ಹೀರೋ ಹೀಗೂ ಇರಬಹುದು..!
ಒಂದು ಕೈಯಲ್ಲಿ ವಡೆ ಹಿಡಿದುಕೊಂಡು,ಅದನ್ನೇ ಸ್ವಲ್ಪ ಸ್ವಲ್ಪವೇ ಕಚ್ಚಿಕೊಂಡು ಹಾಗೇ ನಿಧಾನಕ್ಕೆ ನಡೆದು ಬರೋ ಬಿಳಿ ಗಡ್ಡದ ವಿಜಯ್ ಸೇತುಪತಿ ಎಂಬ Vikram Vedha ದ ಗ್ಯಾಂಗ್ ಸ್ಟರ್ ಅನ್ನು ಮೊದಲ ಬಾರಿಗೆ ಸ್ಕ್ರೀನ್ ನಲ್ಲಿ ನೋಡಿದ್ದಾಗ ನನಗೆ ಅನಿಸಿದ್ದು.....
ಇವ ಯಾರು ಮರ್ರೆ.. ಈ ಪಿಚ್ಚರ್ ಅಲ್ಲಿ ಅದೂ ಮಾಧವನ್ ಎಂಬ ನಟನ ಎದುರು ಇವ ಎಂತಹ ಗ್ಯಾಂಗ್ ಸ್ಟರ್? ಎಂದು.
ಯಾವುದೋ ಕ್ಯಾಟರಿಂಗ್ ನಲ್ಲಿ ತನ್ನ ಅಡುಗೆಯವರು ವಡೆಯನ್ನು ಚೆನ್ನಾಗಿ ಮಾಡಿದ್ದಾರೋ ಇಲ್ಲವೋ ಎಂದು ಚೆಕ್ ಮಾಡಲು ವಡೆ ಟೇಸ್ಟ್ ಮಾಡಿ ನೋಡುವ ಓನರ್ ತರಹ ಇದ್ದಾನೆ.. ಇವ ಎಲ್ಲಾ ಮೂವಿಯಲ್ಲಿ ಹೇಗೆ ಗ್ಯಾಂಗ್ ಸ್ಟರ್..? ಎಂದು ಅನ್ನಿಸಿದ್ದು ಸುಳ್ಳಲ್ಲ!
ಏಕೆಂದರೆ ಅದಕ್ಕೂ ಮೊದಲು ನಾನು ಅವನ ಮೂವಿಯನ್ನೇ ನೋಡಿರಲಿಲ್ಲ.
ಆದರೆ ಆ ನಂತರ ಮೂವಿಯ ಮುಂದಿನ ಭಾಗಗಳಲ್ಲಿ ನನಗೆ ಅದು ಯಾಕೋ ಅತಿಯಾಗಿ ಇಷ್ಟ ಆಗುವ ಮಾಧವನ್ ಕೂಡ ಈ ವಿಜಯ್ ಸೇತುಪತಿ ಎಂಬ ಅಧ್ಭುತ ನಟನ ಮುಂದೆ ತೀರಾ ಸಪ್ಪೆಯಾಗಿ ಬಿಟ್ಟ!
ಇಂದಿಗೂ ನನಗೆ ತಮಿಳಿನಲ್ಲಿ ವಿಜಯ್ ಸೇತುಪತಿ ಎಂದರೆ ಅದೇ ವಡೆ ಕಚ್ಚಿಕೊಂಡು ಬರುವ ಎಂಟ್ರಿ ಸೀನ್..ಸದ್ಯಕ್ಕೆ ಕನ್ನಡ ಸೇರಿದಂತೆ ಹೆಚ್ಚಿನ ಭಾಷೆಯ ಸೀರಿಯಲ್ ನ ಭಾಗವೇ ಆಗಿ ಹೋಗಿರುವ Vikam Vedha ದ ಆ ಒಂದು ಅತ್ಯಧ್ಭುತ BGM ಮೊದಲು ನೆನಪಾಗಿ ಬಿಡುತ್ತದೆ.
ನನಗೆ Vijay Sethupathi ಅಂದಿನಿಂದ ಅವನ ಸಿನಿಮಾ ಗಳ ಬಗ್ಗೆ ಆಸಕ್ತಿ ಹುಟ್ಟಿಸಿದ.
ಮುಂದೆ ನೋಡಿದ್ದು 96.
ಎಲ್ಲಿಯ Vikram Vedha ಎಲ್ಲಿಯ 96?
ಓನ್ ಸೈಡೆಡ್ ಲವರ್ ಗಳನ್ನು ಹೆಚ್ಚು ಕಡಿಮೆ ತನ್ನ ಸೌಮ್ಯ ನಟನೆಯಿಂದ ಕಮ್ಮಿ ಮಾತಿನಿಂದ ಅಳಿಸಿ ಬಿಟ್ಟಿದ್ದ ಈ ಸೇತುಪತಿ.ನಟನೊಬ್ಬ ಹೇಗೆ ಭಿನ್ನ ಭಿನ್ನ ಪಾತ್ರಗಳನ್ನು ಮಾಡಬೇಕು.. ಮಾಡಬಹುದು ಎಂದು ಬಹಳ ಚೆನ್ನಾಗಿ ಅರಿತಿದ್ದ ನಟ ಮತ್ತು ಅದನ್ನು ಸಮಯ ಸಮಯಕ್ಕೆ ಮಾಡಿ ತೋರಿಸುತ್ತಲೇ ಬಂದ ನಟ ಎಂದರೆ ಅದು ಇತನೇ..
