ಸಕ್ಕರೆಯಂತಹ ಬಾಳೆ..

 

"ಸಕ್ಕರೆ ಬಾಳೆ" ಅಂತೆ.ಅಂಗಡಿಯಲ್ಲಿ ಮಾಡಿಗೆ ನೇತು ಹಾಕಿದ್ದರು.ಹೆಚ್ಚಿನ ಎಲ್ಲವೂ ಹಣ್ಣಾಗಿ ತುದಿ ಭಾಗದ ಸಿಪ್ಪೆ ಕೂಡ ಕಪ್ಪುಬಣ್ಣಕ್ಕೆ ತಿರುಗಿತ್ತು. ಮೇಲ್ನೋಟಕ್ಕೆ ನೋಡಲು ಬೊಂಞ ಬಾರೆ(ಬೂದಿ ಬಾಳೆ)ತರಹವೇ ಕಾಣುತ್ತಿತ್ತು.ಇದು ಬೊಂಞ ಬಾಳೆ  ಯಾ ಎಂದು ಕೇಳಿದ್ದಕ್ಕೆ ಅಲ್ಲ ಇದು ಸಕ್ಕರೆ ಬಾರೆ ಎಂದು ಅಂಗಡಿಯವರು ಹೇಳಿದರು.ಒಂದು ಹಣ್ಣಿಗೆ ಎರಡು ರೂಪಾಯಿಯನ್ನು  ಪಿಕ್ಸ್ ಮಾಡಿದ್ದರು. 


ಒಂದೆರಡು ಹಣ್ಣು ಅಲ್ಲಿಯೇ ಸಿಪ್ಪೆ ಸುಲಿದು ತಿಂದೆ.ಸಿಹಿಯಾಗಿಯೂ ಇತ್ತು,ಬಹಳ ರುಚಿಯಾಗಿಯೂ ಇತ್ತು.ಇದಕ್ಕಿಂತ ಹಿಂದೆ ಈ ಬಾಳೆಯನ್ನು ಎಲ್ಲೂ ತಿಂದಿರಲಿಲ್ಲ.ಮತ್ತೆ ಅಂಗಡಿಯವರಲ್ಲಿಯೇ ಕೇಳಿದೆ,ಎಲ್ಲಿಂದ ತಂದದ್ದು,ಇದು ಘಟ್ಟದ್ದಾ ಅಂತ.ಅಲ್ಲ ಅಂತೆ ಊರಿನಲ್ಲಿಯೇ ಕೆಲವರು ಬೆಳೀತಾರೆ ಅಂತ ಅಂಗಡಿಯವರು ಹೇಳಿದರು.ಇಷ್ಟು ರುಚಿಯ ಬಾಳೆಯನ್ನು ಇನ್ನಂತು ಹುಡುಕಿಕೊಂಡು ಹೋಗಿಯೇ ಆವಾಗವಾಗ ಸವಿಯುತ್ತಿರಬೇಕು..😋


#ಈ_ಜನುಮವೇ_ಆಹಾ_ದೊರಕಿದೆ_ರುಚಿ_ಸವಿಯಲು.. 

ab pacchu 

Comments

Popular posts from this blog

ಗಗನದ ಸೂರ್ಯ

The Priest.!

ನವಿಲು ಕೊಂದ ಹುಡುಗ | ಸಚಿನ್ ತೀರ್ಥಹಳ್ಳಿ