WTC ಯ ಬಲು ರೋಚಕ ಹಾದಿಯಲ್ಲಿ ಎಡವದೇ ನಡೆದವರು..
3 -1 ರಿಂದ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಗೆದ್ದದ್ದು ಮಾತ್ರವಲ್ಲದೇ,WTC ಯ ಫೈನಲ್ ಗೂ ಕೂಡ ಅಧಿಕಾರಯುತವಾಗಿ ಹಾಗೂ ಅಷ್ಟೇ ರೋಯಲ್ ಆಗಿ ಲಗ್ಗೆ ಹಾಕಿದೆ ನಮ್ಮ ನೆಚ್ಚಿನ ಟೀಮ್ ಇಂಡಿಯಾ.
WTC ಫೈನಲ್ ವರೆಗಿನ ಭಾರತ ತಂಡದ ಹಾದಿ.. ನಿಜವಾಗಿಯೂ ಬಲು ರೋಚಕ.ನಾವು ಸೋತದ್ದು ಕಡಿಮೆ,ಒಂದರ ಮೇಲೆ ಒಂದರಂತೆ ಬರೀ ಗೆಲುವುಗಳನ್ನೇ ಲೆಕ್ಕ ಹಾಕುತ್ತಾ ಮುನ್ನಡೆದವರು ನಮ್ಮ ತಂಡದವರು.ಒಂದೆರಡು ಸೋಲು ಉತ್ಸಾಹವನ್ನು ಬತ್ತಿಸಲಿಲ್ಲ,ಹೆದರಿಕೆ ಎನ್ನುವುದು ನಮ್ಮವರ ಹೊಟ್ಟೆಯ ಯಾವ ಮೂಲೆಯಲ್ಲೂ ಹುಟ್ಟಿಕೊಳ್ಳಲಿಲ್ಲ. ಬದಲಿಗೆ ನಮ್ಮವರೇ ಎದುರಾಳಿಯನ್ನು ಹೆದರಿಸಿದರು, ಬೆದರಿಸಿದರು... ವಿದೇಶಿ ಪಿಚ್ ಗಳಲ್ಲೂ ಅಲ್ಲಿಯವರೇ ಭಯ ಬೀಳುವಂತೆ ನಮ್ಮ ತಂಡದವರು ಆಡಿದರು.ಆಡಿ ಹೋರಾಡಿ ಗೆದ್ದವರು.ಪಾಯಿಂಟ್ ಟೇಬಲ್ ನಲ್ಲಿ ಅಂತು ಅದರ ತುತ್ತ ತುದಿಯಲ್ಲಿ ಬಹುಕಾಲ ರಾರಾಜಸಿದ್ದು ನಾವೇ.
ಡ್ರಾ ಮಾಡಿಕೊಳ್ಳುವುದಕ್ಕಾಗಿ ಈ ತಂಡ ಟೆಸ್ಟ್ ಆಡಲೇ ಇಲ್ಲ. ಇದ್ದದ್ದು ಬರೀ ಗೆಲುವಿನ ಹಪಾಹಪಿ.ಹೋದಲ್ಲಿ ಬಂದಲ್ಲಿ ಬಾರಿಸಿದ್ದು ವಿಜಯದ ರಣ ಕೇಕೆ ಒಂದೇ.ಕೊಹ್ಲಿ ಎಂಬ ಈ ತಂಡದ ಬಿಸಿ ರಕ್ತದ ನಾಯಕ,ಈ ದಶಕದ ಪ್ಲೇಯಿಂಗ್ ಲೆಜೆಂಡ್, ಈ ತಂಡದ ಎಲ್ಲಾ ಡೈನಾಮಿಕ್ಸ್ ಗಳನ್ನು ಶುರುವಲ್ಲಿಯೇ ಬದಲಾಯಿಸಿ ಬಿಟ್ಟ.ಗೆಲುವು...ಗೆಲುವು...ಗೆಲುವು..ಜೊತೆಗೆ Aggressive ಕ್ರಿಕೆಟ್ ಅದೊಂದೇ ಅವನ ಮಂತ್ರವಾಗಿತ್ತು.ಅವನೂ ಆಡಿದ, ಬೇರೆಯವರೂ ಆಡುವಂತೆ ಮಾಡಿದ. ಆಟದ ಮೈದಾನದಲ್ಲಿ ತೋಳೆರಿಸಿ ಜಗಳಕ್ಕೆ ಬಂದವರ ಬಾಯಿ ಮುಚ್ಚಿಸಿ ಕಳುಹಿಸಿ ಬಿಟ್ಟ. ಆಟದಲ್ಲೂ ಹಿಂದೆ ಉಳಿಯಲಿಲ್ಲ,Sledging ಗೂ ಕೂಡ ನಮ್ಮ ಬಲಿ ಬೀಳಲಿಲ್ಲ.ಎಷ್ಟೋ ನಮ್ಮ ಕೂಲ್ ಹೆಡ್ಡೆಡ್ ಹಿರಿಯ ಆಟಗಾರರಿಗೆಯೇ ಈ ಕೊಹ್ಲಿಯ ವರ್ತನೆ ಅಷ್ಟಾಗಿ ಹಿಡಿಸಲಿಲ್ಲ.ಆದರೆ ಕೊಹ್ಲಿ ಅದು ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ.ಅವನು ನೀಡಿದ ಫಲಿತಾಂಶವೇ ಎಲ್ಲರ ಬಾಯಿ ಮುಚ್ಚಿಸಿತ್ತು.
