ಇಂಗ್ಲಿಷ್ - ಎಂಕ್ಲೆಗ್ ಬರ್ಪುಜಿ ಬ್ರೋ
ತುಳು ಮೂವಿಯಲ್ಲಿ ಬರೀ ನಗು ಇರುವುದಕ್ಕಿಂತಲೂ ಎದ್ದು ಬಿದ್ದು ನಗುವಂತಿದ್ದರೆ ಮಾತ್ರ ಆಗ ಅದು ಒಂದು ಸಕ್ಸಸ್ ಮೂವಿ ಎಂದು ಗುರುತಿಸಲ್ಪಡುತ್ತದೆ.ಆ ಪ್ರಯತ್ನದಲ್ಲಿ "ಇಂಗ್ಲಿಷ್.." ಖಂಡಿತವಾಗಿಯೂ ಯಶಸ್ವಿಯಾಗಿದೆ.
ಅರವಿಂದ್ ಬೋಳಾರ್ ಇದ್ದ ಮೇಲೆ ಕಾಮಿಡಿಯ ಬಗ್ಗೆ ಹೆಚ್ಚು ಮಾತಾಡಬೇಕಾಗಿಯೇ ಇಲ್ಲ. ಅವರು ಸ್ಕ್ರೀನ್ ನಲ್ಲಿ ಇದ್ದಷ್ಟೂ ಹೊತ್ತು ತುಳು ಸಿನಿ ಪ್ರೀಯರಿಗೆ ಅದೊಂತರಹ ರಸದೌತಣ ಇದ್ದಂತೆ. ಜೊತೆಗೆ ಭೋಜರಾಜ್ ವಾಮಂಜೂರ್, ನವೀನ್ ಡಿ.ಪಡೀಲ್,ವಿಸ್ಮಯ್ ವಿನಾಯಕ್,ಪ್ರಥ್ವಿ ಅಂಬರ್, ಉಮೇಶ್ ಮಿಜಾರ್ ಮುಂತಾದವರನ್ನು ಬಳಸಿಕೊಂಡು ಬಹಳ ಸೊಗಸಾಗದ ಔತಣವನ್ನೇ ಉಣಬಡಿಸಿದ್ದಾರೆ ನಿರ್ದೇಶಕ ಸೂರಜ್ ಶೆಟ್ಟಿ ಅವರು.
ಇಂಗ್ಲಿಷ್ ಭಾಷೆ ಸರಿಯಾಗಿ ಬರದಿದ್ದರೆ ಏನೆಲ್ಲಾ ಪಜೀತಿ ಆಗಬಹುದೋ ಅದೆಲ್ಲವೂ ಇದರಲ್ಲಿ ಇದೆ. ಜೊತೆಗೆ ಸ್ವಲ್ಪ ಡಿಫರೆಂಟ್ ಆದ ಕಥೆ. ಅದೇ ದೆವ್ವಗಳ ಮದುವೆ.
ಭಾಷೆಗಳಿಗೆ ಸಂಬಂಧಿಸಿದಂತೆ ಒಂದೊಳ್ಳೆಯ ಮೆಸೇಜ್ ಈ ಚಿತ್ರದಲ್ಲಿ ಇದೆ.ನನ್ನಿಷ್ಟದ ನಟ ಅನಂತ್ ನಾಗ್ ಕೂಡ ಮೂವಿಯಲ್ಲಿ ಕಾಣಿಸಿಕೊಂಡಿದ್ದು ಬಹಳ ಖುಷಿ ನೀಡಿತು.
ಇಷ್ಟವಾಯಿತು.. ನೋಡಿ ನಿಮಗೂ ಇಷ್ಟ ಆಗಬಹುದು,ನಿಮಗೆ ಎಕ್ಕಸಕ ದ ಗುಣನಾಥ್ ಇಷ್ಟ ಆಗಿದ್ದರೆ ಇಂಗ್ಲಿಷ್ ನ ಮಹೇಂದ್ರ ಕೂಡ ಅಷ್ಟೇ ಇಷ್ಟ ಆಗ್ತಾನೆ..ಖಂಡಿತವಾಗಿಯೂ ಎರಡು ಗಂಟೆಗಳ ನಗುವಿಗೆ ಒಂಚೂರು ಮೋಸವಿಲ್ಲ..
Movie_Review
ab pacchu
Comments
Post a Comment