ಮದನಿಕೆ: ದಿ ಲಾಸ್ಟ್ ಸೀನ್

 

#ಮದನಿಕೆ:  ದಿ ಲಾಸ್ಟ್ ಸೀನ್.


ನಾಟ್ಯರಾಣಿ ಶಾಂತಲೆಯ ಕಥೆಯೇ ಈ ಕಾದಂಬರಿಯ ಹೂರಣ.ಹಾಗಂತ ಚರಿತ್ರೆಯ ಕಥೆಯಲ್ಲ ಇದು.ಕಾಲ್ಪನಿಕ ಕಥೆಯಲ್ಲಿ ವಿಷ್ಣುವರ್ಧನ ಮತ್ತು ಶಾಂತಲೆಯರು ಕೂಡ ಅಲ್ಲಲ್ಲಿ ಬಂದು ಹೋಗುತ್ತಾರೆ.ಈ ಕಥೆಯೂ ಕೂಡ ಬೇಲೂರಿನ ಅಕ್ಕ ಪಕ್ಕದಲ್ಲಿಯೇ ಜರುಗುತ್ತದೆ.. 


ಬೇಲೂರಿನ ಸುಂದರ ಮದನಿಕೆಯರಂತೆ ಇದರಲ್ಲಿಯೂ ಒಬ್ಬಳು ಮದನಿಕೆ ಇದ್ದಾಳೆ. ಅವಳು ಶಾಂತಲೆಯಂತೆ ಬಹಳ ಚೆನ್ನಾಗಿ ನೃತ್ಯವನ್ನೂ ಕೂಡ ಮಾಡುತ್ತಾಳೆ.ಅವಳ ಕಥೆಯೂ ಕೂಡ ಹೆಚ್ಚು ಕಡಿಮೆ ವಿಷ್ಣುವರ್ಧನನ ಶಾಂತಲೆಯಂತೆಯೇ ಇದೆ. 


Ramesh Shettigar Manjeshwar ಅವರು ಬರೆದಿರುವ ಈ ಕಾದಂಬರಿ ಓದಲು ಜಾಸ್ತಿ ದಿನ ಏನು ಬೇಡುವುದಿಲ್ಲ.ಒಂದೇ ಗುಕ್ಕಿನಲ್ಲಿ ಓದಿ ಮುಗಿಸಬಹುದು. ಕಾಲ್ಪನಿಕ ಕಾದಂಬರಿಯೇ ಆದರೂ ಚರಿತ್ರೆಯ ಪಾತ್ರಗಳನ್ನು ಈ ಕಾಲದ ಪಾತ್ರಗಳೊಂದಿಗೆ ಹದವಾಗಿ ಬೆಸೆದು ಕೊನೆಯವರೆಗೆ ಓದಿಸಿಕೊಂಡು ಹೋಗುತ್ತಾರೆ ಲೇಖಕರು."ದಿ ಲಾಸ್ಟ್ ಸೀನ್ " ಎಂಬ ಕಥೆಯ ಉಪ ಶೀರ್ಷಿಕೆಗೂ ಕಥೆಯ ಕೊನೆಯ ದೃಶ್ಯಕ್ಕೂ ಪ್ರಾಮುಖ್ಯತೆ ಇದೆ.. ಹಾಗಾಗಿಯೇ ಈ ಕಥೆಯ ಹೆಸರು "ಮದನಿಕೆ - ದಿ ಲಾಸ್ಟ್ ಸೀನ್".ಓದಿಲ್ಲದಿದ್ದರೆ ಓದಿ,ನಿಮಗೂ ಇಷ್ಟವಾಗಬಹುದು.. 


ಪುಸ್ತಕ - #ಮದನಿಕೆ: ದಿ ಲಾಸ್ಟ್ ಸೀನ್

ಲೇಖಕರು - #ರಮೇಶ್_ಶೆಟ್ಟಿಗಾರ್_ಮಂಜೇಶ್ವರ


Book_Reveiw

Ab

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