ಕೋವಿಡ್ ನಂತರ WTC ಯ ಸ್ವರೂಪವೇ ಬದಲಾಯಿತು.ಹೊಸ ನಿಯಮಗಳು ಬಂದವು.ಅಷ್ಟೊಂದು ಜಯದ ಮೇಲೆ ಜಯ ಗಳಿಸಿ,ಮೂಟೆ ಕಟ್ಟಿದ್ದ ಪಾಯಿಂಟ್ ಗಳು ನಮ್ಮ ತಂಡದ ಫೈನಲ್ ಹಾದಿಯ ಕೈ ಹಿಡಿಯಲಿಲ್ಲ.ಟೇಬಲ್ ಟಾಫರ್ ಆಗಿದ್ದ ತಂಡಕ್ಕೆಯೇ ಫೈನಲ್ ಗೆ ಹೋಗುವ ಸಾಧ್ಯ ಅತ್ಯಂತ ಕಠಿಣವಾಗಿ ಬಿಟ್ಟಿತು.ಉಳಿದ ತಂಡಗಳು ತಮ್ಮ ಆಟ ಮುಗಿಸಿ ಭಾರತದ ತಂಡ ಈಗ ಏನು ಮಾಡುತ್ತೆ.. ಎಂದು ಕಾಫಿ ಹೀರುತ್ತಾ ನಮ್ಮವರ ಆಟ ಒಂದು ಸೈಡಿನಿಂದ ಗಮನಿಸಲು ಶುರು ಮಾಡಿದಾಗ ನಮ್ಮ ತಂಡ ಹೆಚ್ಚು ಕಡಿಮೆ ಹುಚ್ಚು ಹಿಡಿದಂತೆಯೇ ಆಟವಾಡಬೇಕಿತ್ತು.. ಕೊನೆಗೂ ನಮ್ಮವರು ಅದನ್ನೇ ಮಾಡಿ ಹೊಸ ನಿಯಮದ ಅಡಿಯಲ್ಲಿಯೇ ಜಯಭೇರಿಸಿ ಭಾರಿಸಿ ಬಿಟ್ಟರು.
ಮೊದಲಿನಿಂದಲೂ ತಂಡದ ಎಲ್ಲಾ ಆಟಗಾರರು ಬರೀ ಗೆಲುವಿಗಾಗಿಯೇ ಹೋರಾಟ ನಡೆಸಿದ್ದರು,ಸಮರ್ಥ ಆಟಗಾರರು ಇಲ್ಲದೇ ಹೋದಾಗಲೂ ಎದ್ದು ಬಿದ್ದು ಜಿದ್ದಿನಲ್ಲಿ ಹೋರಾಡಿದ ಯುವ ಪಡೆಯ ಕೆಚ್ಚೆದೆಯ ಕಥೆಯೊಂದು ನಮ್ಮ ತಂಡಕ್ಕಿತ್ತು.ಎಷ್ಟೋ ದಾಖಲೆಗಳು ಮುರಿಯಲ್ಪಟ್ಟವು,ಹೊಸ ದಾಖಲೆಗಳು ನಮ್ಮವರಿಂದ ಬರೆಯಲ್ಪಟ್ಟವು. ಎಂದಿನಂತೆ ಒಂದಷ್ಟು ಕಾಂಟ್ರವರ್ಸಿ,ಗ್ರೌಂಡಿನಲ್ಲಿ ಬ್ಯಾಟ್ ಬಾಲ್ ಮತಾಡದೇ ಇದ್ದಾಗ ಎದುರಾಳಿ ಆಟಗಾರರೊಂದಿಗೆ ಮಾತಿನ ಚಕಮಕಿ,ಗ್ರೌಂಡಿನ ಹೊರಗಡೆ ನಮ್ಮ ಹಾಗೂ ಬೇರೆ ತಂಡದ ನಿವೃತ್ತ ಹಿರಿಯ ಆಟಗಾರರ ಉಡಾಫೆ,ವ್ಯಂಗ್ಯ,ಬೆಂಕಿ ಮಾತುಗಳು ಆಟದ ರಂಗನ್ನು ಮತ್ತಷ್ಟು ಕಳೆಯೇರಿಸಿತ್ತು..
