ಮತ್ತೆ ಹಬ್ಬ ಬಂದಿದೆ ಮಹಾದೇವನದ್ದು..

 

ನಮ್ಮಲ್ಲಿ ನಂಬಿಕೆಯೇ ದೇವರು. 


ನಾವು ದೇವರನ್ನು ನಂಬುತ್ತೇವೆ.ಹಾಗಾಗಿ ಅಗತ್ಯವೆನಿಸುವ ಸಮಯದಲ್ಲಿ,ಅವಶ್ಯಕತೆ ಬಿದ್ದ ಸಂಧರ್ಭದಲ್ಲಿ.. ಮೆಡಿಕಲ್ ಸ್ಟೋರ್ ಗಳಲ್ಲಿ ಸಿಗದ ತುಂಬಾ ಬೇಕೆನಿಸುವ ಶಾಂತಿ ನೆಮ್ಮದಿ ನಮಗೆ ಆವಾಗವಾಗ ಅಷ್ಟಿಷ್ಟು ಅಲ್ಲಲ್ಲಿ ಸಿಕ್ಕಿದೆ.



ಆಸ್ತಿಕರಾಗುವುದರಿಂದ ಒಂದು ಲಾಭ ಏನು ಗೊತ್ತಾ... ಸಂಭ್ರಮ, ತಯಾರಿ, ಸಿದ್ಧತೆ.. ಮನಸ್ಸಿಗೆ ಒಂದಷ್ಟು ಹರುಷ ಎಂದಿಗೂ ಕಮ್ಮಿಯಾಗುವುದಿಲ್ಲ.ಅದರಲ್ಲೂ ಹಬ್ಬಗಳು ಬಂದಾಗ ಇವೆಲ್ಲವೂ ತೀವ್ರವಾಗುವ ಪರ್ವ ಕಾಲವದು. ಹೌದು ನಾವು ದೇವರ ಹೆಸರು ಹೇಳಿಕೊಂಡು ನಿರಾಳ ಆಗುತ್ತೇವೆ..ನಮ್ಮೆಲ್ಲಾ ಭಾರ ಒಂದಷ್ಟು ಹೊತ್ತು ಅವನಿಗೆ ವರ್ಗಾಯಿಸಿ ಹಗುರ ಆಗುತ್ತೇವೆ.ಮನಸ್ಸಿಗೆ ಅಷ್ಟೋ ಇಷ್ಟೋ ಒಂದಷ್ಟು ಸಮಾಧಾನ ಹೇಳಲು ಕಲಿತಿದ್ದೇವೆ.ಎಲ್ಲಕ್ಕಿಂತ ಹೆಚ್ಚಾಗಿ ದೇವರನ್ನು ಕೂಡ ಮಗುವಂತೆ ಅಲಕಂರಿಸಿ ಅವನ ಚಂದ ನೋಡಿ  ಸಂಭ್ರಮಿಸಿದ್ದೇವೆ.


ವಿತಂಡ ವಾದದ ಪ್ರಶ್ನೆಗಳನ್ನು ಕೇಳುತ್ತಾ.. ನಾನು ದೇವರನ್ನು ನಂಬುವುದಿಲ್ಲ..ದೇವರು ಎಂಬುದು ಇಲ್ಲ, ಅದು ಬರೀ ಕಲ್ಪನೆ, ಮೋಸ,ಅದು ಸರಿ ಇಲ್ಲ.. ಇದು ಸರಿ ಇಲ್ಲ.. ಎಲ್ಲವೂ ಮೂಡನಂಬಿಕೆ, ಅದು ವಿಜ್ಞಾನದ ಚೌಕಟ್ಟಿನಲ್ಲಿ ಬರುವುದಿಲ್ಲ,ಇಲ್ಲಿ ಈ ಥಿಯರಂ ಅಪ್ಲೈ ಆಗುವುದಿಲ್ಲ.. ಎಂದು ಬೊಬ್ಬೆ ಹೊಡೆಯುವವರ ಬಳಿ ವಾದ ಮಾಡಿ ಎಂದಿಗೂ ನೀವು  ನಿಮ್ಮ  ಮನಸ್ಸಿನ ಕ್ಷೋಭೆ ಹೆಚ್ಚಿಸಿಕೊಳ್ಳಬೇಡಿ....ಎಲ್ಲಾದರೂ ಮನಸ್ಸಿನ  ಸಮಾಧಾನಕ್ಕೆ ನಮಗೊಂದು  ಸುಲಭ ದಾರಿ  ಇದ್ದರೆ,ನಾವು ಅದರತ್ತ ಚಲಿಸುವುದರಿಂದ ತಪ್ಪೇನು ಇಲ್ಲ ಎನ್ನುವುದು ನನ್ನ ಅಭಿಪ್ರಾಯ ಅಷ್ಟೇ.ಅದರೊಟ್ಟಿಗೆ ಒಂದಷ್ಟು ಸಂತೃಪ್ತಿ ಸಿಗುವುದಾದರೆ ದೇವರನ್ನು ನಂಬುವುದರಿಂದ ನಾವು ಕಳೆದುಕೊಳ್ಳುವಂತಹದ್ದು ಏನೂ ಇಲ್ಲ.ಹೌದು ಈ ಕಾರಣಕ್ಕಾಗಿ ದೇವರನ್ನು ಅನುದಿವೂ ಪ್ರತೀಕ್ಷಣವೂ  ನಂಬಬಹುದು. 


