ತಂತ್ರಾಗ್ನಿ
#ತಂತ್ರಾಗ್ನಿ
ಊರಿನ ಜನರೆಲ್ಲಾ ನೆಮ್ಮದಿಯಿಂದ ಮಲಗಿ ನಿದ್ರಿಸುವಾಗ, ಅಮಾವಾಸ್ಯೆಯ ನಡುರಾತ್ರಿ ನೀವು ಕೈಯಲ್ಲೊಂದು ತಲೆಬುರುಡೆಯನ್ನು ಹಿಡಿದುಕೊಂಡು,ಗೂಬೆ ಕೂಗುವಾಗ ನರಿ ಊಳಿಡುವಾಗ ಕಾಲಿನಡಿಯ ತರಗೆಲೆಗಳ ಸಪ್ಪಳವೇ ಭಯ ಹುಟ್ಟಿಸುವಂತಿರುವಾಗ,ಸ್ಮಶಾನಕ್ಕೆ ಒಬ್ಬರೇ ಸರಸರನೆ ನಡೆದು,ಯಾವುದೋ ಅರೆಬೆಂದ ಶವದ ಮುಂದೆ ಜೋರಾಗಿ ಭಯಾನಕವಾಗಿ ಮಂತ್ರ ಹೇಳುತ್ತಾ,ರಾತ್ರಿ ಪೂರ್ತಿ ಸ್ವತಃ ನೀವೇ ಯಾವುದೋ ಒಂದು ಘೋರವಾದ ಸಾಧನೆ ಮಾಡಿದಂತಹ ಅನುಭವ.... ಈ ಪುಸ್ತಕ ಓದುತ್ತಾ ಓದುತ್ತಾ ನಿಮಗೂ ಆಗಿ ಬಿಡುವುದು.
ಒಂದೇ ದಿನದಲ್ಲಿ ಪುಸ್ತಕ ಓದಿ ಮುಗಿಸಿದ್ದೆ.ಮನೆಯಲ್ಲಿಯೇ ಇದ್ದರೂ ಸಹ ಪುಸ್ತಕ ಸಂಪೂರ್ಣ ಓದಿ ಮುಗಿಯುವವರೆಗೂ ನಾನೂ ಕೂಡ ಯಾವುದೋ ಒಂದು ಅಪರಿಚಿತ ಸ್ಮಶಾನದಲ್ಲಿ ಕಥೆಯ ಪಾತ್ರಗಳೊಂದಿಗೆ ಹಾಗೇ ಸಂಚರಿಸಿ ಬಂದಂತಹ ಅನುಭವ.
ಒಂದು ಸೆಕೆಂಡ್ ಕೂಡ ಬೋರ್ ಹೊಡೆಸದ ಅತ್ಯುತ್ತಮ ಕಥೆ ಹೆಣೆದಿದ್ದಾರೆ ಲೇಖಕ Ganesh Prasad Nayak .ಪ್ರತೀ ಪೇಜು ಕೂಡ ರೋಚಕತೆಯೊಂದಿಗೆ ಮುಗಿದು ಮತ್ತೊಂದು ರೋಚಕತೆಯೊಂದಿಗೆ ಹೊಸ ಪೇಜ್ ತೆರೆದುಕೊಳ್ಳುವ ಮೂಲಕ ನೀವು ಕಥೆ ಓದುವುದನ್ನು ಬಿಟ್ಟು ಬೇರೆ ಏನೂ ಕೆಲಸ ಮಾಡದಂತೆ ಹಾಗೇ ಆವರಿಸಿಕೊಂಡು ಬಿಡುತ್ತದೆ ಈ ತಂತ್ರಾಗ್ನಿ. ಎಲ್ಲಕ್ಕಿಂತ ಹೆಚ್ಚಾಗಿ ಪ್ರತೀ ಸನ್ನಿವೇಶವೂ ಕಣ್ಣಿಗೆ ಕಟ್ಟಿದ್ದಂತಹ ದೃಶ್ಯ ಇಲ್ಲಿ.
