Diamond Necklace
ಅವನು ವೃತ್ತಿಯಲ್ಲಿ ಡಾಕ್ಟರ್.
ಸಿಕ್ಕಾಪಟ್ಟೆ ಸಾಲಗಾರನಾಗಿರುವ ಆತ ಸ್ವಲ್ಪ ರಸಿಕನೂ ಕೂಡ ಹೌದು.
ದುಬೈ ಆಸ್ಪತ್ರೆಯೊಂದರಲ್ಲಿ Oncology ವಿಭಾಗದಲ್ಲಿ ಅವನಿಗೆ ಕೆಲಸ.
ಮೊದಲು ಆಸ್ಪತ್ರೆಯ ನರ್ಸ್ ಜೊತೆ ಅವನು ಪ್ರೇಮದ ಬಲೆಯಲ್ಲಿ ಬೀಳುತ್ತಾನೆ.
ನಂತರ ತನ್ನ ಪೇಷೆಂಟ್ ಜೊತೆ ಕೂಡ ಅವನು ಡ್ಯುಯೆಟ್ ಸಾಂಗ್ ಹಾಡುತ್ತಾನೆ.
ಊರಿಗೆ ಬಂದಾಗ ಮನೆಯವರ ಮಿತಿ ಮೀರಿದ ಒತ್ತಾಯ, ಮುಗಿಲು ಮುಟ್ಟಿದ ಆಕ್ರಂದನ, ಆಕ್ರೋಶಕ್ಕೆ ಮಣಿದು ಒಬ್ಬಳನ್ನು ಮದುವೆ ಕೂಡ ಆಗಿ ಮತ್ತೆ ದುಬೈಗೆ ಮರಳುತ್ತಾನೆ.
ಡಾಕ್ಟರ್ ಆದರೂ ಎಲ್ಲಾ ಬ್ಯಾಂಕುಗಳಲ್ಲಿ ಸಿಕ್ಕಾಪಟ್ಟೆ ಲೋನ್ ಇರುವ ಅವನಿಗೆ ಲೈಫ್ ಕಷ್ಟ ಆದಾಗ ತನ್ನ ಪೇಷೆಂಟ್ ನದ್ದೇ Diamond Necklace ಮೇಲೆ ಕಣ್ಣು ಬೀಳುತ್ತದೆ.ನಂತರ ಈ Necklace ಸುತ್ತವೇ ಈ ಚಿತ್ರದ ಕಥೆ ಸಾಗುತ್ತದೆ.
Romantic Drama ಆಗಿರುವ ಈ ಮೂವಿಯಲ್ಲಿ ಅಲ್ಲಲ್ಲಿ ಕಾಮಿಡಿ,ಒಂದೆರಡು ಚಂದದ ಹಾಡು ಕೂಡ ಇದೆ.2012 ರಲ್ಲಿ ಬಂದಂತಹ ಇದನ್ನು Lal Jose ನಿರ್ದೇಶಿಸಿದ್ದಾರೆ. Fahadh Faasil, Anusree, Samvrutha Sunil, Gauthami Nair ಮುಂತಾದವರ ಅಭಿನಯವಿದೆ. Nilamalare,Thotte Thotte ಡೌನ್‌ಲೋಡ್ ಮಾಡಿಕೊಂಡು ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡುಗಳು.ಈ ಮೂವಿ ನೋಡಲೇಬೇಕು ಎಂದು ಹೇಳಲಾರೆ,Fahadh ನ ಲೈಟ್ ಕಾಮಿಡಿ ಇಷ್ಟ ಪಡುವವರಿಗೆ ಇದೂ ಕೂಡ ಇಷ್ಟ ಆಗಬಹುದು.ಈ #Diamond_Necklace ಮೂವಿ MX Player ನಲ್ಲಿ ಇದೆ.
#Movies
ab
Comments
Post a Comment