Master ಮೂವಿ ಬಂದಾಗ ಕಾದು ಕುಳಿತು ಹೋಗಿ ನೋಡಿದ್ದೆ.ಆದರೆ "ಗಿಲ್ಲಿ" ಯ ವಿಜಯ್ ಗಾಗಿ ಅಲ್ಲ,ವಿಕ್ರಂ ವೇದದ ಅದೇ ರಗಡ್ ವಿಜಯ್ ಸೇತುಪತಿ ಗಾಗಿಯೇ ಬಹು ಆಸೆಯಿಂದ ಅದನ್ನು ನೋಡಿದ್ದೆ. ಹೀರೋಗಳಿಬ್ಬರು ಇರುವುದೇ ಬರೀ ಹೊಡೆದಾಡಲು ಎನ್ನುವಂತೆ ತೋರಿಸಿದ್ದ ಅದರ ಕಥೆ ನನಗೆ ಯಾಕೋ ಹಿಡಿಸಿಲಿಲ್ಲ. ಜಸ್ಟ್ ವಿಜಯ್ ಸೇತುಪತಿಯನ್ನು ನೋಡಿ ಅವನನ್ನಷ್ಟೇ ಕಣ್ತುಂಬಿಸಿಕೊಂಡು ಎದ್ದು ಬಂದಿದ್ದೆ.
ಇವೆಲ್ಲದರ ನಡುವೆ 2019 ರಲ್ಲಿ ಬಂದಂತಹ ಸೇತುಪತಿಯ ಮತ್ತೊಂದು ವಿಭಿನ್ನ ಅಭಿನಯದ ಮೂವಿ " Super Deluxe". ಯಾಕೋ ಗೊತ್ತಿಲ್ಲ,ಕಾರಣಾಂತರಗಳಿಂದ ಆವಾಗ ಅದನ್ನು ನೋಡಲೇ ಆಗಿರಲಿಲ್ಲ.ಅದನ್ನೊಮ್ಮೆ ನೋಡು ಸೇತುಪತಿ ನಟನೆ ನಿನಗೆ ಇಷ್ಟ ಆಗಬಹುದು ಎಂದು ಫ್ರೆಂಡ್ ಒಬ್ಬ ಹೇಳ್ತಾನೆ ಇದ್ದ.
ಆದರೆ ನಿನ್ನೆ ರಾತ್ರಿ ಪಟ್ಟು ಹಿಡಿದು ನೋಡಿದೆ.ಮಲಯಾಳಂ ನಲ್ಲಿ ಇಷ್ಟವಾಗುವ ಮತ್ತೊಬ್ಬ ದೈತ್ಯ ನಟ Fahadh Faasil ಕೂಡ ಇದ್ದಾನೆ. ಆದರೆ ಯಾಕೋ ಸೂಜಿಗಲ್ಲಿನಂತೆ ಸೆಳೆದಿದ್ದು ಸೇತುಪತಿಯೊಳಗಿನ "ಶಿಲ್ಪಾ" ವೇ ಜಾಸ್ತಿ.
ವಿಜಯ್ ಸೇತುಪತಿ ಕಣ್ಣುಗಳಲ್ಲಿ,ಹಾಗೂ ಅವನದ್ದೊಂದು ಧ್ವನಿಯಲ್ಲಿ ಎಂತಹ ಮ್ಯಾಜಿಕ್ ಇದೆ ಎಂದರೆ... ಅವನಾಗಲಿ Fahadh ಆಗಲಿ... ಇರುವುದೇ ಭಿನ್ನ ವಿಭಿನ್ನವಾಗಿ ನಟಿಸಿ ಬೆರಗು ಹುಟ್ಟಿಸಲು ಎಂದು ನನಗೆ ಅನ್ನಿಸಿ ಬಹಳ ಸಮಯವೇ ಆಗಿ ಹೋಗಿದೆ.
ಹೀರೋ ಹೀಗೆಯೇ ಇರಬೇಕು.. ಎನ್ನುವ ಥಿಯರಿಗಿಂತ,ಹೀಗೂ ಇರಬಹುದು ಎಂದು ತೋರಿಸುವ ನಟರು ನನಗಂತು ಎಂದಿಗೂ ಇಷ್ಟ.
ಚೂರಿಗಿಂತಲೂ ಮಾತಿನಲ್ಲಿ, ನೋಟದಲ್ಲಿ ಕೊಲ್ಲುವ ನಟನೆ ಅದಕ್ಕಿಂತಲೂ ಹೆಚ್ಚು ಇಷ್ಟ...
ಅಂತವರಲ್ಲಿ ಒಬ್ಬ.. ವಡೆ ಕಚ್ಚಿಕೊಂಡು ಬಂದು ಮೊದಲ ಬಾರಿಗೆ ನನ್ನ ಕಣ್ಣಿಗೆ ಬಿದ್ದ ಈ ವಿಜಯ್ ಸೇತುಪತಿ.
ಮುಂದೆ Allu Arjun ನ ಡ್ರಾಮ ಥ್ರಿಲ್ಲರ್ ನ " Pushpa" ದಲ್ಲೂ ಕೂಡ ಅಲ್ಲು ಅರ್ಜುನ್ ನೊಂದಿಗೆ.. Fahadh Faasil ಕೂಡ ಇದ್ದಾನೆ ಅದರೊಟ್ಟಿಗೆ Vijay Sethupathi ಕೂಡ ಇದ್ದಾನೆ.ನಾನು ವಿಜಯ್ ಸೇತುಪತಿಗಾಗಿಯೇ ಅದನ್ನು ನೋಡಬೇಕು..
Movie_Review
Ab

Comments
Post a Comment