Iyobinte Pusthakam
#Iyobinte_Pusthakam!
ಕಾಡು,ಕ್ರೌರ್ಯ,ಕೊಲೆ,ಹೋರಾಟ,ಹೊಡೆದಾಟ,ಸೇಡು,ಸಂಚು, ಮುಗಿಯದ ಅತ್ಯಾಚಾರ,ನಿಲ್ಲದ ಅನಾಚಾರ...ನಡುವೆ ಒಂದು ಪ್ರೇಮ ಕಥೆ ಈ ಕಥೆ!
ಮುನ್ನಾರ್ ಹಾಗೂ ಪಶ್ಚಿಮ ಘಟ್ಟದ ಹಸಿರ ಸೆರಗಿನಲ್ಲಿ ಈ ಕಥೆ ನಡೆಯುತ್ತದೆ.1900 ರ ಕಾಲಮಾನದ ಕಥೆ.ಕುಟುಂಬವೊಂದರ ಆಂತರಿಕ ಕಾದಾಟ ದಟ್ಟ ಕಾಡಿನೊಳಗೆ ಒಂಚೂರು ಸದ್ದಿಲ್ಲದೆಯೇ ಇನ್ನು ಕೆಲವೊಮ್ಮೆ ಬಂದೂಕಿನ ಅತೀ ದೊಡ್ಡ ಸದ್ದಿನೊಂದಿಗೆಯೇ ನಡೆಯುತ್ತದೆ!
2014 ರಲ್ಲಿ ಬಂದಂತ ಈ ಮಲಯಾಳಂ ಥ್ರಿಲ್ಲರ್ ನಲ್ಲಿ Fahadh Faasil, Jayasurya, Lal, Isha Sharvani, Padmapriya, Lena,Soubin Shahir.. ಮುಂತಾದವರ ಬಹು ದೊಡ್ಡ ತಾರಾಗಣವಿದೆ.Amal Neerad ಇದನ್ನು ನಿರ್ದೇಶಿಸಿದ್ದಾರೆ. ಇದರ ಪಾತ್ರಗಳ ಹೆಸರುಗಳು Fyodor Dostoyevsky ಯ ರಷ್ಯನ್ ಕಾದಂಬರಿ The Brothers Karamazov ಆಧಾರಿತವಾದದ್ದು.ಈ ಮೂವಿ ಹಲವಾರು State Award ಗಳನ್ನು ಕೂಡ ಬಾಚಿಕೊಂಡಿದೆ.Movie Hotstar ನಲ್ಲಿ ಇದೆ.ಕೊನೆಯವರೆಗೆ ನೋಡುವ ಉಮೇದು ಇದ್ದರೆ #Iyobinte_Pusthakam ಇಷ್ಟವಾಗಬಹುದು.
#Movies
Ab
Comments
Post a Comment