A(Ad Infinitum)
ಅದೊಂದು ರಾತ್ರಿ ಜೋರಾದ ಮಳೆ.
ದಟ್ಟ ಕಾಡಿನ ಮಧ್ಯೆ ಒಂದು Ambulance ಅದರಷ್ಟಕ್ಕೆ ವೇಗವಾಗಿ ಹೋಗ್ತಾ ಇರ್ತದೆ.
ಆಗ ಅಲ್ಲೊಬ್ಬ ಆ ಕಾಡಿನ ರೋಡ್ ಪಕ್ಕವೇ ತೀವ್ರವಾಗಿ ಗಾಯಗೊಂಡು ಬಿದ್ದಿರ್ತಾನೆ!
ನೋವಿನಿಂದ ಜೋರಾಗಿ ನರಳಾಡುತ್ತಾ ಇರ್ತಾನೆ.
Ambulance ನವರ ಕಣ್ಣಿಗೆ ಅವನು ಬೀಳ್ತಾನೆ.
Ambulance ನವರು ಅವನನ್ನು ಅವರ Ambulance ನಲ್ಲಿ ಹಾಕಿಕೊಂಡು ತುರ್ತಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾರೆ.
ಅವನು ಸಾಯಲ್ಲ.
ಹೇಗೋ ಬದುಕಿ ಬಿಡ್ತಾನೆ.
ಆದರೆ ಅವನಿಗೆ ಹಿಂದಿನ ಯಾವುದೂ ನೆನಪಿನಲ್ಲಿ ಇರುವುದೇ ಇಲ್ಲ..!
ಯೆಸ್... ಮೆಮೊರಿ ಲಾಸ್ ಕೇಸ್.
ಈಗ ಅವನಿಗೆ ಅವನು ಯಾರೆಂದೇ ಗೊತ್ತಿಲ್ಲ!!
ಅವನು ಅಮಾಯಕ!!!
ಆಸ್ಪತ್ರೆಯ ನರ್ಸ್ ಗೆ ಅವನ ಮೇಲೆ ಲವ್ ಆಗ್ತದೆ.
ಅವಳೇ ಅವನಿಗೊಂದು ಹೆಸರು ಇಡ್ತಾಳೆ.
ಆ ಹೆಸರೇ ಸಂಜೀವ್.
ಅವಳು ಅವನನ್ನೇ ಮದುವೆ ಕೂಡ ಆಗ್ತಾಳೆ
ಮುದ್ದಾದ ಒಂದು ಮಗು ಕೂಡ ಹುಟ್ಟುತ್ತದೆ.
ಹೆಣ್ಣು ಮಗು!
ಅದೇ ಸಮಯದಲ್ಲಿ ಆ ನಗರದಲ್ಲಿ ಒಂದು ವಿಚಿತ್ರ ಕೇಸ್ ಪೋಲಿಸರ ತಲೆ ತಿನ್ನಲು ಶುರು ಮಾಡ್ತದೆ.
ಅದೇ ರಾತ್ರಿ ಹೊತ್ತಿನಲ್ಲಿ ಫುಟ್‌ಪಾತ್ ನಲ್ಲಿ ಮಲಗಿರುವ ಅನಾಥ ಮಕ್ಕಳ ಕಿಡ್ನಾಪ್!
ಒಂದಲ್ಲ ಎರಡಲ್ಲ..
ಹತ್ತಿಪ್ಪತ್ತು ಮಕ್ಕಳು...!!
ನಿರಂತರವಾಗಿ ಮಕ್ಕಳು ನಗರದಲ್ಲಿ ಕಿಡ್ನಾಪ್ ಆಗಿ ಹೋಗ್ತಾನೆ ಇರ್ತಾರೆ..!
ಕಿಡ್ನಾಪರ್ ಭೀತಿ ಹುಟ್ಟಿಸಿ ತನ್ನ ಕಾರ್ಯ ಮುಂದುವರಿಸುತ್ತಲೇ ಇರುತ್ತಾನೆ!!
ಆದರೆ ಒಂದೇ ಒಂದು ಸಾಕ್ಷಿ ಇಲ್ಲ..!
ಕೊನೆಗೂ ಕಿಡ್ನಾಪರ್ ಮಗು ಒಂದನ್ನು ಕಿಡ್ನಾಪ್ ಮಾಡುತ್ತಿರುವ CCTV ವೀಡಿಯೊ ಪೂಟೇಜ್ ಪೋಲಿಸರಿಗೆ ಸಿಕ್ಕಿ ಬಿಡುತ್ತದೆ..!
ಅದರಲ್ಲಿದ್ದ ಕಿಡ್ನಾಪರ್ ಮುಖ ಕೂಡ ತಕ್ಕ ಮಟ್ಟಿಗೆ ಪೋಲಿಸರು ಗುರುತು ಹಿಡಿತಾರೆ..
