VIKINGS - S06E20


 

ಆಡಿನ ಕೊಂಬಿನಲ್ಲಿ ಇಷ್ಟಿಷ್ಟೇ ಸಾರಾಯಿಯನ್ನು(ale) ಸುರಿದು ಕೊಂಡು,ಪರಸ್ಪರ 'Skol..'(cheers) ಎನ್ನುತ್ತಾ,ಅದನ್ನೇ ಪದೇ ಪದೇ ಕುಡಿಯುವ ಅವರು... ಇಡೀ ಕಥೆಯಲ್ಲಿ ನೀರು ಕುಡಿದದ್ದೇ ಬಹಳ ಕಡಿಮೆ..! 


ಕೆಲವೊಮ್ಮೆ ಬಲಿ ನೀಡಿದ ಪ್ರಾಣಿಗಳ ರಕ್ತವನ್ನೂ ಸಹ ಹಾಗೇ ಗಟ ಗಟನೆ ಎಂದು ಕುಡಿದು ಬಿಡುವ ಅವರಿಗೆ.. ಅದೇ ಸಂಪ್ರದಾಯ,ಸಂಸ್ಕೃತಿ & Ritual..! 


ತಮ್ಮ ಪ್ರಕೃತಿ ದೇವರನ್ನು(Odin, Frigg, Thor, Loki)ಮೆಚ್ಚಿಸಲು,ಅವರ Valhalla ದ ವಿಶಾಲ ಹಾಲ್ ನಲ್ಲಿ  ಶಾಶ್ವತವಾದ  ಸ್ಥಾನವೊಂದನ್ನು  ಪಡೆಯಲು,ಸ್ವ ಇಚ್ಛೆಯಿಂದ ದೇವರಿಗೆ ತಾವೇ ಬಲಿಯಾಗುವ,ಇಲ್ಲವೇ ಯುದ್ಧ ಭೂಮಿಯಲ್ಲಿ ಯುದ್ಧ ಮಾಡುತ್ತಲೇ ಸಾಯಲು ಇಷ್ಟಪಡುವ... ಅವರು ಕೂಡ ನಮ್ಮಂತೆ ನಿಮ್ಮಂತೆ ನರರೇ,ನರ ಭಕ್ಷಕರಂತು  ಖಂಡಿತವಾಗಿಯೂ ಅಲ್ಲವೇ ಅಲ್ಲ! 


ಭೂಮಿಯಲ್ಲಿಯೇ ಸಾಮ್ರಾಜ್ಯ ಕಟ್ಟಿಕೊಂಡರೂ ಕೂಡ  ನಾವೆಯೊಂದನ್ನು ಕಟ್ಟಿಕೊಂಡು ಸಾಗರದ ತೋಳುಗಳ ಮೇಲೆ ತೇಲುತ್ತಾ  ತೇಲುತ್ತಾ ಬಹುದೂರ ಸಾಗಿ,ಭೂಮಿ ಸಿಕ್ಕಲೆಲ್ಲಾ ದಾಳಿ ಮಾಡಿ ಕೈಗೆ ಸಿಕ್ಕಿದ್ದನು ದೋಚುವ,ಜೀವದ ಹಂಗು ತೊರೆದು ಯುದ್ಧ ಮಾಡುವ ಆ ಗಡಸು ವ್ಯಕ್ತಿತ್ವದ ಜನರ  ಹೆಸರೇ #Vikings!


ಅವರ ಕಾನೂನುಗಳೇ ಬೇರೆ...! 


ದೇವರೇ ಬೇರೆ,ಆಚರಣೆಗಳೇ ಬೇರೆ...! 


ಆಕಾಂಕ್ಷೆಗಳೇ ಬೇರೆ.. ಮಹತ್ವಾಕಾಂಕ್ಷೆಗಳೇ ಬೇರೆ!!


