ಕಾಲಬಂಧ

 

#ಕಾಲಬಂಧ :


For Example ಈಗ ನಿಮಗೆ ಒಬ್ಬಳು ಗರ್ಲ್ ಫ್ರೆಂಡ್ ಇದ್ದಾಳೆ ಎಂದು ತಿಳಿದುಕೊಳ್ಳಿ.ಒಂದು ದಿನ  ಅವಳು ನೀವಿಬ್ಬರು  ಮಾಮೂಲಿಯಾಗಿ ಭೇಟಿ ಆಗುವ ಹೋಟೆಲ್ ನಲ್ಲಿ ಎಂದಿನಂತೆ ಮೀಟ್ ಆಗುವ ಎಂದು ಹೇಳುತ್ತಾಳೆ.ನೀವು ಅದಕ್ಕೆ ಓಕೆ ಎಂದು ಹೇಳಿ,ಅವಳು ಹೇಳಿದಂತೆಯೇ ಅಲ್ಲಿಗೆ  ಹೋಗ್ತೀರಿ ಕೂಡ.ಆದರೆ ಅಲ್ಲಿ ನಿಮ್ಮ ಗರ್ಲ್ ಫ್ರೆಂಡ್ ಅದಾಗಲೇ ಬೇರೆ ಯಾರೋ ಒಬ್ಬ ಹುಡುಗನೊಂದಿಗೆ ನಗು ನಗುತ್ತಾ ಮಸಾಲೆ ದೋಸೆ ತಿನ್ತಾ ಇರ್ತಾಳೆ.ನೀವು ಆಶ್ಚರ್ಯದಿಂದ ಮರೆಯಲ್ಲಿ ನಿಂತು ಅವನು ಯಾರೆಂದು ನೋಡುತ್ತೀರಿ.ಆದರೆ ಆ ಅವನು ಬೇರೆ ಯಾರು ಆಗಿರದೇ..ಸ್ವತಃ ನೀವೇ ಆಗಿರುತ್ತೀರಿ..!! 



ಇನ್ನೊಂದು ದೃಶ್ಯ ಕಲ್ಪಿಸಿಕೊಳ್ಳಿ. ಒಂದು ದಿನ ನೀವು ಕಾಲೇಜ್ ಬಿಟ್ಟು ಅಲ್ಲಲ್ಲಿ ಅಡ್ಡಾಡಿ, ತಿರುಗಾಡಿ ಲೇಟ್ ಆಗಿ ಮನೆಗೆ ಬರುತ್ತೀರಿ...ಆದರೆ ಮನೆಗೆ ಬಂದು ಮನೆಯ ಬಾಗಿಲಲ್ಲಿ ನಿಂತುಕೊಂಡು ನೋಡುವಾಗ.. ನೀವು ಅದಾಗಲೇ ಮನೆಯಲ್ಲಿ ಅಮ್ಮ ಅಪ್ಪನೊಂದಿಗೆ ಕುಳಿತುಕೊಂಡು Jolly ಆಗಿ ಟಿವಿ ನೋಡುತ್ತಾ,ಐಸ್‌ಕ್ರೀಂ ತಿನ್ನುತ್ತಾ ಇರುತ್ತೀರಿ....ಹೌದು ಡೌಟೇ ಬೇಡ ಅದು ನೀವೇ!! 


ಬೇಕಾದರೆ ಈ ರೀತಿಯೂ ಒಮ್ಮೆ ಕಲ್ಪಿಸಿಕೊಳ್ಳಿ.. ನಿಮಗೆ ಮದುವೆ ಆಗಿರುತ್ತದೆ.ಮುದ್ದಾದ ಒಂದು ಮಗು ಕೂಡ ಇರುತ್ತದೆ.ಆ ದಿನ ನಿಮ್ಮ ಹೆಂಡತಿಯ ಬರ್ತಡೆಯ  ದಿನ.ನಿಮ್ಮ ಶ್ರೀಮತಿಗೊಂದು ದುಬಾರಿ ಬೆಲೆಯ ಸೀರೆ ಖರೀದಿಸಿ ಮನೆಗೆ ಕಾರಿನಲ್ಲಿ ಹೋಗುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಆದರೆ ಮನೆಗೆ ಹೋಗುವಾಗ ದಾರಿಯಲ್ಲಿ... ನಿಮ್ಮ ಹೆಂಡತಿ,ಅದಾಗಲೇ ಹೊಸ ಸೀರೆ ಉಟ್ಟುಕೊಂಡು,ನಿಮ್ಮ ಪುಟ್ಟ ಮಗನನ್ನು ಕೂಡ ಹಿಡಿದುಕೊಂಡು ಅದು ಯಾರೊ ಬೇರೆಯವನ ಬೈಕಿನಲ್ಲಿ ಕುಳಿತುಕೊಂಡು ಖುಷಿ ಖುಷಿಯಲ್ಲಿ  ಹೋಗುತ್ತಿರುತ್ತಾಳೆ.ಬೈಕ್ ಬಿಡುತ್ತಿದ್ದವನು ಯಾರು ಎಂದು ಸರಿಯಾಗಿ ನೋಡಿದರೆ, ಅದು ಬೇರೆ ಯಾರೂ ಆಗಿರದೇ.. ನೀವೇ ಆಗಿರುತ್ತೀರಿ...! 


ಕಥೆ ತುಂಬಾ Interesting ಅಂತ ಅನಿಸುತ್ತೆ ಅಲ್ವಾ..!


ಈ ತರಹದ ಒಂದು ಕಥೆ ನಮ್ಮ ನಿಮ್ಮ ಲೈಫ್ ನಲ್ಲಿಯೂ ನಡೆದು ಬಿಟ್ಟರೆ..?