ಆದರೆ ಅದರಲ್ಲಿರುವ ಕಿಡ್ನಾಪರ್ ಮುಖ ಯಾರ ಮುಖದೊಂದಿಗೂ ಕೂಡ ಹೋಲಿಕೆ ಆಗುವುದೇ ಇಲ್ಲ!
ತನಿಖೆ ಮುಂದುವರಿಯುತ್ತದೆ.
ಒಂದು ದಿನ CCTV ಯ ಪೂಟೇಜ್ ನಲ್ಲಿರುವ ಮುಖಕ್ಕೆ ಒಬ್ಬನ ಮುಖ ಹೆಚ್ಚು ಕಡಿಮೆ Perfect ಆಗಿ ಮ್ಯಾಚ್ ಆಗುತ್ತದೆ!
ಅದು ಅವನೇ...
ನೆನಪು ಶಕ್ತಿ ಕಳೆದುಕೊಂಡಿರುವ ಸಂಜೀವ್!!
ಪೋಲಿಸರು ಅವನನ್ನು ಎತ್ತಿಕೊಂಡು ಹೋಗಿ ಏರೋಪ್ಲೇನ್ ಹತ್ತಿಸುತ್ತಾರೆ.
ಅವನು ನಾನಲ್ಲ ಎಂದು ಹೇಳ್ತಾನೆ.
ಇದರ ನಡುವೆ ಸಂಜೀವನ ಮಗಳೇ ಕಿಡ್ನಾಪ್ ಆಗಿ ಹೋಗ್ತಾಳೆ!!
ಹಾಗಾದರೆ ಕಥೆಯಲ್ಲಿ ಬೇರೆ ಯಾರೋ ಇದ್ದಾರಾ..?
ಅಥವಾ ಸಂಜೀವನೇ ಇತರ ಮಕ್ಕಳನ್ನು ಕಿಡ್ನಾಪ್ ಮಾಡಿ ಕೊನೆಗೆ ತನ್ನ ಮಗಳನ್ನು ಕೂಡ ಬೇಕೆಂದೇ ಕಿಡ್ನಾಪ್ ಮಾಡಿರುತ್ತಾನಾ..?
ಅವನು ನಿಜವಾಗಿಯೂ ನೆನಪಿನ ಶಕ್ತಿ ಕಳೆದುಕೊಂಡಿರುತ್ತಾನಾ..?
ಅಥವಾ ಇದೆಲ್ಲಾ ಅವನ ನಾಟಕವಾ..?
ನಿಜ ಹೇಳಬೇಕೆಂದರೆ ಇದು ಮೂವಿಯ ಮುಖ್ಯ ಕಥೆಯೇ ಅಲ್ಲ..
ಕಥೆ ಬೇರೆಯೇ ಇದೆ!
ಕಿಡ್ನಾಪ್ ಆದ ಮಕ್ಕಳು ಮುಂದೆ ಏನಾಗುತ್ತಾರೆ?
ಏತಕ್ಕಾಗಿ ಅಷ್ಟೊಂದು ಮಕ್ಕಳ ಕಿಡ್ನಾಪ್ ಆಗುತ್ತದೆ?
ಆ ಕಥೆ ಹೇಳಲಾರೆ..
ಅದಕ್ಕಾಗಿ ನೀವು ಮೂವಿಯನ್ನೇ ನೋಡಬೇಕು.
ಮೊದಲ ಸೀನ್ ನಿಂದ ಕೊನೆಯ ಸೀನ್ ವರೆಗೆ ಕಥೆಯ ಮೇಲೆ ಬಿಗಿಯಾದ ಹಿಡಿತ ಹೊಂದಿರುವ ಇದು ಖಂಡಿತವಾಗಿಯೂ ನಿಮಗೆ ಒಂಚೂರು ನಿರಾಸೆ ಮಾಡದೆ.. ಸಿಕ್ಕಾಪಟ್ಟೆ ಥ್ರಿಲ್ ನೀಡುತ್ತದೆ.
Ugandhar Muni ಈ ಮೂವಿಯನ್ನು ನಿರ್ದೇಶನ ಮಾಡಿದ್ದಾರೆ. Nithin Prasanna ಮತ್ತು Preethi Asrani ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
2021 ರ ಮಾರ್ಚ್ ನಲ್ಲಿ ಬಂದಿರುವ ಈ ತೆಲುಗು Thriller ಮೂವಿ #A( Ad Infinitum) Prime ನಲ್ಲಿದೆ.ಥ್ರಿಲ್ಲರ್ ಮೂವಿಗಳನ್ನು ಇಷ್ಟ ಪಡುವವರಿಗೆ ಇದೂ ಕೂಡ ಅಷ್ಟೇ ಇಷ್ಟವಾಗಬಹುದು.ರಾತ್ರಿಯಲ್ಲಿಯೇ ನೋಡಲು ಇಷ್ಟಪಡುವಿರಾದರೆ ಆ ಥ್ರಿಲ್ ಇನ್ನೂ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ!
Movie_Review
ab
Comments
Post a Comment