ಡೆನ್ಮಾರ್ಕ್,ಸ್ವೀಡನ್ ಮತ್ತು ನಾರ್ವೆ ಯಲ್ಲಿ  ಸುಮಾರು 8 ನೇ ಶತಮಾನದಿಂದ 11 ನೇ ಶತಮಾನದವರೆಗೆ ಇದ್ದವರ ಕಥೆಯೇ ಈ Vikings. Viking ಅಂದರೆ Raider, Pirate ಮುಂತಾದ ಅರ್ಥಗಳಿವೆ.ಇವರು ತಮ್ಮ ನಾವೆ ಏರಿ ವಿಶಾಲ ಕಡಲಿನಲ್ಲಿ ಬಹು ದೂರ ಸಾಗಿ England, Ireland, Scotland, Wales, Iceland, Greenland, North America ಮುಂತಾದ ರಾಷ್ಟ್ರಗಳ ಮೇಲೆ ದಂಡೆತ್ತುವುದೇ,ಅವರುಗಳನ್ನು ಲೂಟಿ ಹೊಡೆಯುವುದೇ ಈ Vikings ಸೀರಿಸ್ ನಲ್ಲಿರುವ ಕಥೆ. 


Game of Thrones ಎಂಬ ಉದ್ದದ Series ನೋಡಿ ಮುಗಿಸಿದ್ದ ನನಗೆ ಅದೊಂದೇ ವಾವ್, ಅಧ್ಭುತ ಅಂತ ಮೊದಲಿಗೆ ಅನ್ನಿಸಿದ್ದು ಹೌದು.ಆದರೆ ಅದನ್ನು ಸುಳ್ಳು ಮಾಡಿದ್ದು ಈ Vikings ಎಂಬ ಕಡಲ ಯೋಧರ ಸಾಹಸಗಾಥೆಯ Series. 


ಇದನ್ನು ಎರಡು ವರ್ಷಗಳ(2018) ಹಿಂದೆಯಷ್ಟೇ ನೋಡಲು ಶುರು ಮಾಡಿದ್ದು.ಮೊದಲ Episode ರುಚಿ ಹತ್ತಿಸಲಿಲ್ಲ.ಆದರೂ ಪಟ್ಟು ಹಿಡಿದು ನೋಡಿದ ನನಗೆ Ragnar Lothbrok ಎಂಬ ಬೆಕ್ಕಿನ ಕಣ್ಣಿನ ಚೆಲುವ ಅದೆಂತಹ ಹುಚ್ಚು ಹಿಡಿಸಿ ಬಿಟ್ಟ ಎಂದರೆ ನಂತರದ ಎಲ್ಲಾ ಎಪಿಸೋಡ್ ಗಳು ಹಾಗೇ ಸರಾಗವಾಗಿ ನನ್ನ ಹೆಚ್ಚಿನ ರಾತ್ರೆಯ ನಿದ್ದೆಯನ್ನು ನುಂಗಿ ಹಾಕಿ ಬಿಟ್ಟಿತ್ತು. ಎಪಿಸೋಡ್ ನಂತರ ಎಪಿಸೋಡ್.. ಸೀಸನ್ ನಂತರ ಸೀಸನ್ ಗಳು ನನಗರಿವಿಲ್ಲದೆಯೇ ಮುಗಿದು ಹೋಗಿ ಬಿಟ್ಟಿದ್ದವು. 


Ragnor ಗೆ ಒಬ್ಬಳು ಸುಂದರವಾದ ಚೆಲುವೆ ಹೆಂಡತಿ Lagertha. ಅವರಿಬ್ಬರದ್ದು ಮುದ್ದಾದ ಜೋಡಿ. ಅವಳು ಕೂಡ ಒಳ್ಳೆಯ ಯೋಧೆ. ಅವಳ ಸಂಪೂರ್ಣ ಹೆಸರೇ lagertha shield maiden ಅಂತ. ಹುಡುಗಿಯರಲ್ಲಿ ಅವಳಂತಹ ಯೋಧೆ ಯಾರೂ ಇಲ್ಲ. ಅಷ್ಟೇ ಏಕೆ ಎಷ್ಟೋ ಗಂಡಸರನನ್ನು ಒಮ್ಮೆಗೆಯೇ ಹೆಡೆಮುರಿ ಕಟ್ಟ ಬಲ್ಲ ತಾಕತ್ತು ಅವಳಿಗಿದೆ.ಇವರಿಬ್ಬರು ತಮ್ಮ ಮಕ್ಕಳೊಂದಿಗೆ ತಮ್ಮ ಸೈನ್ಯ ಕಟ್ಟಿಕೊಂಡು ನೂರಾರು ನಾವೆ ಏರಿ ಎಷ್ಟೋ ಸಮುದ್ರಗಳನ್ನು ದಾಟಿ ಹೋಗಿ, ಗೆದ್ದ ಯುದ್ಧಗಳು ಒಂದೇ  ಎರಡೇ...ಅದೊಂದು ದೊಡ್ಡ ಸಾಹಸಗಾಥೆ.. Vikings ಗಳ ಪಾಲಿನ ಸರ್ವ ಶ್ರೇಷ್ಠ Saga.. 