ಈ ಕಥೆಯಲ್ಲಿ ಲೇಖಕ ಗಣೇಶ್ ಒಬ್ಬರು Excellent ಬರಹಗಾರರು ಅಂತ ಅನಿಸುವುದು ಕಥೆಗಾಗಿ ಅವರು ನಡೆಸಿದ ಅಧ್ಯಯನ.ಅದು ಅವರ ಕಥೆಯಲ್ಲಿ ಎದ್ದು ಕಾಣುತ್ತದೆ.ಸುಮ್ಮನೆ ಮಾಟ ಮಂತ್ರ ತಂತ್ರದ ಕಥೆ ಬರೆಯುತ್ತಾ ಹೋಗಿಲ್ಲ ಅವರು. ಇಂತಹ ಕಥೆ ಬರೆಯುವಾಗ ಎಂದಿನಂತೆ Orthodox ಶೈಲಿಗೆ ಮೊರೆ ಹೋಗದೆ ಕುತೂಹಲವನ್ನು ಕ್ಷಣ ಕ್ಷಣಕ್ಕೂ ತೀವ್ರಗೊಳಿಸುವ ಕಥೆಯನ್ನೇ ಬರೆದು ಓದುಗನಲ್ಲಿ ಆಸಕ್ತಿಯನ್ನು ಹುಟ್ಟಿಸುತ್ತಾ, ಕೆರಳಿಸುತ್ತಾ ಹೋಗಿದ್ದಾರೆ ಲೇಖರು.
ಕಥೆಯಲ್ಲಿ ಬರುವ ತಂತ್ರಸಾಧನೆಯ ಪ್ರತೀ ಕ್ರಿಯೆಗೂ,ತರ್ಕಕ್ಕೂ Logic ಗಳನ್ನು ಕೂಡ ಅಲ್ಲಲ್ಲೇ ಕೊಟ್ಟು, ಕಥೆ ಕಾಲ್ಪನಿಕ ಆದರೂ ಸಹ ಕಥೆ ಓದುಗನಿಗೆ ಹತ್ತಿರವಾಗುತ್ತಾ ಹೋಗುತ್ತದೆ.ಕಥೆಯ ನಡು ನಡುವೆ ಈ ಲೇಖಕರು ಕೂಡ ಒಬ್ಬ ನಿಜವಾದ ತಾಂತ್ರಿಕರೇ ಆಗಿರಬಹುದಾ ಅಂತ ನಿಮಗೆ ಅನ್ನಿದರೆ.. ಅದು ಗಣೇಶ್ ಎಂಬ ಲೇಖಕನ ಬರಹಕ್ಕಿರುವ ತಾಕತ್ತು.
ಅಭಿಸಾರಿಕೆ, ಕರ್ಣ ಪಿಶಾಚಿ ಕಥೆಯ ಪೂರ್ತಿಯಾಗಿ ಕಾಡುತ್ತದೆ.ಕಿರಣ್ ಅಮಯಾಕನಂತೆ ಕಾಣುತ್ತಾನೆ.ಆದರೆ ಅವನದ್ದೊಂದು ಎಂತಹ ಕಥೆ ಎಂದು ಕಥೆ ನಿಧಾನವಾಗಿ ತೆರೆದುಕೊಳ್ಳುತ್ತಾ ಹೋದಂತೆ ಓದುಗನನ್ನು ಕ್ಷಣ ಕ್ಷಣವೂ ಬೆಚ್ಚಿ ಬೀಳಿಸುತ್ತಾ ಹೋಗುತ್ತಾನೆ ಈ ಕಿರಣ್ ಮತ್ತು ಅವನೊಳಗಿರುವ ತ್ರಿವೇದಿ.ಮಾಟ ಮಂತ್ರ ತಂತ್ರ ಗಳ ನಡುವಿನಲ್ಲಿ ಒಂದು ನಲುಗಿದ ಪ್ರೇಮವೂ ಇದೆ.ಭಾರತದ ತಂತ್ರ ವಿಧ್ಯೆಯ ಜೊತೆ ಜೊತೆ ಪಾಶ್ಚಾತ್ಯ ಮಾಟವೂ ಕೂಡ ಸೇರಿಕೊಂಡು ಭಯಬೀಳಿಸುತ್ತದೆ.ಮಾಟ ಮಂತ್ರದ ಕಥೆಯಲ್ಲಿ ಇಷ್ಟೊಂದು ಸರಕುಗಳಿವೆಯೇ ಎಂಬ ಭಾವ ಓದುತ್ತಾ ಓದುತ್ತಾ ಓದುಗನಿಗೆ ಖಂಡಿತವಾಗಿಯೂ ಮೂಡದೇ ಇರದು.