ಸೋಲನ್ನು.. ಭಯವನ್ನು ಹಿಮ್ಮೆಟ್ಟಿಸಿದ ತಂಡ ಈಗ ಮತ್ತೆ WTC ಯ ಟೇಬಲ್ ಟಾಫರ್.ಸದ್ಯಕ್ಕೆ ಪರಿಸ್ಥಿತಿ ಎಲ್ಲಿಗೆ ಬಂದಿದೆ.. ಗೆದ್ದರೆ ಭಾರತದ ವಿರುಧ್ಧವೇ ಗೆಲ್ಲಬೇಕು.. ಇಲ್ಲದಿದ್ದರೆ ಅದೆಂತಹ ಗೆಲುವು ಎಂದು ಬೇರೆ ದೇಶದ ಖ್ಯಾತ ನಾಮ ಕ್ರಿಕೆಟಿಗರು ಹೇಳುವಷ್ಟರ ಮಟ್ಟಿಗೆ ಭಾರತದ ಹುಡುಗರು ಕ್ರಿಕೆಟ್ ನಲ್ಲಿ ಹವಾ ಇಟ್ಟಿದ್ದಾರೆ..ದೂಳೆಬ್ಬಿಸಿದ್ದಾರೆ.
ಖುಷಿ ಆಗುತ್ತೆ.. ಏಕೆಂದರೆ ಒಂದು ಸಮಯದಲ್ಲಿ ನಮ್ಮ ತಂಡ ಯಾವಾಗ ಆಸ್ಟ್ರೇಲಿಯಾದಂತೆ ಆಡುವುದು ಎಂದು ಕನವರಸಿದವರು ನಾವು ನೀವೆಲ್ಲಾ.ಈಗ ಅಂತಹ ಮಾತುಗಳನ್ನು ವಿಶ್ವದ ಬೇರೆ ತಂಡಗಳ ಅಭಿಮಾನಿಗಳು ಹೇಳುತ್ತಾರೆ.
ಯಾವ ಫಾರ್ಮೆಟ್ ಕ್ರಿಕೆಟ್ ಗೆದ್ದರೇನು ಬಂತು... ಗೆದ್ದರೆ ಟೆಸ್ಟ್ ಕ್ರಿಕೆಟ್ ಗೆಲ್ಲಬೇಕು. ರಾಜ ಮಹಾರಾಜ ಆಗುವುದಾದರೆ ಅದರಲ್ಲೇ ಆಗಬೇಕು. ಏಕೆಂದರೆ Test Cricket ಅಂದರೆ ಅದು Real Cricket. ಅದಕ್ಕೊಂದು ಸುದೀರ್ಘ ಇತಿಹಾಸ ಇದೆ.. ಎಲ್ಲಾ ಆಟಗಾರರಿಂದಲೂ ಅಪಾರ ಗೌರವವಿದೆ.ಆಡಿದರೂ.. ಆಳಿದರೂ.. ಅದು Test ಕ್ರಿಕೆಟೇ ಆಗಿದ್ದರೆ ಅದರ ಮಜಾನೇ ಬೇರೆ.
ಇನ್ನೊಂದೇ ಮೆಟ್ಟಿಲು ಇದೆ. ಅದುವೇ First Ever WTC Title. ಹೌದು ಅದನ್ನೂ ನಮ್ಮವರೇ ಗೆಲ್ಲಬೇಕು.ಇತಿಹಾಸದ ಪುಟಗಳಲ್ಲಿ ಈ ತಂಡದ ಹೆಸರೊಂದು ಅಚ್ಚಳಿಯದೇ ಉಳಿಯಬೇಕು.ಅದಕ್ಕೆ ನಾವೆಲ್ಲರೂ ಸಾಕ್ಷಿ ಆಗಬೇಕು,ಕಾರಣ WTC ಎಂದರೆ ಟೆಸ್ಟ್ ನ ವಿಶ್ವಕಪ್ 😊
ಸದ್ಯಕ್ಕೆ.. ಅಭಿನಂದನೆಗಳು ಟೀಮ್ ಇಂಡಿಯಾ..🇮🇳 😊💙❤️
Ind Vs Eng
4th TEST
Day - 3
Ahmedabad
#Cricket_Review
ab pacchu
moodubidire





Comments
Post a Comment