Athiran!

 


#Athiran! 


ಅವನೊಬ್ಬ Psychiatrist.


Inspection ಗೆ ಎಂದು Inspection Letter ಹಿಡಿದುಕೊಂಡು ಕಾಡಿನ ನಡುವೆ ಇರುವ ಆ ಮಾನಸಿಕ ರೋಗಿಗಳಿರುವ ಆಸ್ಪತ್ರೆಗೆ ಅವನು ಹೋಗ್ತಾನೆ.


ಒಬ್ಬನೇ ಹೋಗ್ತಾನೆ!


ರೋಗಿಗಳನ್ನು ಸರಿಯಾಗಿ ಅಲ್ಲಿ ನೋಡಿಕೊಳ್ಳುತ್ತಿದ್ದಾರಾ ..ಡಾಕ್ಟರ್ ಸರಿಯಾದ ಚಿಕಿತ್ಸೆಯನ್ನೇ ರೋಗಿಗಳಿಗೆ ಕೊಡುತ್ತಿದ್ದಾನಾ.. ಅಥವಾ ಅಲ್ಲಿ ರಹಸ್ಯವಾಗಿ ಬೇರೆ ಏನಾದರೂ ನಡೆಯುತ್ತಿದೆಯಾ.. ಎಂಬುದು ಅವನ ಸಂದೇಹ! 


5 +1.. ಒಟ್ಟು 6 ಜನ ಮಾನಸಿಕ ರೋಗಿಗಳು ಅಲ್ಲಿರುತ್ತಾರೆ.


ಅರಮನೆ + ಭೂತ ಬಂಗಲೆಯಂತಿರುವ ಆ ರಾಯಲ್ ಆಸ್ಪತ್ರೆಯಲ್ಲಿ ಡಾಕ್ಟರ್,ನರ್ಸ್, ಕೆಲಸದವರು ಎಲ್ಲರೂ ಇದ್ದಾರೆ 


ಮೇಲ್ನೋಟಕ್ಕೆ ಎಲ್ಲವೂ ಸರಿ ಇರುವ ಅಲ್ಲಿ..


ಏನೋ ಒಂದು ಸರಿ ಇಲ್ಲ!


ಆ ಸರಿ ಇರದ ಒಂದೇ ಈ ಮೂವಿಯ ಪ್ರಧಾನ ಕಥೆ.


ಕಥೆ ಕುತೂಹಲಗಳನ್ನು ಹುಟ್ಟಿಸುತ್ತಾ,ಸಂದೇಹಗಳನ್ನು ಬೆಳೆಸುತ್ತಾ,ಆರೋಪಿ ಸ್ಥಾನದಲ್ಲಿ ಒಬ್ಬನನ್ನೇ ಕೂರಿಸುತ್ತಾ...Psychiatrist ನ ಒಂದೊಂದೇ ಸಂಶಯಗಳನ್ನು ನಿವಾರಿಸುತ್ತಲೇ ಕೊನೆಯವರೆಗೂ ಸಾಗುತ್ತದೆ.


ನೋಡುಗನ ದೌಟುಗಳು ಕೂಡ ಕ್ಲೀಯರ್ ಆಗಿರುತ್ತದೆ. 


ಆದರೆ ಕೊನೆಯ ಆ ಐದು ನಿಮಿಷ.. 


ಮೊದಲಿನಿಂದ ತೋರಿಸಿದ ಕಥೆಯೇ ಸಂಪೂರ್ಣ ಉಲ್ಟಾಪಲ್ಟ ಆಗಿರುತ್ತದೆ..!


Martin Scorsese ನಿರ್ದೇಶನದ  DiCaprio ಅಭಿನಯದ Shutter island ಮೂವಿಯ ತರವೇ  ಇರುವ ಈ ಮೂವಿ  Shutter Island ಗಿಂತ ಒಂದಷ್ಟು ಭಿನ್ನವಾಗಿದೆ.Shutter Island ಮೂವಿಯನ್ನು ನೀವು ಈ ಮೊದಲು ನೋಡಿರದಿದ್ದರೆ ಖಂಡಿತವಾಗಿಯೂ ನಿಮಗೆ Athiran ನಿಸ್ಸಂಶಯವಾಗಿ ದಂಗು ಬಡಿಸಿ ಬಿಡುತ್ತದೆ.


