Irul..!




ಅದೊಂದು ನಿಗೂಢ ಮನೆ.


ಮನೆಗಿಂತಲೂ ಆ ಮನೆಯಲ್ಲಿ ಇರುವವನೇ ಇನ್ನೂ ಅಧಿಕ ನಿಗೂಢ.ಅವನೇ ಉನ್ನಿ(Fahadh Faasil).


ಅವನೊಬ್ಬ ಲೇಖಕ(Soubin Shahir).ಐದು ಹೆಂಗಸರನ್ನು  ಕೊಂದಿರುವ ಒಬ್ಬ ಸೀರಿಯಲ್ ಕಿಲ್ಲರ್ ನ ನಿಜ ಕಥೆಗೆ ಒಂದಷ್ಟು ರೆಕ್ಕೆಪುಕ್ಕ ಕಟ್ಟಿ ಅವನೊಂದು ಕಾದಂಬರಿ ಬರೆದಿರುತ್ತಾನೆ. ಅದು ಸಿಕ್ಕಾಪಟ್ಟೆ ಫೇಮಸ್ ಕೂಡ ಆಗುತ್ತದೆ. 


ಒಂದು ರಾತ್ರಿ ರೋಡಿನಲ್ಲಿ ಕಾರು ಕೆಟ್ಟು ಹೋಗಿ ಅವನು ತನ್ನ ಗರ್ಲ್ ಫ್ರೆಂಡ್(Darshana Rajendran) ಜೊತೆಗೆ ಆ ನಿಗೂಡ ಮನೆಗೆ ಹೋಗ್ತಾನೆ!


ಹೇಳಿ ಕೇಳಿ Fahadh Faasil ಒಬ್ಬ ಸೈಕೋ ತರಹದ ನಟ. ಅಂತಹದ್ದೇ ಪಾತ್ರ ಅವನಿಗೆ ಸಿಕ್ಕಿ ಬಿಟ್ಟರೆ ಅದರ ಕಿಕ್ಕೇ ಬೇರೆ.... ಮತ್ತು ಇಲ್ಲಿ ಇರುವುದು ಕೂಡ ಅದೇ! 


ಇದರಲ್ಲಿ ಇರುವುದೇ ಬರೀ ಮೂರು ಜನ.ಮತ್ತೊಂದು ಮಾತಾಡದ ಹೆಣ,Of course ಹೆಂಗಸಿನದ್ದೇ ಹೆಣ..! ಮತ್ತು ಆ ಮೂವರ ಕಥೆಯನ್ನು ಬೆಸೆದಿರುವ ಆ ಒಂದು ಸುದೀರ್ಘ ರಾತ್ರಿ! 


ಕಾದಂಬರಿಯೊಳಗಿನ ಸೀರಿಯಲ್ ಕಿಲ್ಲರ್ ನಿಜವಾಗಿಯೂ ಇದ್ದಾನೆಯೇ..? ಆ ನಿಗೂಢ ಮನೆಯೊಳಗೆಯೇ ಇದ್ದಾನೆಯೇ?ಅಥವಾ ಲೇಖಕನೇ ನಿಜವಾದ ಸೀರಿಯಲ್ ಕಿಲ್ಲರ್ ಆಗಿದ್ದು ತನ್ನ ಅನುಭವದಿಂದಲೇ ಕಾದಂಬರಿ ಬರೆದಿದ್ದಾನೆಯೇ?! ಬರೀ ಕಲ್ಪನೆಯಿಂದಲೇ ನೋಡದ,ಅನುಭವಿಸದ ಕಥೆಯೊಂದನ್ನು ಮನಮುಟ್ಟುವಂತೆ ಬರೆಯಲು ಸಾಧ್ಯವೇ!?


ಎಲ್ಲಕ್ಕಿಂತ ಹೆಚ್ಚಾಗಿ ಆ ರಾತ್ರಿ ಏನಾಗುತ್ತದೆ..? 


ಕಥೆ ಹೇಳಲಾರೆ.ಈ ಹೊಸ Mystery Crime Thriller ಮಲಯಾಳಂ ಮೂವಿ #Irul Netflix ನಲ್ಲಿದೆ.ನೋಡಿ ನಿಮಗೂ ಇಷ್ಟ ಆಗಬಹುದು.. 


Movie_Review

Ab Pacchu


Comments

Popular posts from this blog

ಗಗನದ ಸೂರ್ಯ

The Priest.!

ಒಂದು ಉಗ್ರ ಪ್ರತಿಭಟನೆ