ಅವರುಗಳಲ್ಲಿ ಸಮುದ್ರದಲ್ಲಿ ನಾವೆ ಏರಿಕೊಂಡು ಬೇರೆ ಹೊಸ ಹೊಸ  ಭೂಭಾಗಗಳಿಗೆ ಹೋಗಿ ದಾಳಿ ಮಾಡಿ ಬರದಿದ್ದರೆ ಅವರು Viking ಅಂತ ಅನ್ನಿಸಿಕೊಳ್ಳುವುದೇ ಇಲ್ಲ. ಚಿಕ್ಕ ಮಗು ಕೂಡ Raid ಮಾಡಲು ಹೋಗುವೆ ಎಂದು  ಕೊಡಲಿ ಹಿಡಿದು ನಿಂತು ಬಿಡುತ್ತದೆ. ಅವರ ಮುಖ್ಯ ಕೆಲಸವೇ ಅದು.ಅವರಲ್ಲಿ ಹೆಣ್ಣು ಗಂಡು ಭೇಧವಿಲ್ಲದೆ ಯುಧ್ಧ ಮಾಡುತ್ತಾರೆ, ನೆತ್ತರು ಸುರಿಸಿ,ನೆತ್ತರು ಹರಿಸುತ್ತಾರೆ. Viking ಗಳು ಒಂಥರಾ ಖಡಕ್ ಜನರು.ಅವರು ದಾಳಿ ಮಾಡಲು ಬರುತ್ತಾರೆ ಎಂದರೆ ಹೆಚ್ಚಿನ ಯುರೋಪ್ ರಾಷ್ಟ್ರಗಳು ಬೆಚ್ಚಿ ಬೀಳುತ್ತಿದ್ದವು.ಅಂತಹ Viking ಗಳಿಗೆ  ಕಡಲಿನಲ್ಲಿ ಹೋಗಲು ಸುಸಜ್ಜಿತ ಬೋಟ್ ಗಳನ್ನು ಮಾಡಿ ಕೊಡಲು Floki ಅಂತ ಒಬ್ಬ ಇದ್ದ .Floki the boat builder ಅಂತಾನೇ ಅವನು ಹೆಸರುವಾಸಿ. 


Vikings ಕಥೆಯಲ್ಲಿ Ragnar Lothbrok ಗಿಂತ ದೊಡ್ಡ Viking ಯಾರೂ ಕೂಡ  ಇಲ್ಲ.ಅವನು ಇಡೀ ವೈಕಿಂಗ್ ಕಥೆಯ ಲೆಜೆಂಡ್. ಅವನಂತಹ  ಸಾಹಸವಂತನೂ ಯಾರೂ ಇರಲಿಲ್ಲ ಮತ್ತು ಅವನಂತಹ ಜನಾನುರಾಗಿ ನಾಯಕನೂ ಕೂಡ ಅವರಲ್ಲಿ ಯಾರೂ ಇರಲಿಲ್ಲ. ಕೇವಲ Vikings ಗಳು ಮಾತ್ರವಲ್ಲ, ಶತ್ರುಗಳು ಕೂಡ ಗೌರವಿಸುತ್ತಿದ್ದ ನಾಯಕ ಎಂದರೆ ಅದು Ragnor Lothbrok. Viking ಗಳು ಅಂತು ಅವನನ್ನು ತಮ್ಮ ಹೃದಯ ಸಿಂಹಾಸನದಲ್ಲಿ ಕುಳ್ಳಿರಿಸಿ ಮೆರೆಸಿ ಬಿಟ್ಟಿದ್ದರು.ಅವನ ಮೇಲೆ ಅಂತಹ ವಿಶ್ವಾಸ, ಅಂತಹ ಪ್ರೀತಿ. 