ಕೆಲವು ಪುಸ್ತಕ ಕೈಗೆ ಎತ್ತಿಕೊಂಡಾಗ ಯಾವಾಗ ಮುಗಿಯುತ್ತದೋ ಎನ್ನುವ ಭಾವ ಕೊಡುತ್ತದೆ. ಆದರೆ ಈ ಪುಸ್ತಕ ಓದಲು ಶುರು ಮಾಡಿದ ಮೇಲೆ ಅದೇ ನಿಮ್ಮನ್ನು ಓದಿಸಿಕೊಂಡು ಹೋಗುತ್ತದೆ... ನಿಮಗೆ ಮಾಟ ಮಂತ್ರದ ಕಥೆ ಇಷ್ಟವಿದ್ದರೂ.. ಇಷ್ಟವಿಲ್ಲದೇ ಇದ್ದರೂ ಓದು ಮಾತ್ರ ಸರಾಗ..
ಮೊದಲನೆಯದಾಗಿ ನಾನು ಮಾಟ ಮಂತ್ರಗಳ ಕಥೆಗಳನ್ನು,ಕಾದಂಬರಿಗಳನ್ನು ಅಷ್ಟಾಗಿ ಓದುವುದಿಲ್ಲ.ಆದರೆ ಕ್ಲಾಸ್ ಮೇಟ್ Vivek Prabhu.. ನೀನು ಇದನ್ನೊಮ್ಮೆ ಓದಲೇಬೇಕು.. ಅಂತ ನನ್ನ ಮನೆಗೆಯೇ ಕಳುಹಿಸಿಕೊಟ್ಟಿದ್ದ. ಇದನ್ನೇ ಯಾಕೆ ಕಳುಹಿಸಿದ ಅಂತ ನನಗೆ ಅರ್ಥವಾಗಿರಲಿಲ್ಲ.
ಕಥೆ ಪೂರ್ತಿ ಓದಿದ ನಂತರ ಅನಿಸಿದ್ದು.. ಮಾಟ ಮಂತ್ರಗಳ ಕಥೆ ಬರೆಯುವುದು ನಿಜವಾಗಿಯೂ ಬೇರೆ ಕಥೆ ಬರೆದಂತೆ ಅಷ್ಟು ಸುಲಭ ಸಾಧ್ಯ ಅಲ್ಲವೇ ಅಲ್ಲವೆಂದು ಮತ್ತು ರೋಚಕ ಕಥೆಗಳನ್ನು ಓದುವವರಿಗೆ ಈ ಕಾದಂಬರಿ ಖಂಡಿತವಾಗಿಯು ಒಂಚೂರೂ ನಿರಾಸೆ ಮಾಡದು ಎಂದೇ ಅನಿಸಿತು.ಒಂದೊಳ್ಳೆಯ ಕಾದಂಬರಿಗಾಗಿ ಥ್ಯಾಂಕ್ಸ್ Raccha ಭಾಯ್ 😌🤟
ಓದಿ ನಿಮಗೂ ಇಷ್ಟವಾಗಬಹುದು...
ಪುಸ್ತಕ - #ತಂತ್ರಾಗ್ನಿ
ಲೇಖಕರು - #ಗಣೇಶ್_ಪ್ರಸಾದ್_ನಾಯಕ್
Book_Reveiw
ab pacchu

Comments
Post a Comment