ಬಾಲ್ಯದ ಗಡ್ಡ
ಗಾಳಿಯಲ್ಲಿ ಹಾರಿಯೇ ಹಿಡಿಯಬೇಕು..ಆದರೆ ಒಮ್ಮೆಗೆ ಕೈಗೆ ಸಿಕ್ಕಿ ಬೀಳಬಾರದು.ಒಮ್ಮೆ ಕೈ ಸೋಕಿ ಮತ್ತೆ ಕೈ ತಪ್ಪಿ ಮೇಲಕ್ಕೆ ಅದರಷ್ಟಕ್ಕೆ ಗಾಳಿ ಬಂದತ್ತ ಹಾರುತ್ತ ತಿರುಗುತ್ತಾ ಹೋಗಬೇಕು.. ನಾವು ಮತ್ತೆ ಜಿದ್ದಿಗೆ ಬಿದ್ದು ಅದರ ಹಿಂದೆ ಹಠ ಹಿಡಿದು ಓಡಬೇಕು..ಬಾನೆತ್ತೆರಕ್ಕೆ ಹಾರಿ ಬಿಟ್ಟರೆ ಅದು ಮತ್ತೆ ಕೈಗೆ ಬರದ ಗಗನ ಕುಸುಮ.. ಅಲ್ಲೋ ಎಲ್ಲೋ ಮರದ ಗೆಲ್ಲಿಗೆ ಸಿಕ್ಕಿ ಕೊಂಡರೆ ಓಡಿ ದಣಿದ ಕಾಲುಗಳಿಗೆ ಕ್ಷಣ ಮಾತ್ರದ ವಿರಾಮ.. ಮತ್ತೆ ಹಿಡಿಯಲು ಮತ್ತೊಮ್ಮೆ ನೆಲದಿಂದ ಮೇಲಕ್ಕೆ ಜಿಗಿಯಲೇ ಬೇಕು..ಜಿಗಿಯ ಬೇಕು.. ಜಿಗಿದು ಹಾರಿ ಒಂದೇ ಕೈಯಲ್ಲಿ ಹಿಡಿಯಬೇಕು.. ಹಿಡಿದು ಕಣ್ಣರಳಿಸಿ ನಗಬೇಕು.. ಆಗಲೇ ಅದು ಚಂದದ ಬಾಲ್ಯಕ್ಕೊಂದು ದಕ್ಕಿದ ಸುಕ್ಕಾಗದ ನೆನಪಿನ ಸರಕು....
#ಅಜ್ಜನ_ಗಡ್ಡ 🤍
ಬಾಲ್ಯದ_ನೆನಪು
ಹಿತವಾಗಿ ಹದವಾಗಿ
ab pacchu

Comments
Post a Comment