ಅಂತಹ Ragnar ಆರು ಸೀಸನ್ ಗಳ Vikings ನ ಮಧ್ಯ ಭಾಗದಲ್ಲಿಯೇ ಅಂದರೆ ಮೂರನೆ ಸೀಸನ್ ನಲ್ಲಿಯೇ ವೈರಿಗಳ ಕೈಗೆ ಸಿಕ್ಕಿ ಹೀನಾಯವಾಗಿ ಸರ್ಪಗಳ ಕೈಯಿಂದ ಕಚ್ಚಿಸಿಕೊಂಡು ಸತ್ತೇ ಹೋಗಿ ಬಿಡುತ್ತಾನೆ!


ಈಗ ಕಥೆಗೆ ನಾಯಕನೇ ಇಲ್ಲ!!!


ಅವನಿಗಾಗಿ ನಿಜದಲ್ಲಿಯೂ ವಿಶ್ವದಾದ್ಯಂತ ಕಣ್ಣೀರಾದ  Vikings ಸಿರೀಸ್ ಅಭಿಮಾನಿಗಳು ಅದೆಷ್ಟೋ ಜನರು ಇದ್ದರು. ಯಾಕೆಂದರೆ Ragnar ಇಲ್ಲದ Viking ಸೀರಿಸ್ ಅನ್ನು ಕಲ್ಪಿಸಿಕೊಳ್ಳಲು ಕೂಡ ಸಾಧ್ಯವೇ ಇಲ್ಲ. ಅಂತಹದ್ದೊಂದು Impact ಸೃಷ್ಟಿಸಿದ್ದ ಪಾತ್ರವದು.. 


ಇನ್ನು ಮುಂದೆ ಈ ಸಿರೀಸ್ ಅಷ್ಟೇ... ಅಂತ ಎಲ್ಲರೂ  ಅಂದುಕೊಂಡಿದ್ದರು.ಆದರೆ ಈ ಸೀರಿಸ್ ನ ಹುಚ್ಚನ್ನು ಮತ್ತೆ Intensive ಮಾಡಿದ್ದು Ragnor ಗಿಂತಲೂ ಹೆಚ್ಚು ಜನರನ್ನು  ಹುಚ್ಚೆಬ್ಬಿಸಿದ್ದು ಅಂದರೆ ಅದು  Ragnor ನ ಇಬ್ಬರು ಮಕ್ಕಳಾದ Bjorn ಮತ್ತು Ivar..


ಇಬ್ಬರು ಸಹ Ragnor ಮಕ್ಕಳಾಗಿದ್ದರೂ.. ಅವರು ಪರಸ್ಪರ ಪರಮ ವೈರಿಗಳು!!


ಎಂದಿಗೂ ಒಬ್ಬರಿಗೊಬ್ಬರಿಗೆ ಆಗಿ ಬರಲೇ ಇಲ್ಲ! 


Bjorn ಹೆಸರೇ Bjorn Ironside ಎಂದು. ಯಾವುದೇ ಲೋಹದ ಆಯುಧಗಳು ದೇಹಕ್ಕೆ ಸೋಕದಂತೆ ಯುದ್ಧ ಮಾಡಬಲ್ಲ ಚತುರ..ಮಹಾ ಬಲಶಾಲಿ. ನಿಧಾನವಾಗಿ Ragnor ನಂತಹ Ragnor ಕೂಡ ನೆನಪಿಗೆ ಬಾರದಷ್ಟು,ಮರೆತು ಹೋಗುವಷ್ಟು  ಇಷ್ಟ ಆಗ್ತಾನೆ Bjorn.ಅವನೂ ಕೂಡ Ragnor ನಂತೆಯೇ ಬಹಳ ಒಳ್ಳೆಯವನೇ. ತಂದೆಯ ಒಟ್ಟಿಗೆ ಯುದ್ಧ ಕಲೆಯಲ್ಲಿ ಪಳಗಿದವನು Bjorn. Ragnor ಮತ್ತು Lagertha ನ ಏಕೈಕ ಪುತ್ರ..! 


Vikings ನಲ್ಲಿ ಮೊದಲಿನಿಂದಲೂ ಯಾರಿಗೆ ಆಗಲಿ ಇಷ್ಟವೇ ಆಗದಂತ character ಅಂತ ಒಂದು ಇದ್ದರೆ.. ಅದು Ivar..!!


