Freedom @ Midnight
ಮದುವೆಯಾದ ನಂತರ ಗಂಡ ಆದವನು ತನ್ನ ಪತ್ನಿ ಸಾಮಾಜಿಕವಾಗಿ,ಕೌಟುಂಬಿಕವಾಗಿ ಹೀಗೆಯೇ ಜೀವನ ಸಾಗಿಸಬೇಕು ಎಂದು ಬಯಸುತ್ತಾನೆ.
ಮತ್ತು ಅಂತಹದ್ದೊಂದು Imaginary ಚೌಕಟ್ಟನ್ನು ಅವಳ ಸುತ್ತಲೂ ಅವನೇ ಸದಾ ಹಾಕಿಕೊಂಡಿರುತ್ತಾನೆ.ಅದುವೇ ನೈತಿಕ ಸಂಬಂಧ.
ಕಣ್ಣಿಗೆ ಕಾಣುವ ಬೇಲಿ ಏನೋ ಅಲ್ಲಿ ಇರುವುದಿಲ್ಲ. ಆದರೂ ಅಂತಹದ್ದೊಂದು ಇದೆ ಎಂದುಕೊಂಡು ಪತ್ನಿ ಆದವಳು ಅದನ್ನು ಕ್ಷಣ ಮಾತ್ರಕ್ಕೂ ದಾಟದೇ ತನ್ನೊಂದಿಗೆ ಜೀವನ ಸಾಗಿಸಬೇಕೆಂದು ಅವನು ಜೀವನ ಪೂರ್ತಿ ಬಯಸುತ್ತಾನೆ.
ಅನೈತಿಕತೆಯ ಕಬಂದ ಬಾಹುಗಳಿಗೆ ಸಿಲುಕಿ ತಮ್ಮ ನಡುವಿನ ಪವಿತ್ರ ಸಂಬಂಧವೊಂದು ಗಾಳಿ-ಮಳೆಯ ಜೋರಾದ ಹೊಡೆತಕ್ಕೆ ನಲುಗಿ ಹೋಗುವ ಹೂವಿನಂತಾಗುವುದು ಅವನಿಗೆ ಎಂದಿಗೂ ಇಷ್ಟವಾಗದು.
ಒಂದು ವೇಳೆ ಅದನ್ನೇನಾದರೂ ಪತ್ನಿಯಾದವಳು ಮೀರಿದರೆ, ಮೀರಿದ್ದು ಅವನಿಗೆ ಗೊತ್ತಾದರೆ.. ಅವನು ಆ ಕ್ಷಣ ವಿಲವಿಲ ಒದ್ದಾಡುವ ನೀರಿನಿಂದ ಮೇಲೆ ತೆಗೆದ ಮೀನು..!
ಒಳ್ಳೆಯ ಗಂಡ ಆದವನು ಈ ರೀತಿ ಚಡಪಡಿಸಿದರೆ ಅದು ಸಹಜ ಮತ್ತು ಅಷ್ಟೇ ಸ್ವಾಭಾವಿಕ.ಆದರೆ ಕಥೆಯೇ ಉಲ್ಟಾಪಲ್ಟ ಆಗಿದ್ದರೆ..!
ಅಂದರೆ ಗಂಡ ತಾನೇ ಬೇಲಿ ಹಾರುವ ಗಿರಾಕಿ ಆಗಿದ್ದರೂ ಸಹ.. ಮನೆಯಲ್ಲಿ ತನ್ನ ಪತ್ನಿ ಮಾತ್ರ ಎಂದಿಗೂ ನೈತಿಕತೆಯ ಚೌಕಟ್ಟಿನಲ್ಲಿಯೇ ಬದುಕ ಬೇಕು ಎಂದು ಅಪೇಕ್ಷೆ ಪಡುವವನಾಗಿದ್ದರೆ.... ಕಥೆ ಸ್ವಲ್ಪ ಅಲ್ಲ, ತುಂಬಾನೇ Complicate ಆಗಿರುತ್ತದೆ ಅಲ್ವಾ?
ಇದರ ಕಥೆಯೂ ಅಂತಹದ್ದೇ ಆಗಿದೆ.
ಅವಳು ಚಂದ್ರ.ಚಂದ್ರನಂತೆಯೇ ಸಹಜ ಸುಂದರಿ. ಅವಳ ಗಂಡ ದಾಸ್. ಆದರೆ ಅವನ ಹೆಂಡತಿಗೂ ಗೊತ್ತಾಗದಂತೆ Virtually ಅವನು ಇನ್ನು ಯಾರಿಗೋ ದಾಸ. ಬಿಸಿ ಬಿಸಿ ಶ್ಯಾವಿಗೆ ಉಪ್ಪಿಟ್ಟು ಒಂದು ಒಲೆಯಲ್ಲಿ ಒಗ್ಗರಣೆಯ ಮೇಲೆ ಹದವಾಗಿ ಬೇಯುತ್ತಿರುವಾಗ, ಗಂಡು ಹೆಣ್ಣಿನ "Freedom" ಗಳ ಬಗ್ಗೆ ಗಂಡ ಹೆಂಡತಿಯರ ನಡುವೆ ನಡೆಯುವ ವಿರಸದ ಸಂಭಾಷಣೆಯೇ ಈ #Freedom_at_Midnight ನ ಕಥೆ.
ಕೆಂಪು ರವಿಕೆ ಮತ್ತು ಅರಶಿಣದ ಸೀರೆಯಲ್ಲಿ Anupama Parameshwaran ಮುದ್ದಾಗಿಯೇ ಕಾಣುತ್ತಾರೆ. ಕ್ಷಣ ಕ್ಷಣಕ್ಕೂ ವಿಚಲಿತಗೊಳ್ಳುವ ಗಂಡನಾಗಿ Hakkim Shah ಇದ್ದಾನೆ ಮತ್ತು ಇಡೀ Short film ಅಲ್ಲಿ ಬರೀ ಅವರಿಬ್ಬರೇ ಇರುವುದು.
29 ನಿಮಿಷಗಳ ಈ ಮಲಯಾಳಂ ಶಾರ್ಟ್ ಮೂವಿಯನ್ನು Rj Shaan ನಿರ್ದೇಶಿಸಿದ್ದಾರೆ.ಹೆಚ್ಚಿನ ಎಲ್ಲಾ ಭಾಷೆಗಳಲ್ಲೂ ಡಬ್ ಆಗಿರುವ ಇದು ಕನ್ನಡದಲ್ಲೂ ಕೂಡ ಇದೆ. ಇನ್ನೂ ನೋಡಿರದಿದ್ದರೆ ನೋಡಿ,ನಿಮಗೂ ಇಷ್ಟ ಆಗಬಹುದು.ಎಲ್ಲಕ್ಕಿಂತ ಹೆಚ್ಚಾಗಿ ಗಂಡು ಹೆಣ್ಣಿನ ನೈತಿಕತೆಯ ಮತ್ತು ಪರಸ್ಪರ ಸ್ವಾತಂತ್ರ್ಯದ ಬಗ್ಗೆ ಒಂದೊಳ್ಳೆಯ ಮೆಸೇಜ್ ಇದರಲ್ಲಿ ಇದೆ.ಅಂದ ಹಾಗೆ ಈ Short film YouTube ನಲ್ಲಿ ಉಂಟು.
#ನಿಮಗೂ_ಇಷ್ಟ_ಆಗಬಹುದು..
Ab Pacchu
Comments
Post a Comment