರವಲ್ಲ ಅಲ್ಲಿ ಸಿಕ್ಕಿದ್ದು ಜಗತ್ತನ್ನು ಕೂಡ ಸಾಕಷ್ಟು ಬೆಚ್ಚಿ ಬೀಳಿಸಿದೆ.

ಈ ದೇಶದಲ್ಲಿ  ಏನೂ ಇರಲಿಲ್ಲ,ತಂತ್ರಜ್ಞಾನ ಇರಲಿಲ್ಲ,ಲೋಹದ ಜ್ಞಾನ ಇರಲಿಲ್ಲ,ಆರ್ಯರು ಹೊರಗಿನಿಂದ ಬಂದರು,ವಿಶ್ವದ ಹಳೆಯ ನಾಗರೀಕತೆ ಮೆಸೊಪಟೋಮಿಯಾ..... ಎಂಬ  ಪಾಶ್ಚಿಮಾತ್ಯ ಇತಿಹಾಸಕಾರರ ಹಾಗೂ ನಮ್ಮಲ್ಲಿಯ ಕೆಲವು ಕಮ್ಮಿ ನಿಷ್ಟೆಯ ಇತಿಹಾಸಕಾರರ ಈ ಎಲ್ಲಾ  ಥಿಯರಿ ಸುಳ್ಳು  ಎಂದು ಹೇಳಬಹುದಾದರೂ.. Sinauli ಯಲ್ಲಿ ದೊರೆತ ತಾಮ್ರದ ವಸ್ತುಗಳು,ಕುದುರೆಯ ರಥ,ಬಂಗಾರದ ಆಭರಣ,ಖಡ್ಗ,ಶವ ಪೆಟ್ಟಿಗೆ,ಮಾತಾಡದ ಶವಗಳು.. ಮುಂದೊಂದು ದಿನ ಹಲವಾರು ಸತ್ಯಗಳನ್ನು ಖಂಡಿತವಾಗಿಯೂ ಬಾಯಿ ಬಿಡಲಿದೆ ಮತ್ತು ತಿರುಚಿದ ಕಥೆಗಳೂ ಕೂಡ ಅದರೊಡನೆ ಹೊರಬರಲಿದೆ.

Show ಆಸಕ್ತಿ ಹುಟ್ಟಿಸಿದೆ...

ನಿರೂಪಕ ಮನೋಜ್ ಬಾಜಪೇಯಿ ಹೇಳುವಂತೆ.. ಸದ್ಯಕ್ಕೆ ನಮಗೆ Sinauli ಯಲ್ಲಿ ಭಾರತದ ಭವ್ಯ ಇತಿಹಾಸ ಸಾರುವ ಚಿನ್ನದ ಹಕ್ಕಿಯ ಒಂದು ರೆಕ್ಕೆ ಅಷ್ಟೇ ಸಿಕ್ಕಿದೆ, ಮುಂದೊಂದು ದಿನ ಮತ್ತೊಂದು ರೆಕ್ಕೆ, ಅದರೊಂದಿಗೆ ಪೂರ್ತಿ ಚಿನ್ನದ ಹಕ್ಕಿಯೂ ಸಿಕ್ಕಿ,ಭಾರತದ ಸ್ವರ್ಣ ಸಮಾನ ಇತಿಹಾಸ  ಖಂಡಿತವಾಗಿಯೂ ಗರಿಬಿಚ್ಚಿ ಹಾರಾಡಲಿದೆ.

ಪುರಾತತ್ವ ಇಲಾಖೆಯವರು ಹಲವಾರು ವಿಷಯಗಳ ಬಗ್ಗೆ ಮಾತಾಡಿದ್ದಾರೆ... ಹೊಸ ಸಾಧ್ಯತೆಗಳನ್ನು ತೆರೆದು ಇಟ್ಟಿದ್ದಾರೆ.ಸಿಕ್ಕ  ಸಾಕ್ಷಿಗಳನ್ನು ತೋರಿಸಿದ್ದಾರೆ.ಎಲ್ಲವನ್ನೂ ಇಂಚು ಇಂಚು ವಿವರಿಸಿದ್ದಾರೆ...

ಕೇಳಬೇಕು ಎಂದು ಆಸಕ್ತಿ ಇದ್ದರೆ ನೀವು ಖಂಡಿತವಾಗಿಯೂ ನೋಡಿ...

'#Secrets_of_Sinauli: Discovery of the Century' ಡಿಸ್ಕವರಿ ಪ್ಲಸ್ ನಲ್ಲಿ.

ab pacchu


Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