ಈ Ivar ಇದ್ದಾನಲ್ಲ Ragnor ನ ಕಿರಿಯ ಮಗ. Ragnor ನ ಮತ್ತೊಬ್ಬಳು ಹೆಂಡತಿ Aslaug ಗೆ ಕೊನೆಯಲ್ಲಿ ಹುಟ್ಟಿದವ. ಈ ನೀಲಿ ಕಣ್ಣಿನ ಹುಡುಗನ ಸರಿಯಾದ ಹೆಸರೇ Ivar the boneless.ಅದು ಯಾಕೆಂದರೆ ಸೊಂಟದಿಂದ ಕೆಳಗೆ ಅವನ ದೇಹದಲ್ಲಿ ಶಕ್ತಿಯೇ ಇಲ್ಲ. ಕೇವಲ ಹಾವಿನಂತೆ  ತೆವಳಿಕೊಂಡು ಹೋಗಬಲ್ಲ.. Walking stick ಇದ್ದರೆ ಮಾತ್ರ ಎದ್ದು  ನಡೆದಾಡಬಲ್ಲ ಈ Ivar ...!


ಆದರೆ ಈ Ivar  ಎಲ್ಲರೂ ಅಂದು ಕೊಂಡಷ್ಟು  Easy  ಅಂತು ಅಲ್ಲವೇ ಅಲ್ಲ.. Very Tough. ಅವನ ಮೇಲೆ ಯಾರಿಗೂ ಯಾವುದೇ ಭರವಸೆಯೇ ಇರಲಿಲ್ಲ. ಆದರೆ Vikings ನ ಮುಂದಿನ  ಪೀಳಿಗೆಯಲ್ಲಿ ಅದರಲ್ಲೂ ತನ್ನ ಮಕ್ಕಳಲ್ಲಿ ಅಧ್ಭುತವಾದದ್ದನ್ನು ಯಾರಾದರೂ ಸಾಧಿಸಿದರೆ ಅದು ನೀನೇ ಎಂದು Ivar ಗೆ ಸ್ವತಃ ಅವನ ತಂದೆ Ragnar ಸಾಯುವ ಮುಂಚೆಯೇ  ಹೇಳಿರ್ತಾನೆ.. ಯಾಕೆಂದರೆ Ivar ನ ಬುದ್ದಿವಂತಿಕೆಯೇ ಅಂತಹದ್ದು! 


ಪರಮ ಕ್ರೂರಿ ಆದ ಈ Ivar ನ ಹಾಗೇ Unorthodox ಆಗಿ ಯೋಚನೆ ಮಾಡುವ ಬುದ್ಧಿವಂತ ಬಹುಶಃ ಯಾರೂ ಇರಲೇ ಇಲ್ಲ.ಸೋಲುವ ಯುದ್ಧವನ್ನು ಕೂಡ  ತಾನು ಯುದ್ಧ ಮಾಡದೇ ತನ್ನ ಬುದ್ಧಿ ಉಪಯೋಗಿಸಿಯೇ ಗೆಲ್ಲ ಬಲ್ಲ ಜಾಣ ಅವನು.ಅವನು ಅದೆಂತಹ ಬುದ್ಧಿವಂತ ಅಂದರೆ ತನ್ನ ವೈರಿ ಪಾಳಯ ಸೇರಿಕೊಂಡು ತನ್ನ ಪರಮ ವೈರಿ ಅಣ್ಣ ಆದಂತಹ ಅಪ್ರತಿಮ ಯೋಧ Bjorn ಅನ್ನೇ ಎರಡೆರಡು ಬಾರಿ ತನ್ನ ಬುದ್ಧಿ ಶಕ್ತಿ ಉಪಯೋಗಿಸಿ ಸೋಲಿಸಿ ಬಿಡುತ್ತಾನೆ. ಮಾತ್ರವಲ್ಲ Bjorn ಅನ್ನು ಕೊನೆಯ ಸಿರೀಸ್ ನ ಆರಂಭದಲ್ಲಿಯೇ ಕೊಂದು ಬಿಡುತ್ತಾನೆ ಈ Ivar !!


Ragnor ಇಲ್ಲ,Lagertha ಇಲ್ಲ, Bjorn ಇಲ್ಲ... ಇನ್ನು ಇದರ  ಕಥೆ ಅಷ್ಟೇ ಅಂದುಕೊಂಡಾಗ  Vikings ನಲ್ಲಿ ಪುನಃ ಅತೀಯಾದ ಹುಚ್ಚು ಹಿಡಿಸುವುದೇ ಈ Ivar the boneless!