ನಿಜ ಅತೀ ಬುದ್ದಿವಂತರು ದೇವರನ್ನು ನಂಬುವುದಿಲ್ಲ.ಅದೂ ಕೂಡ ತಪ್ಪಲ್ಲ. ಅವರಿಗೆ ವಿಜ್ಞಾನವೇ ದೇವರು..ಕಣ್ಣಿಗೆ ಕಾಣುವ ಸತ್ಯ, ದತ್ತಾಂಶಗಳೇ ದೇವರು.ಅವರಿಗೆ ಅದರಲ್ಲಿಯೇ ಸುಖ ಇದೆ.ನಾವು ಅವರವರ ಸುಖವನ್ನು ಅವರಿಗೇ ಬಿಟ್ಟು ಬಿಡಬೇಕು. ನಮ್ಮ ಸುಖದ ದಾರಿಯಲ್ಲಿ ನಾವು ನಡೆಯಬೇಕು ಅಷ್ಟೇ.ಎಲ್ಲರೂ ನಮ್ಮನ್ನೇ ಒಪ್ಪಿ ನಡೆಯಬೇಕಾಗಿಲ್ಲ.. ನೆನಪಿಡಿ ಯಾರ ನಂಬಿಕೆಯನ್ನೂ ಪ್ರಶ್ನಿಸಲು ನಮಗೆ ಇಲ್ಲಿ ಹಕ್ಕಿಲ್ಲ..ಅದೇ ರೀತಿ ನಮ್ಮ ನಂಬಿಕೆಗಳನ್ನು ಪ್ರಶ್ನಿಸಲು,ಲೇವಡಿ ಮಾಡಲು ಸಹ  ಇತರರಿಗೂ ಕೂಡ ಅಂತಹ ಹಕ್ಕೇನು ಇಲ್ಲ ಇಲ್ಲಿ.ಅವರವರ ಖುಷಿಗೆ ಹಲವು ದಾರಿ.ದೇವರನ್ನು ನಂಬುವ ಆಸ್ತಿಕರೂ ಕೂಡ ನೆಮ್ಮದಿಯಲ್ಲಿಯೇ ಇದ್ದಾರೆ.. ನಂಬದವರೂ ಕೂಡ ಅತೀ ಸಂತೋಷವಾಗಿಯೇ ಇದ್ದಾರೆ..


ದೇವರನ್ನು ನಂಬುವವರಿಗೆ ಈಗ ಮತ್ತೆ ಹಬ್ಬ ಬಂದಿದೆ..


ಆಸ್ತಿಕರಿಗೆ ದಿನವೂ ಹಬ್ಬವೇ ಬಿಡಿ. 


ಈ ಬಾರಿ ದೇವರ ದೇವ ಮಹಾದೇವನದ್ದು. 


ಎಂದಿಗಿಂತ ಅಧಿಕವಾಗಿ ಭಜಿಸಲು..ಸ್ತುತಿಸಲು.. ಸಂಭ್ರಮಿಸಲು ನಮಗೇ ಮತ್ತೊಂದು ಕಾರಣ. 


ಶಿವ ಸೌಮ್ಯ.. ಅಷ್ಟೇ ರೌದ್ರ.


ಅವರವರ ಭಾವಕ್ಕೆ.. ಅವರವರ ಭಕುತಿಗೆ ಶಿವ ಮಹಾದೇವನೂ ಹೌದು.. ಮಹಾರುದ್ರನೂ.. ಮಹಾಕಾಲನೂ ಹೌದು. 


ಅವನನ್ನು ನೆನೆಯೊಣ... ಕೃತಾರ್ಥರಾಗೋಣ. 😌🙏🏻



ಹರ ಹರ ಮಹಾದೇವ್... 🚩


ಎಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು 😊🙏


#ಪರಶಿವ 🚩

ab pacchu

moodubidire 

Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