Shutter Island ಮೂವಿಯನ್ನು ನೋಡಿದ್ದರೂ ಸಹ ಈ ಮೂವಿ ಮಾತ್ರ ಒಂಚೂರು ನಿರಾಸೆ ಮಾಡದು ಕಾರಣ.ಇಲ್ಲಿ ಅಭಿನಯಿಸಿದ್ದು Fahadh Faasil ಎಂಬ ಹುಚ್ಚು ಹಿಡಿಸುವ ದೈತ್ಯ ನಟ.ಅಷ್ಟು ಮಾತ್ರವಲ್ಲ ಇಲ್ಲಿ ಅವನನ್ನೂ ಮೀರಿಸಿದಂತೆ ಮೌನವನ್ನೇ ಮಾತನ್ನಾಗಿಸಿ,ಕಳರಿಯನ್ನೇ (A Martial Art form) ನೃತ್ಯವನ್ನಾಗಿಸಿ ಅಭಿನಯಿಸಿದ Sai Pallavi ಯದ್ದು ಸಹ ಅತ್ಯಧ್ಭುತ ನಟನೆ.ಇಷ್ಟ ಆಗುವ ನಟ Atul Kulkarni ಯ ನಟನೆ ಇಲ್ಲೂ ಅಷ್ಟೇ ಇಷ್ಟವಾಗುತ್ತದೆ.ಚಿತ್ರ ತಂಡ ಈ ಮೂವಿಯನ್ನು 2014 ರಲ್ಲಿ ಬಿಡುಗಡೆಯಾದ Stoneshearst Asylum ನಿಂದ ಸ್ಪೂರ್ತಿ ಪಡೆದು ನಾವು ಈ ಮೂವಿ ಮಾಡಿದ್ದಾಗಿ ಎಂದು ಹೇಳುತ್ತದೆ. 


#Athiran 2019 ರಲ್ಲಿ ತೆರೆಕಂಡ ಮಲಯಾಳಂ ಮೂವಿ. 

Vivek ಇದನ್ನು ನಿರ್ದೇಶಿಸಿದ್ದಾರೆ.ಸದ್ಯಕ್ಕೆ ನೋಡಬೇಕು ಎಂದು ಅನಿಸಿದರೆ ಇದು Hotstar ನಲ್ಲಿ ಇದೆ.ಇನ್ನೂ ಇದನ್ನು ನೋಡಿರದಿದ್ದರೆ ಇದು ಯಾವ ಮೂವಿಯ ರಿಮೇಕ್,ಸ್ಪೂರ್ತಿ ಎಂಬುದನ್ನೆಲ್ಲಾ ಜಾಸ್ತಿ ತಲೆಗೆ ಹಾಕಿಕೊಳ್ಳದೇ ಹಾಗೇ ನೋಡಿ ಬಿಟ್ಟರೆ ಈ Psychological Thriller ಖಂಡಿತವಾಗಿಯೂ ಕಿಕ್ಕೇರಿಸುವುದರಲ್ಲಿ ಸಂಶಯವೇ ಇಲ್ಲ!


ಕಾರಣ..


ಅವರಿಬ್ಬರ ಹುಚ್ಚು ಹಿಡಿಸುವ,ಹುಚ್ಚು ಬಿಡಿಸುವ ನಟನೆಯೇ ಆ ರೀತಿ ಇದೆ ಕಣ್ರೀ!!!


ಜಿದ್ದಿಗೆ ಬಿದ್ದು ನಟಿಸುವುದು ಎಂದರೆ ಬಹುಶಃ ಇದೇ ಇರಬೇಕು!


Paviza Mazha ಹಾಡು ಮತ್ತೆ ಮತ್ತೆ ಕೇಳಲು ಕಿವಿಗೆ ತಂಪೆನಿಸುತ್ತದೆ.


#Movies

ab

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..