ಸಿರೀಸ್ ಉದ್ದಕ್ಕೂ ಹೇಟ್ ಮಾಡುತ್ತಾ ಬಂದರೂ ಕೊನೆಯಲ್ಲಿ ಯಾಕೋ Ivar ಕೂಡ ಅತಿಯಾಗಿ ಇಷ್ಟ ಆಗಿ ಬಿಡ್ತಾನೆ. Ragnar ಹಾಗೂ Bjorn ನಂತೆಯೇ ಫೇಮಸ್ ಆಗಿ ಬಿಡ್ತಾನೆ ಅವನು.ಮಾತ್ರವಲ್ಲ ಕೊನೆ ಕೊನೆಗೆ  Viking ಲೆಜೆಂಡ್ Ragnor Lothbrok ಕೂಡ ಈ Ivar ನಿಂದಾಗಿ ನೆನಪಿಗೆ ಬರುವುದೇ ಇಲ್ಲ. ಇಲ್ಲಿ ವೀರರಂತೆ ಮೆರೆದವರೆಲ್ಲರೂ ಕೊನೆಗೆ ಮಣ್ಣಾಗಿಯೇ ಹೋಗುತ್ತಾರೆ.. ಕೊನೆಯ ಸೀರಿಸ್ ನ ಕೊನೆಯ ಎಪಿಸೋಡ್ ನಲ್ಲಿ Ivar ಕೂಡ ಯುದ್ಧ ಮಾಡುತ್ತಲೇ ಸತ್ತು ಹೋಗ್ತಾನೆ!!

ಎದುರಿಗೆ ಇದ್ದ ಸಾಮಾನ್ಯ ಸೈನಿಕ ಒಬ್ಬ ನಡೆಯಲಾಗದ ಓಡಲಾಗದ ಈ  Ivar ನನ್ನು  ಸುಲಭವಾಗಿ ಚಾಕುವಿನಿಂದ ಚುಚ್ಚಿ ಕೊಂದು ಬಿಡುತ್ತಾನೆ!! 


2013 ರಲ್ಲಿ ಆರಂಭವಾದ ಈ ಸೀರಿಸ್ ನಲ್ಲಿ ಒಟ್ಟು 6 ಸೀಸನ್ ಗಳಿವೆ. ಮೊದಲ ಮೂರು ಸೀಸನ್ ನಲ್ಲಿ ತಲಾ ಹತ್ತು ಎಪಿಸೋಡ್ ಗಳಿದ್ದರೆ ಕೊನೆಯ ಮೂರು ಸೀಸನ್ ನಲ್ಲಿ ತಲಾ  ಇಪ್ಪತ್ತು ಎಪಿಸೋಡ್ ಗಳಿವೆ.ಕೊನೆಯ ಆರನೆಯ ಸೀಸನ್ ಕಳೆದ ವಾರವಷ್ಟೇ ರಿಲೀಸ್ ಆಗಿದ್ದು. ಅದುವೇ ಫೈನಲ್ ಸೀಸನ್ ಆಗಿದೆ. ಸದ್ಯಕ್ಕೆ 7 ವರ್ಷಗಳ ಈ  ಅಧ್ಭುತ Viking ಜರ್ನಿಗೆ ತೆರೆ ಬಿದ್ದಿದೆ. 


ಇದರಲ್ಲಿ Travis Fimmel(Ragnar) ,Katheryn Winnick(Lagertha) , Alexander ludwig(Bjorn) , Alex Hogh Anderson(Ivar),Gustaf Skarsgad(Floki)ಹಾಗೂ ಇನ್ನೂ  ಹಲವಾರು ನಟರು ಅತ್ಯಧ್ಭುತವಾಗಿ ನಟಿಸಿದ್ದಾರೆ ಮಾತ್ರವಲ್ಲ ತುಂಬಾನೇ ಇಷ್ಟ ಆಗ್ತಾರೆ ಇವರೆಲ್ಲರೂ.ಇದು History Tv ಯಲ್ಲಿ ಮತ್ತು Netflix ನಲ್ಲಿ ಇದೆ.


#Series_Reveiw 

ab

Comments

Popular posts from this blog

ಗಗನದ ಸೂರ್ಯ

ಪಯ್ಯನ ಪರಾಕ್ರಮ