Ishq(not a love story!)
#Ishq (not a love story!)
ಒಂದು ಪ್ರೇಮದ ಕಥೆ ಇಲ್ಲಿ ಮೊದಲ ಮುತ್ತಿನ ಕಥೆಯೊಂದಿಗೆ ಆರಂಭವಾಗುತ್ತದೆ!
ಪಬ್ಲಿಕ್ ಪ್ಲೇಸ್ ಅಲ್ಲಿ ರಾತ್ರಿ ವೇಳೆ ಕಾರ್ ನೊಳಗೆ ಪರಸ್ಪರ ಮುತ್ತುಗಳನ್ನು Exchange ಮಾಡುವ ವೇಳೆಯಲ್ಲಿ.. ಯುವ ಪ್ರೇಮಿಗಳಿಬ್ಬರು ರೆಡ್ ಹ್ಯಾಂಡ್ ಆಗಿ ಪಬ್ಲಿಕ್ ಗೆ ಸಿಕ್ಕಿ ಬೀಳುತ್ತಾರೆ!
ಪಬ್ಲಿಕ್ ಎನ್ನುವುದಕ್ಕಿಂತ ಕಿಡಿಗೇಡಿಗಳು ಎಂದರೆ ಹೆಚ್ಚು ಸರಿಯಾಗಿರುತ್ತದೆ.
ಆ ನಂತರ ಶೇಕಡ 40% ಭಾಗ ಮೂವಿಯ ಕಥೆ ಕಾರ್ ನ ಒಳಗೆಯೇ ನಡೆದು ಬಿಡುತ್ತದೆ!
ಇದು ಪ್ರೇಮಿಗಳಿಬ್ಬರ ಕಥೆ ಆದರೂ..
ಅದಕ್ಕಿಂತ ಹೆಚ್ಚಾಗಿ ಇದು Revenge ನ ಅದರಲ್ಲೂ ಬಹಳ ಸೊಗಸಾಗದ Sweet Revenge ನ ಕಥೆ ಇದು.
ಚೆನ್ನಾಗಿದೆ..
ತುಂಬಾನೇ ಚೆನ್ನಾಗಿದೆ ಈ ಮೂವಿಯ ಕಥೆ.
ಮೊದಲ ಭಾಗದಲ್ಲಿ ಯಾವಾಗೊಮ್ಮೆ ಈ ಕಥೆ ಆದಷ್ಟು ಬೇಗ ಮುಗಿದು ಹೋಗಲಿ ಎಂದು ಅನ್ನಿಸುವಂತೆ ಮಾಡುವ ಮೂವಿ... ಎರಡನೆಯ ಭಾಗದಲ್ಲಿ ಇನ್ನಷ್ಟು ಇರಬಾರದಿತ್ತೇ ಎಂದು ಮಾಡಿಬಿಡುತ್ತದೆ.
ರಿವೇಂಜ್ ಇಷ್ಟ ಆಗುತ್ತದೆ.
ಜೊತೆ ಜೊತೆಗೆಯೇ ಬಹಳ ಒಳ್ಳೆಯ ಮೆಸೇಜ್ ಕೂಡ ಇದೆ.
ಪ್ರೀತಿಗೆ ಸಂಬಂಧಿಸಿದಂತೆ ಪ್ರೇಮಿಸುವವರ ನಿಯತ್ತು, ನಂಬಿಕೆಯನ್ನು ಕೂಡ ಇದು ಕೊನೆಯಲ್ಲಿ ಬಹಳ ಚೆನ್ನಾಗಿ ಪ್ರಶ್ನೆ ಮಾಡುತ್ತದೆ!!
2019 ರಲ್ಲಿ ಬಂದಂತಹ ಈ Romantic Thriller ಮಲಯಾಳಂ ಮೂವಿ #Ishq ಅನ್ನು Anuraj Manohar ನಿರ್ದೇಶಿಸಿದ್ದಾರೆ. Shane Nigam, Ann Sheetal, Shine Tom Chacko,Leona Lishoy ಇದರಲ್ಲಿ ಅಭಿನಯಿಸಿದ್ದಾರೆ.ನೋಡಿ,ಈ ಮೂವಿ ನಿಮಗೂ ಇಷ್ಟ ಆಗಬಹುದು. ಇದು Prime ನಲ್ಲಿ ಇದೆ.
#Movies
Ab
Comments
Post a Comment