ಅವನನ್ನು ಮನೆಗೆ ಕಳುಹಿಸಿ ಬಿಡಿ ಪ್ಲೀಸ್..!

 

ನಾನು ಇವತ್ತಾದರೂ ರೋಹಿತ್ ಶರ್ಮ ಆಡುತ್ತಾನೋ ಇಲ್ಲವೋ ಎಂದು  ಬಕ ಪಕ್ಷಿಯಂತೆ ಕಾಯುತ್ತಿದ್ದೇನೆ... 


ಬಹುಶಃ ಇವತ್ತೂ ಕೂಡ ನಿರಾಸೆ ಆಗುವುದು ಗ್ಯಾರಂಟಿ ಎಂದು ನನ್ನ ಮನಸ್ಸು ನನಗೆ ಕುಟ್ಟಿ ಕುಟ್ಟಿ ಹೇಳುತ್ತಲೇ ಇದೆ. ..ಒಂದು ವೇಳೆ ಹಾಗೆ ಆದ ಪಕ್ಷದಲ್ಲಿ ನನ್ನ ಹೃದಯ ಸಮುದ್ರ ಕಲಕಿ,ರೋಷಾಗ್ನಿ ಜ್ವಾಲೆ ಉರಿದುರಿದು.. ಹತಾಶೆ,ಮುಗಿಲು ಮುಟ್ಟುವ ಆಕ್ರಂದನ Accelerate ಆಗುವುದು ಮಾತ್ರ ಪಕ್ಕಾ..ಅದು ಕೈ ಕೈ ಹಿಸುಕಿಕೊಳ್ಳ ಬೇಕೆ ಹೊರತು ಮತ್ತೇನು ಮಾಡಲಾಗದ ಅಸಹಾಯಕತೆ. 


ಏನೇ ಹೇಳಿ ಮನುಷ್ಯನಿಗೆ ಅವನ ಒಟ್ರಾಸಿ ಟ್ಯಾಲೆಂಟೇ ಅವನಿಗೆ ಮುಳುವಾಗಬಾರದು..ಅದಕ್ಕೆ Perfect example ಈ ರೋಹಿತ್.


ಯಾವುದೇ ಇಂಜುರಿ ಪ್ರಾಬ್ಲಂ ಇರದೇ,ಕೈ ಕಾಲು ಗಟ್ಟಿ ಮುಟ್ಟಾಗಿ ಇದ್ದು..ಫಾರ್ಮ್ ನ ಉತ್ತುಂಗದಲ್ಲಿ ಇರುವಾಗ...ನಿಗದಿತ ಓವರ್ ಗಳ ಲೆಜೆಂಡ್ ಎಂದೇ ವಿಶ್ವದಾದ್ಯಂತ ಗುರುತಿಸಿಕೊಂಡರೂ ಸಹ.... ತಂಡದಲ್ಲಿ ಆಡದೇ,ಡಗ್ ಔಟ್ ನಲ್ಲಿ ಕುಳಿತುಕೊಂಡು ಗಡ್ಡ ಕೆರೆದು ಕೊಳ್ಳುತ್ತಾ,ಏನನ್ನೋ ಕೈಗೆ ಸಿಕ್ಕಿದ್ದನ್ನು ತಿನ್ನುವುದನ್ನು  ನೆಟ್ಟಿಗರು ಅವನು ಡಗ್ ಔಟ್ ಅಲ್ಲಿ ಸ ಏನೋ ತಿನ್ತಾನೇ ಇರ್ತಾನೆ ಡುಮ್ಮ.. ಅಂತ ಹೇಳಿದರೆ..ಪಕ್ಕ ರೋಹಿತ್ ವಿರೋಧಿಗಳು ಇಲ್ಲ ಅವ Confirm ವಡಾ ಪಾವೇ ತಿನ್ತಾ ಇದ್ದ ಅಂತ ಟ್ರಾಲ್ ಮಾಡುವುದನ್ನು ನೋಡುವಾಗ... ರೋಹಿತ್ ಅಭಿಮಾನಿ ಆಗಿ ಬಾರೀ ಬೇಜಾರ್ ಆಗ್ತದೆ ಮರ್ರೆ ಸತ್ಯ. 


ಇವತ್ತಾದರೂ ಆಡಿಸಿ.. ಇಲ್ಲದಿದ್ದರೆ ದಯವಿಟ್ಟು ಅವನನ್ನು ಮನೆಗೆ ಕಳುಹಿಸಿ ನಿಮಗೆ ಬೇಕಾದ Experiment ಮಾಡಿ ರವಿ ಮಾಮ.. 😭😢


Ind Vs Eng 2021

3rd T20I

Ahmedabad 


#Hitman_Fan ❤️

ab pacchu

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..