Grandmaster

 

                                  #Grandmaster 

ತಾನೊಂದು ಕೊಲೆ ಮಾಡುತ್ತೇನೆ ಎಂದು ಮೊದಲೇ ಹೇಳಿ, ಹೇಳಿದ ದಿನ ಹೇಳಿದ ಜಾಗದಲ್ಲಿಯೇ ನಿಖರವಾಗಿ ಕೊಲೆ ಮಾಡುವ ಕೊಲೆಗಾರ ಯಾವತ್ತೂ ಸಸ್ಪೆನ್ಸ್ ಥ್ರಿಲ್ಲರ್ ಕಥೆಗೆ  ಸಿಕ್ಕಾಪಟ್ಟೆ ಥ್ರಿಲ್ ಕೊಟ್ಟು ಬಿಡುತ್ತಾನೆ! 


ಇದರ ಕಥೆ ಕೂಡ ಅಂತಹದ್ದೇ !! 


ಪೋಲಿಸರಿಗೆ ಕಾಗದದ ಮೇಲೆ ಕಾಗದ ಬರೆದು ಒಂದು ನಿರ್ದಿಷ್ಟ ಪ್ಯಾಟರ್ನ್ ನಲ್ಲಿ ಅಂದರೆ Alphabetical Order ನಲ್ಲಿ ಒಂದಾದ ನಂತರ ಒಂದು ಕೊಲೆ ಮಾಡುತ್ತಾ ಹೋಗುವುದು ಮಾತ್ರವಲ್ಲ.. ಮುಂದೆ ನಡೆಯಬಹುದಾದ ಕೊಲೆಯ ಬಗ್ಗೆ ಕೂಡ ಸುಳಿವು ನೀಡುತ್ತಾ ತೆರೆ ಮರೆಯಲ್ಲಿ ನಿಂತು ಚಳ್ಳೆಹಣ್ಣು ತಿನ್ನಿಸುವ ಕೊಲೆಗಾರ ಇಲ್ಲಿ ಕೇವಲ ಹೆಂಗಸರ ಕೊಲೆ ಮಾತ್ರ ಮಾಡ್ತಾನೆ!


ಆದರೆ ಪೋಲಿಸ್ ಅಧಿಕಾರಿ ಕೂಡ ತುಂಬಾನೇ ಬುದ್ಧಿವಂತ. 


ಚದುರಂಗ ಆಡಲು ಅತಿಯಾಗಿ ಇಷ್ಟ ಪಡುವ ಅವನು ಚದುರಂಗದ ಆಟದ ರೀತಿಯಲ್ಲಿಯೇ ಕೊಲೆಗಾರನಿಗಾಗಿ ಕೆಲವೊಂದು ತನಿಖೆಯ ನಡೆಗಳನ್ನು ತನ್ನ ಕಂಟ್ರೋಲ್ ನಲ್ಲಿ ಇರುವಂತೆಯೇ ನಡೆಸುತ್ತಾನೆ,ಬಲೆ ಬೀಸುತ್ತಾನೆ. 


ಕೊಲೆಗಾರ ಯಾರು? 


ಏತಕ್ಕಾಗಿ ಆ ರೀತಿಯ ಕೊಲೆಗಳು? 


ಪೋಲಿಸ್ ಅಧಿಕಾರಿ ನಡೆಸಿದ Gambit ನಿಜವಾಗಿಯೂ ಯಶಸ್ವಿಯಾಗುತ್ತಾ?


ಕೊನೆಗೆ ಈ ಆಟದಲ್ಲಿ ಚೆಕ್ ಮೇಟ್ ಆಗುವುದು ಯಾರು?!!


ಅದಕ್ಕಾಗಿ ನೀವು ಮೂವಿಯನ್ನೇ ನೋಡಬೇಕು. 


2012 ರಲ್ಲಿ ಬಂದಂತಹ ಈ Action Thriller ಮಲಯಾಳಂ ಮೂವಿ #Grandmaster ಅನ್ನು B.Unnikrishnan ನಿರ್ದೇಶನ ಮಾಡಿದ್ದಾರೆ.ಇದರ ಕಥೆ "The A.B.C Murders" ಎಂಬ ಪುಸ್ತಕ ಆಧಾರಿತವಾದದ್ದು.Mohanlal, Priyamani ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.ಈ ಮೂವಿ Netflix ಮತ್ತು MX Player ನಲ್ಲಿ ಇದೆ.


#Movies 

ab pacchu

moodubidire

(https://phalgunikadeyavanu.blogspot.com)

Comments

Popular posts from this blog

ಗಗನದ ಸೂರ್ಯ

ಬಿಡುಗಡೆ!

ಭಕ್ತಿಯ ಜೊತೆಗೆ ಭಯವೂ ಇರಲಿ..