ಒಂದೇ ನೋಟ ಎರಡು ಗುರಿ!
ನಾನು ಅದೆಂತಹ ಶಾರ್ಪ್ ಶೂಟರ್ ಎಂದರೆ.. ಗುರಿ ಇಟ್ಟು ಜೋರಾಗಿ ಬೀಸಿದ ಜಲ್ಲಿ ಕಲ್ಲಿಗೆ ಎರಡು ಮಾವು ಹಾಗೇ ಕೆಳಗೆ ಉದುರಿ ಬಿಟ್ಟಿತು,ಒಂದು ಕಲ್ಲು ಮಾತ್ರ ಪಕ್ಕದ ಮನೆಯೊಂದರ ಮೇಲೆಯೇ ಬಿದ್ದು ಫಟ್ ಅಂತ ಜೋರಾದ ಶಬ್ಧ ಕೂಡ ಬಂತು.. ಬಹುಶಃ ಅವರ ಮನೆಯ ಹೆಂಚು ಒಡೆದು ಪೀಸ್ ಪೀಸ್ ಆಗಿರಬೇಕು. ಏಕೆಂದರೆ ಮನೆಯೊಳಗಿನಿಂದ "ಸೈತೆರ್ ಮಾರಿಲು(ದುಷ್ಟರು ಆಕ್ರಮಣ ಮಾಡಿದ್ದಾರೆ,ಹಿಡಿಯಿರಿ ಬಡಿಯಿರಿ).. " ಎಂಬ ಆಕ್ರೋಶದ ಬೊಬ್ಬೆ ಕೇಳಿ ಬರ್ತಾ ಉಂಟು.ನಾನು ಈಗ ವೇಗವಾಗಿ ಓಡಬೇಕು.. 🏃🏻♂️🏃🏻♂️
ದೇವರೇ.. ಅವರ ಮನೆಯ ಹೆಂಚು ಒಡೆಯದೇ ಇರಲಿ,ಇಲ್ಲದಿದ್ದರೆ ದೊಡ್ಡ Issue ಆಗ್ತದೆ.ಏಕೆಂದರೆ ಈ ಹಿಂದೆ ನಾನು ಆ ಮನೆಯದ್ದೇ ಹೆಂಚು ಒಡೆದು ಹಾಕಿದ ತುಂಬಾ ಕರಾಳ ಇತಿಹಾಸ ಬೇರೆ ಉಂಟು.ಮಾತ್ರವಲ್ಲ ಬೇರೆ ಯಾರೇ ಒಡೆದು ಹಾಕಿದ್ದರೂ ಸ ಅದು ನಾನೇ ಎಂಬ ಆರೋಪ ಕೂಡ ತುಂಬಾ ಸಲ ಎದುರಿಸಿದ್ದೇನೆ..
ಶೇ.. ಬೆಳಿಗ್ಗೆ ಬೆಳಿಗ್ಗೆಯೇ.... ಎಂತ ಅವಸ್ಥೆ ಮರ್ರೆ..
#ಮಾ_ಅಂದರೆ_ಮಾವು
ಎರಡನೆಯ ಅಳೆ
ಪಚ್ಚುಪಟಗಳು
ab
Comments
Post a Comment