Gutrogooooo(ಗುಟ್ರ್ ಗೂ..)
" ವೇಶ್ಯೆಯ ಬಳಿ ಹೋಗುವವ ತಾನು ಅವಳಲ್ಲಿಗೆ ಏತಕ್ಕಾಗಿ ಹೋಗಿದ್ದೆ ಎನ್ನುವುದಕ್ಕೆ ಏನೇ ಕಾರಣ ಕೊಟ್ಟರೂ...ಅದು ಕಾರಣವಾಗುವುದಿಲ್ಲ, ಕೇವಲ ಸಮರ್ಥನೆ ಆಗಿರುತ್ತದೆ ಅಷ್ಟೇ.ನಿಜ ಕಾರಣ ಯಾವತ್ತಿಗೂ ಅದೇ ಆಗಿರುತ್ತದೆ..! "
ಹೀಗೆ ನಿಧಾನವಾಗಿ ಒಂದು ಕಿಡಿ ಹೊತ್ತಿಸುವ ಸಾಲಿನೊಂದಿಗೆ ಆರಂಭವಾಗುವ ಈ ಕಥೆಯೊಳಗಿನ ಕಥೆಯೊಂದರ ಸಂಭಾಷಣೆಯಲ್ಲಿ ಮತ್ತಷ್ಟು ಬೇಕೆನಿಸುವ ನಶೆ ಲೆಕ್ಕಕ್ಕಿಂತ ಅಧಿಕವಾಗಿಯೇ ಇದೆ. ಪ್ರೋಪೆಸರ್ ಮತ್ತು ವೇಶ್ಯೆಯ ನಡುವಿನ ನವಿರಾದ ಸಂಭಾಷಣೆಯ ಈ ಕಥೆ ಕೇವಲ 14.57 ನಿಮಿಷದ್ದು ಅಷ್ಟೇ. ಹೌದು ಇದು ಮೂವಿಯಲ್ಲ. ಕನ್ನಡ ಶಾರ್ಟ್ ಮೂವಿಯಿದು.
ಅದ್ಭುತ ಲಹರಿಯಲ್ಲಿ ಮಾತಾಡುವ Sridhar K.S ಮಾತುಗಳನ್ನು ಇಲ್ಲಿ ಕೇಳುತ್ತಲೇ ಇದ್ದರೆ ಅದೆನೋ ತಿಳಿಯದ ಕಿಕ್ ಕೊಡುವ ಮಜಾ.Ganavi Laxman ಅವರ ಕಪ್ಪು ಕಣ್ರೆಪ್ಪೆಯ ಅಗಲದ ಕಣ್ಣುಗಳು ಯಾವಾಗ ನೋಡಿದರೂ ಚಂದವೇ.ಇಲ್ಲಿ ಅವರ ಹೆಸರು ಕೂಡ "ನಯನ" ಎಂದೇ ಇದೆ.
ಇಲ್ಲಿ ಇವರಿಬ್ಬರು ಪರಸ್ಪರ ಮಾತಾಡುತ್ತಾರೆ.ಹೌದು ವೇಶ್ಯೆಯ ಕೋಣೆಯಲ್ಲಿ.ಇವರು ಪ್ರಶ್ನೆ ಕೇಳುತ್ತಾರೆ, ಅವಳು ಕಣ್ಣರಳಿಸಿಯೇ ನಗುತ್ತಾಳೆ.ಕೆಲವೊಮ್ಮೆ ನಗುತ್ತಾ,ಇನ್ನು ಕೆಲವೊಮ್ಮೆ ನಗು ನಿಲ್ಲಿಸಿ ಉತ್ತರಿಸುತ್ತಾಳೆ.ಅವಳ ಮಾತಿನಲ್ಲಿಯೇ ನಶೆ ಇದ್ದರೂ ಎಣ್ಣೆ ಬಾಟಲಿಯನ್ನು ಕೈಯಲ್ಲಿ ಹಿಡಿದುಕೊಂಡು ನಶೆಯನ್ನು ಮತ್ತಷ್ಟು ತೀವ್ರವಾಗಿಸುತ್ತಾಳೆ.ಕೋಣೆಯ ಮೂಲೆಯಲ್ಲಿರುವ ಗ್ರಾಮಫೋನ್ ತಟ್ಟೆ ಅದರಷ್ಟಕ್ಕೆ ತಗ್ಗಿದ ಸ್ವರದಲ್ಲಿ BGM ನಂತೆ ಹಾಡುತ್ತಾ ಇವರಿಬ್ಬರ ಸಂಭಾಷಣೆಯನ್ನು ಕೇಳುಗರಿಗೆ ಇಷ್ಟವಾಗುವಂತೆ ನಿಧಾನಕ್ಕೆ ಟ್ಯೂನ್ ಮಾಡುತ್ತಾ ಹೋಗುತ್ತದೆ.ಆದರೂ ಮುಖ್ಯ ಕಥೆ ಇವರಿಬ್ಬರದಲ್ಲ...!
ಇದನ್ನು Kishan Badarinath ನಿರ್ದೇಶಿಸಿದ್ದಾರೆ. ನನಗೆ ಸಂಭಾಷಣೆಗಳೇ ಮಾತಾಡುವ ಕಥೆಗಳು ಎಂದಿಗೂ ತುಂಬಾನೇ ಇಷ್ಟ. ಹಾಗಾಗಿ ಚಿಕ್ಕದಿದ್ದರೂ ಇದು ಇಷ್ಟವಾಯಿತು.
ನೋಡಿ ನಿಮಗೂ ಇಷ್ಟ ಆಗಬಹುದು..#Gutrugooooo(ಗುಟ್ರ್ ಗೂoooo). ಅಂದ ಹಾಗೆ ಇದು Youtube ನಲ್ಲಿ ಇದೆ..
#ನಿಮಗೂ_ಇಷ್ಟ_ಆಗಬಹುದು..
Ab Pacchu
Moodubidire
Comments
Post a Comment