ಮೇಲಿನ ಹೇಳಿದ ಯಾವ ಕಥೆಯೂ ಈ ಕಾದಂಬರಿಯಲ್ಲಿ ಇಲ್ಲ... ಆದರೆ ಬೇರೆ ಏನೋ ಒಂದು ಇದೆ.ಈ ಮೂರು ಕಥೆಗಳಿಗೆ ತುಂಬಾನೇ ಹತ್ತಿರವಾದದ್ದು,Yes.. Very Interesting ಅಂತ ಅನ್ನಿಸುವಂತಹದ್ದು. ಅದನ್ನು ತಿಳಿಯಲು ನೀವು ಈ ಕಾದಂಬರಿಯನ್ನೇ ಓದಬೇಕು. ಕಥೆ ಹೇಳಲಾರೆ.


ಲೇಖಕರಾದ Prashanth Bhat  ಅವರು ಬರೆದ ಈ ಕಾದಂಬರಿ ನಿಮ್ಮನ್ನು ಬೇರೆಯೇ ಒಂದು ಲೋಕಕ್ಕೆ ಕರೆದುಕೊಂಡು ಹೋಗುವುದರಲ್ಲಿ ಯಾವುದೇ ಸಂಶಯವೇ ಇಲ್ಲ.


ಯಾವುದೋ ಒಂದು ಫೇಮಸ್ ತಿಂಡಿ ಬಗ್ಗೆ ನಾವು ತುಂಬಾ ಕೇಳಿರ್ತೀವಿ. ಆದರೆ ಯಾವತ್ತೂ ತಿಂದಿರಲ್ಲ.ಒಂದು ದಿನ ತಿಂತೀವಿ.ಆದರೆ ಅದು ಒಂದು ಚೂರೂ  ಚೆನ್ನಾಗಿರದಿದ್ದರೆ.. ಮತ್ತೆ ಅಂತಹ ತಿಂಡಿ ತಿನ್ನಲು ನಮಗೆ ಪಕ್ಕನೇ ಮನಸ್ಸಾಗುವುದಿಲ್ಲ.ಅದರ ಬದಲಾಗಿ ಆ ತಿಂಡಿಯ ಸ್ವಾದ ನಮಗೆ ತುಂಬಾನೇ ಹಿಡಿಸಿ ಬಿಟ್ಟರೆ ನಮಗೆ ಅಂತಹದ್ದು ಮತ್ತಷ್ಟು ತಿನ್ನಬೇಕು ಎಂದೇ ಅನ್ನಿಸುತ್ತದೆ.ಮೊದಲ ಬಾರಿಗೆ  ತಿನ್ನುವಾಗ ಅದನ್ನು ಚೆನ್ನಾಗಿ ಮಾಡಿ  ಕೊಡುವವನ  ಪಾತ್ರವೂ ಕೂಡ ಇದರಲ್ಲಿ ದೊಡ್ಡದಿದೆ.ರುಚಿ ಹತ್ತಿದ ನಂತರ ಅದನ್ನು ಹುಡುಕಿ ಹುಡುಕಿ ತಿನ್ನುವ ಮನಸ್ಸು ಮಾಡುವವರೇ ನಾವೆಲ್ಲ.ಇದೂ ಕೂಡ ಅಂತಹದ್ದೇ ಪುಸ್ತಕ.ಅಚ್ಚುಕಟ್ಟಾಗಿ ರುಚಿಕಟ್ಟಾಗಿ ಮಾಡಿ ಬಡಿಸಿದ್ದಾರೆ ನಮ್ಮ ಪ್ರಶಾಂತ್ ಭಟ್ರು.


ಕಾಲಬಂಧ.. ಇದು ಒಂದು ಸೈನ್ಸ್ ಫಿಕ್ಷನ್ ಕಾದಂಬರಿ. ಇಂತಹ ಕಥೆಗಳುಳ್ಳ ಕಾದಂಬರಿ ಕನ್ನಡದಲ್ಲಿ ಅತೀ ವಿರಳ.ನಾನಂತು ಓದಿಯೇ ಇಲ್ಲ.ಇಂಗ್ಲಿಷ್ ನಲ್ಲಿ Science Fiction ಮೂವಿ ಆದರೂ ಬೇಕಾದಷ್ಟು ನೋಡಿದ್ದೇನೆ..ಆದರೆ ಕನ್ನಡದಲ್ಲಿ ಇಂತಹ ಕಾದಂಬರಿ ಓದುತ್ತಿರುವುದು ಇದೇ ಮೊದಲು.ಮೇಲಿನ ತಿಂಡಿಯ ಉಪಮೇಯ ಹೇಳಿದ್ದು ಅದಕ್ಕೆಯೇ ನಾನು.ಮೊದಲ ಬಾರಿ ರುಚಿ ನೋಡಿದೆ, ಚೆನ್ನಾಗಿತ್ತು..ಇಂತಹದ್ದು ಇನ್ನಷ್ಟು ಓದಬೇಕು.



ನೀವೂ ಓದಿ.. ಕ್ಷಣ ಕ್ಷಣವೂ ಗುಟ್ಟು ಬಿಟ್ಟು ಕೊಡದ ಈ ಕಥೆ ತುಂಬಾ ಚೆನ್ನಾಗಿದೆ.. ಅಷ್ಟೇ ರೋಚವಾಗಿದೆ😊


#ಕಾಲಬಂಧ - ರೋಚಕ ಸೈನ್ಸ್ ಫಿಕ್ಷನ್ ಕಾದಂಬರಿ 

ಲೇಖಕರು - #ಪ್ರಶಾಂತ್_ಭಟ್ 


Book_Reveiw 

Ab pacchu

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